Home » Kannada » Archive by categoryGeneral (Page 4)

ಪಿ. ಶೇಷಾದ್ರಿಯವರ "ಬೇರು"

ನಿನ್ನೆ (ಜನವರಿ ೧, ೨೦೦೬) ಪಿ. ಶೇಷಾದ್ರಿಯವರ "ಬೇರು" ಚಲನಚಿತ್ರ ನೋಡಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ "ಚಿತ್ರ ತುಂಬ ಚೆನ್ನಾಗಿದೆ". ಸರಕಾರಿ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಮಾಣಿಕ ಅಧಿಕಾರಿ ಹೇಗೆ ತಾನೂ ಎಲ್ಲರಂತಾಗುತ್ತಾನೆ ಎಂಬುದನ್ನು ಚಿತ್ರ ತುಂಬ ಚೆನ್ನಾಗಿ ಮೂಡಿಸಿದೆ. ಇಂತಹ ಚಿತ್ರ ಎಲ್ಲರಿಗೆ ನೋಡಲು ಚಿತ್ರ ಮಂದಿರಗಳಲ್ಲಿ ಸಿಗುವುದಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಇಂತಹ ಪರಿಸ್ಥಿತಿಗೆ ನಾವೆಲ್ಲರೂ ಕಾರಣ ಎಂಬುದನ್ನು ಚಿತ್ರದ ಕೊನೆಯಲ್ಲಿ ಸಂವಾದದಲ್ಲಿ ಭಾಗವಹಿಸಿದ ಶೇಷಾದ್ರಿಯವರು ಬಹಳ ಚೆನ್ನಾಗಿ ವಿವರಿಸಿದರು. "ತಬರನ ಕಥೆ" ಚಲನಚಿತ್ರ ಮತ್ತು "ನಮ್ಮೊಳಗೊಬ್ಬ ನಾಜೂಕಯ್ಯ" ನಾಟಕಗಳ ಪ್ರಭಾವ ಚಿತ್ರದಲ್ಲಿ ಗಾಢವಾಗಿದೆ. ಆದರೂ ಚಿತ್ರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. "ಬೇರು" ಎಂಬ ಶೀರ್ಷಿಕೆ ತುಂಬ ಸೂಕ್ತವಾಗಿದೆ. ನಮ್ಮ ಜನಜೀವನದಲ್ಲಿ ಬ್ರಷ್ಟಾಚಾರದ ಬೇರು ಎಷ್ಟು ಆಳವಾಗಿ ಇಳಿದಿದೆ, ಅದನ್ನು ಕಿತ್ತೆಸೆಯಲು ಯಾರಿಂದಲೂ ಅಸಾಧ್ಯ ಎಂಬುದನ್ನು ಇದು ಸಂಕೇತವಾಗಿ ಸೂಚಿಸುತ್ತದೆ. ಎಲ್ಲರೂ ನೋಡಲೇ ಬೇಕಾದ ಚಿತ್ರ. ಇದರ ಪ್ರದರ್ಶನವನ್ನು ಆಯೋಜಿಸಿದ "ಈಕವಿ" ಮತ್ತು ವಿಪ್ರೋ ಕನ್ನಡ ಬಳಗಕ್ಕೆ ಧನ್ಯವಾದಗಳು.
Continue reading

ನಾನು ಪ್ರತಿಭಾನ್ವಿತನಲ್ಲ !

ಕನ್ನಡಪ್ರಭ ಪತ್ರಿಕೆಯಲ್ಲಿ ಖ್ಯಾತ ವಿಜ್ಞಾನ ಲೇಖಕರು ಹಾಗೂ ಅತ್ಮೀಯರೂ ಆದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಅಂಕಣ ಪ್ರತಿ ಭಾನುವಾರ ಇದೆ. ಇಂದಿನ ಅಂಕಣದಲ್ಲಿ ಆವರು ಬರೆಯುತ್ತಾರೆ -"ಭಾರತದ ಎಲ್ಲ ಪ್ರತಿಭಾನ್ವಿತರಂತೆ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಉಳಿದು ಮತ್ತಷ್ಟು ಕೀರ್ತಿ ಸಂಪಾದಿಸಿದವ". ಇಲ್ಲಿ ಅವರು ಹೇಳುತ್ತಿರುವುದು ಅಮೇರಿಕಾದಲ್ಲಿರುವ ಒಬ್ಬ ಭಾರತೀಯ ಸಂಜಾತ ವಿಜ್ಞಾನಿಯ ಬಗ್ಗೆ. ಸುಧೀಂದ್ರರ ಪ್ರಕಾರ ಅಮೇರಿಕಾಕ್ಕೆ ತೆರಳದೆ ಇಲ್ಲೇ ಉಳಿದಿರುವ ನಾವು ಯಾರೂ ಪ್ರತಿಭಾನ್ವಿತರಲ್ಲ.
Continue reading

ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.
Continue reading

ವೆಂಕಟಸುಬ್ಬಯ್ಯನವರಿಗೆ ಅಭಿನಂದನೆಗಳು

"ಇಗೋ ಕನ್ನಡ" ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.
Continue reading

ಮುಂಬಯಿ ಪೋಲೀಸರ ಕಾರ್ಯವೈಖರಿ

ಒಮ್ಮೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?
Continue reading

ನಾಗೇಶ ಹೆಗಡೆಯವರಿಗೆ ಅಭಿನಂದನೆಗಳು

ಈ ದಿನ ಬೆಳಗ್ಗೆ ಪ್ರಜಾವಾಣಿ ಓದುತ್ತಿದ್ದಂತೆ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. ನಮ್ಮ ನೆಚ್ಚಿನ ಹಾಗೂ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರಿಗೆ ಕರ್ನಾಟಕ ಸರಕಾರವು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು.
Continue reading

ದೀಪ ಬೆಳಗಿ ಉದ್ಘಾಟಿಸುವುದು

ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗುವ ಮೂಲಕ ಆಗುತ್ತದೆ. ಪೂಜೆ ಮಾಡಲು ನಿರಾಕರಿಸುವ ವಿಚಾರವಾದಗಳೂ ದೀಪ ಬೆಳಗುವುದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ದೀಪ ಎಂದರೆ ಬೆಳಕು ಎಂದರೆ ಜ್ಞಾನದ ಸಂಕೇತ. ಖಂಡಿತ ಹೌದು. ಅದನ್ನು ಎಲ್ಲರಿಗಿಂತ ಮೊದಲು ಹೇಳಿದ್ದು ಉಪನಿಷತ್ತಿನಲ್ಲಿ ."ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ. ಅರೆಬೆಂದ ವಿಚಾರವಾದಿಗಳ ಮಾತು ಹಾಗಿರಲಿ. ಈಗ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ಬಗ್ಗೆ ಬರೋಣ. ಮೊದಲನೆಯದಾಗಿ ದೀಪ ಬೆಳಗಲು ಅವರು ಬಳಸುವುದು ಕ್ಯಾಂಡಲನ್ನು. ಅದೇಕೋ ನನಗೆ ಸರಿ ಕಾಣುವುದಿಲ್ಲ. ಅದರ ಬದಲು ಒಂದು ಚಿಕ್ಕ ಹಣತೆ ತಂದರೆ ಚೆನ್ನಾಗಿರುತ್ತದಲ್ಲವೇ? ದೀಪ ಬೆಳಗುವುದು ಭಾರತೀಯ ಪದ್ಧತಿಯಾಗಿರುವಾಗ ಅದನ್ನೂ ಭಾರತೀಯವಾಗಿಯೇ ಮಾಡಿದರೆ ಚೆನ್ನಾಗಿರುತ್ತದಲ್ಲವೇ?
Continue reading