Home » Kannada » Archive by categoryGeneral (Page 2)

ಕನ್ನಡದಿಂದ ಬದುಕುವ ತಮಿಳು ಟಿವಿ ಚಾನೆಲ್

ಇತ್ತೀಚೆಗೆ ನನ್ನ ಡಿಶ್ ಟಿವಿಯ ವಾರ್ಷಿಕ ಚಂದಾ ಮುಗಿದಿತ್ತು. ಅದನ್ನು ನವೀಕರಿಸುವುದೋ ಬೇಡವೋ ಎಂಬ ಆಲೋಚನೆಯಲ್ಲಿದ್ದಾಗ ಅವರು ಯಾವ ಯಾವ ಚಾನೆಲುಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ವಿಮರ್ಶೆ ಮಾಡಿದೆ. ಅವರು ನೀಡುವ ಚಾನೆಲುಗಳ ಪಟ್ಟಿಯಲ್ಲಿ ಕನ್ನಡದ ಉಚಿತ ಖಾಸಗಿ ಚಾನೆಲು ಯಾವುದೂ ಇಲ್ಲ. ಸರಕಾರವು ಉಚಿತವಾಗಿ ನೀಡುತ್ತಿರುವ ದೂರದರ್ಶನದ ಚಂದನ ಮಾತ್ರ ಇದೆ. ದೂರದರ್ಶನದ ಎಲ್ಲ ಚಾನೆಲುಗಳು ಉಚಿತವೇ. ಕನ್ನಡ ಮಾತ್ರವಲ್ಲ.
Continue reading

ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ ಬರೆದರು. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.
Continue reading

ನಂ.1 ಆಗುವುದು ಹೇಗೆ?

ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.
Continue reading

ಕಾರಾಗೃಹವನ್ನೂ ಭಾರತಕ್ಕೆ ಹೊರಗುತ್ತಿಗೆ ನೀಡಿ!

ಭಾರತವು ಹೊರಗುತ್ತಿಗೆ (ಔಟ್‌ಸೋರ್ಸಿಂಗ್‌) ಯಲ್ಲಿ ತುಂಬ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅಮೇರಿಕ ದೇಶದಲ್ಲಂತೂ ಸರಕಾರಿ ಕಾಲ್‌ಸೆಂಟರ್‌ಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಬಾರದು ಎಂದು ಒಂದು ರಾಜ್ಯದಲ್ಲಿ ಕಾನೂನನ್ನೇ ಮಾಡಿದ್ದಾರೆ. ಈ ಹೊರಗುತ್ತಿಗೆ ಎನ್ನುವುದು ಕೇವಲ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿಲ್ಲ. ಕ್ಲಿನಿಕಲ್ ಪರೀಕ್ಷೆಗಳನ್ನೂ ಭಾರತಕ್ಕೆ ರವಾನಿಸಲು ತೊಡಗಿದ್ದಾರೆ. ಅದೇನು ಮಹಾ? ಕ್ರಿಶ್ಚಿಯನ್ ಪ್ರಾರ್ಥನೆಗಳೂ ಭಾರತಕ್ಕೆ ಬರುತ್ತಿವೆ. ಅಮೇರಿಕ ಮಾತ್ರವಲ್ಲ. ಇಂಗ್ಲೆಂಡಿನಿಂದಲೂ ಪ್ರಾರ್ಥನಾ ಸೇವೆಗಳನ್ನು ಭಾರತೀಯ ಪಾದರಿಗಳು ಪಡೆದುಕೊಳ್ಳುತ್ತಿದ್ದಾರೆ.
Continue reading

ಉಷಾಕಿರಣದ ದಿವ್ಯಮರಣ

ವಿಆರ್‌ಎಲ್ ಗ್ರೂಪ್‌ನ ಪತ್ರಿಕೆಗಳನ್ನು ಟೈಂಸ್ ಆಫ್ ಇಂಡಿಯಾದವರು ಕೊಂಡುಕೊಂಡ ಸುದ್ದಿ ನಿಮಗೆಲ್ಲ ಗೊತ್ತೇ ಇರಬೇಕು. ಈ ಗುಂಪಿನ ಪತ್ರಿಕೆಗಳೆಂದರೆ ವಿಜಯ ಕರ್ನಾಟಕ, ವಿಜಯ ಟೈಂಸ್ ಮತ್ತು ಉಷಾಕಿರಣ. ಈ ಪತ್ರಿಕೆಗಳನ್ನು ಟೈಂಸ್‌‌ನವರು ಕೊಂಡುಕೊಂಡ ಸುದ್ದಿ ಹೊರಬರುತ್ತಿದ್ದಂತೆ ಜನರಾಡಿಕೊಂಡುದೇನೆಂದರೆ ವಿಜಯ ಟೈಂಸ್ ಮತ್ತು ಉಷಾಕಿರಣಗಳ ಗತಿ ಮುಗಿಯಿತು ಎಂದು. ಟೈಂಸ್‌ನವರಿಗೆ ಒಂದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆ ಬೇಡ. ಆದುದರಿಂದ ಉಷಾಕಿರಣ ಬೇಡ. ಇಂಗ್ಲೀಶ್ ಪತ್ರಿಕೆಯಂತೂ ತಮ್ಮದೇ ಇದೆಯಲ್ಲ. ಹಾಗಾಗಿ ವಿಜಯ ಟೈಂಸೂ ಬೇಡ. ಉಳಿಯುವುದು ವಿಜಯ ಕರ್ನಾಟಕ ಮಾತ್ರ ಎಂದು ಎಲ್ಲರೂ ಆಡಿಕೊಂಡರು. ಆದರೆ ಕೂಡಲೇ ಹಾಗೇನೂ ಆಗಲಿಲ್ಲ.
Continue reading

ಮಿಥ್ಯಾನಿವೇಶನದ ವ್ಯಾಪಾರವೆಂಬ ಮೋಸ

"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರು ಇದ್ದೇ ಇರುತ್ತಾರೆ". ಈ ಮಾತನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವೆಂದರೆ ಈ ಸುದ್ದಿ. ಕೊಲ್ಕತ್ತದ ಯಾರೋ ದಂಪತಿಗಳು ಚಂದ್ರನ ಮೇಲೆ ನಿವೇಶನ ಕೊಂಡುಕೊಂಡಿದ್ದಾರೆ. ಇಂತಹ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹಿಂದೊಮ್ಮೆ ಉಷಾಕಿರಣ ಪತ್ರಿಕೆಯಲ್ಲಿ ಇಂತಹದೇ ಸುದ್ದಿ ಪ್ರಕಟವಾಗಿದ್ದಾಗ ಪತ್ರಿಕೆಯ ಸಂಪಾದಕರಿಗೆ ನಾನೊಂದು ಪತ್ರ ಬರೆದಿದ್ದೆ. ಅದನ್ನು ಕೆಳಗೆ ನಕಲಿಸಿದ್ದೇನೆ.
Continue reading

ಗೂಗ್ಲ್‌ನಲ್ಲಿ ಕಂಡಂತೆ ಸಂಡೂರಿನ ಗಣಿಗಾರಿಕೆ

ಸಂಡೂರಿನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬದ್ಧವಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸುತ್ತಿವೆ. ಹಣದ ವ್ಯವಹಾರ, ಲಂಚದ ಸುದ್ದಿ ಕರ್ನಾಟಕದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿವೆ. ಈ ಸಂದರ್ಭದಲ್ಲಿ ನಾನು ಸುಮ್ಮನೆ ಗೂಗ್ಲ್ ಅರ್ಥ್‌ನಲ್ಲಿ ಸಂಡೂರು ಸುತ್ತಮುತ್ತ ಹೇಗೆ ಕಾಣಿಸುತ್ತಿದೆ ಎಂದು ನೋಡಿದೆ. ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಭೂದೇವಿಯ ಮೇಲಿನ ಅತ್ಯಾಚಾರಕ್ಕೆ ಪ್ರತ್ಯೇಕ ಸಾಕ್ಷಿ ಬೇಕಾಗಿಲ್ಲ ತಾನೆ? ಈ ಚಿತ್ರಗಳು ಸುಮಾರು ಒಂದು ವರ್ಷದಷ್ಟು ಹಳೆಯವಿರಬೇಕು ಎಂದು ನನ್ನ ಅಂದಾಜು. ಗೂಗ್ಲ್ ಅರ್ಥ್‌ನ ಎಲ್ಲ ಚಿತ್ರಗಳು ಸುಮಾರು ಆರು ತಿಂಗಳಿನಿಂದ ಒಂದು ವರ್ಷದಷ್ಟು ಹಳೆಯವಿವೆ. ಅಂತೆಯೇ ಈ ಚಿತ್ರಗಳು ಸ್ವಲ್ಪ ಹಳೆಯವಿರಬೇಕು. ಈ ಚಿತ್ರಗಳಲ್ಲಿ ಬೇಕೆಂದೇ ಸ್ವಲ್ಪ ಕಾಡು ಕೂಡ ಬರುವಂತೆ ನಾನು ವಿನ್ಯಾಸ ಮಾಡಿದ್ದೇನೆ. ಕಾಡು ಇರುವ ಮತ್ತು ಇಲ್ಲದ ಜಾಗಗಳನ್ನು ಹೋಲಿಸಿ ನೋಡಿ. ಕಾಡು ಯಾವ ರೀತಿ ನಾಶವಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಒಂದು ವರ್ಷದ ನಂತರ ಇನ್ನೊಮ್ಮೆ ಇದೇ ಜಾಗದ ಚಿತ್ರಗಳನ್ನು ತೆಗೆದರೆ ಇನ್ನೆಷ್ಟು ಪರಿಸರ ನಾಶವಾಗಿದೆ ಎಂದು ಹೋಲಿಸಿ ನೋಡಬಹುದು.
Continue reading

ಪುತ್ರಿಯರ ದಿನ

ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -"ಪುತ್ರಿಯರ ದಿನ". ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: , ). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು "ಹೋಂವರ್ಕ್‌" ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-
Continue reading

ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?
Continue reading

ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

ಬೆಂಗಳೂರಿನ ರೇಡಿಯೋ ಸಿಟಿ (91FM) ಯಲ್ಲಿ ಕನ್ನಡ ಕಾರ್ಯಕ್ರಮಗಳಿಲ್ಲ ಎಂದು ಹಲವಾರು ಕನ್ನಡ ಪ್ರೇಮಿಗಳು ಆಗಾಗ ದೂರು ನೀಡುತ್ತಿದ್ದಾರೆ. ಇತ್ತೀಚೆಗೆ ನಾನು ಒಮ್ಮೆ ಯಾಕೋ ರೇಡಿಯೋ ಸಿಟಿ ಹಾಕಿದಾಗ ಆಶ್ಚರ್ಯವಾಯಿತು. ಕನ್ನಡ ಹಾಡು ಕೇಳಿ ಬರುತ್ತಿತ್ತು. ನಂತರ ಒಂದೆರಡು ದಿನ ಗಮನಿಸಿದಾಗ ಕಂಡು ಬಂದುದೇನೆಂದರೆ ರೇಡಿಯೋ ಸಿಟಿಯಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿವೆ ಎಂದು. ಬೆಳಿಗ್ಗೆ ಏಳು ಘಂಟೆಯ ಮೊದಲು ಭಕ್ತಿ ಗೀತೆ, ಮಧ್ಯಾಹ್ನ ಒಂದರಿಂದ ಮೂರು ಘಂಟೆ ವರೆಗೆ "ಮಲ್ಲಿಗೆ ಸರ್ಕಲ್", ಶನಿವಾರ ಬೆಳಿಗ್ಗೆ "ಬೆಂಗಳೂರು ಟಾಕೀಸ್", ಮತ್ತು ಭಾನುವಾರ ಬೆಳಿಗ್ಗೆ ಏಳರಿಂದ ಹತ್ತರ ವರೆಗೆ "ಚೌ ಚೌ ಬಾತ್" - ಇಷ್ಟು ನಾನು ಗಮನಿಸಿರುವ ಕನ್ನಡ ಕಾರ್ಯಕ್ರಮಗಳು. ಮೊನ್ನೆ ಭಾನುವಾರ (ಜೂನ್ ೧೧ರಂದು) ಚೌಚೌ ಬಾತ್ ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದೆ. ನಂದಕುಮಾರ್ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು -ಇದು ನಾನು ಹೇಳುತ್ತಿರುವುದಲ್ಲ, ಕಾರ್ಯಕ್ರಮ ಕೇಳಿದ ಹಲವು ಜನ ಹೇಳಿದ್ದು ಮತ್ತು ಫೋನು ಹಾಗೂ ಇ-ಮೈಲ್ ಮೂಲಕ ತಿಳಿಸಿದ್ದು.
Continue reading