ನಿಜ ಹೇಳಬೇಕೆಂದರೆ!
ನಿಜ ಹೇಳಬೇಕೆಂದರೆ, ನನಗೆ ಈ "ನಿಜ ಹೇಳಬೇಕೆಂದರೆ" ಎಂಬ ಮಾತಿನ ದುರುಪಯೋಗ ಕೇಳಿ ಕೇಳಿ ಸುಸ್ತಾಗಿದೆ. ನಿಜ ಹೇಳಬೇಕೆಂದರೆ, ಒಮ್ಮೆ ಕನ್ನಡದ ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಜೊತೆ ಕನ್ನಡ ಭವನದಲ್ಲಿ "ಮನೆಯಂಗಳದಲ್ಲಿ ಮಾತುಕತೆ" ಕಾರ್ಯಕ್ರಮವಿತ್ತು. ನಿಜ ಹೇಳಬೇಕೆಂದರೆ, ನಾನು ಅಲ್ಲಿ ವೀಕ್ಷಕನಾಗಿ ಕುಳಿತು ಕೇಳುತ್ತಿದ್ದೆ. ಪ್ರತಿ ಪ್ರಶ್ನೆಗೂ ಅವರ ಉತ್ತರ "ನಿಜ ಹೇಳಬೇಕೆಂದರೆ" ಎಂದು ಪ್ರಾರಂಭವಾಗುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಒಂದು ಅನುಮಾನ -ಅದುವರೆಗೆ ನಿಸಾರ್ ಅಹಮದ್ ಅವರು ಬರೆದ ಕವನ, ಲೇಖನ, ಮಾಡಿದ ಭಾಷಣಗಳೆಲ್ಲ ಸುಳ್ಳೆ? ನಿಜ ಹೇಳಬೇಕೆಂದರೆ, ನಿಸಾರ್ ಅಹಮದ್ ಅವರೊಬ್ಬರೇ ಅಲ್ಲ, ಈ "ನಿಜ ಹೇಳಬೇಕೆಂದರೆ" ಎಂಬ ಮಾತನ್ನು ಬಹಳಷ್ಟು ಮಂದಿ ಬಹುತೇಕ ಭಾಷಣಗಳಲ್ಲಿ ಬಳಸುವುದನ್ನು ಕೇಳಿ ಕೇಳಿ ಬೇಸತ್ತಿದ್ದೇನೆ.
Continue reading