ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

Filed under: Kannada, Tech related Tuesday, March 6th, 2012  By  |
ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವಿಂಡೋಸ್ ಫೋನಿಗೆ ತಂತ್ರಾಂಶ ತಯಾರಿ [...]

ನನ್ನ ಗಣಕಾವಲೋಕನ – ೪

Filed under: Tech related Tuesday, May 31st, 2011  By  |

ಪಿಡಿಪಿ-11 ರಿಂದ ಪಿಸಿಗೆ ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್ ಕಿರಣವನ್ನು ಅತಿ ಕಡಿಮೆ ಸಮಯದಲ್ಲಿ ಹಾಯಿಸಿ ಅದರಿಂದ ಹೊಮ್ಮುವ ರೋಹಿತವನ್ನು (spectrum) ಪಡೆಯಬಹುದಿತ್ತು. ಅದನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಈ ಉಪಕರಣವನ್ನು ನಿಯಂತ್ರಿಸಿ ಮಾಹಿತಿ ಸಂಗ್ರಹಿಸುತ್ತಿದ್ದುದು ಒಂದು ಪಿಡಿಪಿ-11 ಗಣಕ.  ಎಲ್ಲ ಉಪಕರಣಗಳಂತೆ ಅದೂ ಸ್ವಲ್ಪ ಸಮಯದ ನಂತರ ಕೈಕೊಡಲರಾಂಭಿಸಿತು. ಆ ಉಪಕರಣದಲ್ಲಿ [...]

ನನ್ನ ಗಣಕಾವಲೋಕನ–೩

Filed under: Tech related Sunday, May 29th, 2011  By  |

ಬಂತು ಖಾಸಾ ಗಣಕ   ಬಹುಶಃ ೧೯೮೬ ಇರಬೇಕು ಭಾರತಕ್ಕೆ ಖಾಸಾಗಣಕಗಳು (ಪರ್ಸನಲ್ ಕಂಪ್ಯೂಟರ‍್ = ಪಿಸಿ) ಕಾಲಿಟ್ಟವು. ಭಾಭಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಅವು ಕಾಲಿಟ್ಟವು. ಆದರೆ ಎರಡೇ ಎರಡು ಪಿಸಿಗಳು ಕಂಪ್ಯೂಟರ‍್ ವಿಭಾಗದಲ್ಲಿ ಬಂದು ಕುಳಿತಿದ್ದವು. ಬಹುಶಃ ಅವು ವಿಪ್ರೊ ಕಂಪೆನಿ ಉಚಿತವಾಗಿ ಕೊಟ್ಟಿದ್ದಿರಬೇಕು. ಅದರಲ್ಲಿ ಕಂಪ್ಯೂಟರ‍್ ವಿಬಾಗದ ತಂತ್ರಜ್ಞರು ಮಾತ್ರವೇ ಏನೋ ಮಾಡುತ್ತಿದ್ದರು. ಅದರ ಹೊರತಾಗಿ ಇಡಿ ಬಿಎಆರ್‌ಸಿಯಲ್ಲಿ ಇನ್ನೆಲ್ಲೂ ಪಿಸಿಗಳಿರಲಿಲ್ಲ. ಆಗಾಗಲೆ ನಾನು ಕೆಮಿಸ್ಟ್ರಿ ವಿಭಾಗದಲ್ಲಿ ಕಂಪ್ಯೂಟರ‍್ ತಜ್ಞ ಎಂಬ ಖ್ಯಾತಿ [...]

ನನ್ನ ಗಣಕಾವಲೋಕನ – ೨

Filed under: Tech related Sunday, April 24th, 2011  By  |

ಕಾರ್ಡ್‌ ಪಂಚಿಂಗ್ ಮತ್ತು ಪ್ಲಾಟರ‍್   ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು! ನಾವು ಕಂಪ್ಯೂಟರ‍್ ಪ್ರೋಗ್ರಾಂ ಮಾಡಲು ಕಾರ್ಡ್‌‌ಗಳನ್ನು ಬಳಸುತ್ತಿದ್ದೆವು ಅಂದಿದ್ದೆನಲ್ಲ. ಒಂದು ಸಾಲಿನಲ್ಲಿ ಒಂದು [...]

ನನ್ನ ಗಣಕಾವಲೋಕನ – ೧

Filed under: Tech related Saturday, April 23rd, 2011  By  |

ಆರಂಭದ ದಿನಗಳು ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ ಕಾರ್ಡ್‌‌ಪಂಚಿಂಗ್ ಮಾಡಬೇಕಾದವುಗಳು ಇಂತಹವುಗಳನ್ನೆಲ್ಲ ನಾನು ಬಳಸಿದ್ದೇನೆ. ಗಣಕಗಳ ಜೊತೆ ನನ್ನ ದೀರ‍್ಘ ಒಡನಾಟವನ್ನು ಹಲವು ಕಂತುಗಳಲ್ಲಿ ಈ ಬ್ಲಾಗ್ ತಾಣದಲ್ಲಿ ನೀಡಲು ತೀರ್ಮಾನಿಸಿದ್ದೇನೆ. ಗಣಕಗಳ ಬಗ್ಗೆ ನಾನು ಮೊತ್ತಮೊದಲ ಬಾರಿಗೆ ಓದಿದ್ದು ಎಂದರೆ ಪಾವೆಂ ಸಂಪಾದಕತ್ವದಲ್ಲಿ ಬರುತ್ತಿದ್ದ ಕಸ್ತೂರಿಯಲ್ಲಿ. ಅದರಲ್ಲಿ ಓದುಗರು [...]

ಪಿತ್ತ ಸಚಿವ!?

Filed under: Featured Article, General Tuesday, September 30th, 2008  By  |

ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)

ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ್ರ

Filed under: Featured Article, Tech related Saturday, June 14th, 2008  By  |

ಎಲ್ಲರೂ ಮುಂದೆ, ನಾನೊಬ್ಬ ಹಿಂದೆ

Filed under: Featured Article, Tech related Sunday, June 8th, 2008  By  |

ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ

ಕನ್ನಡ ಬ್ಲಾಗೋತ್ತಮರ ಸಭೆ

Filed under: Featured Article, General Sunday, March 9th, 2008  By  |

ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.

ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್

Filed under: Featured Article, Tech related Friday, January 25th, 2008  By  |

ಮೈಕೇಲ್ ಕಪ್ಲಾನ್ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು “ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ”.

RSS Feeds