Home »
Archive by categoryKannada
ಗಣಕಾಜ್ಞಾನಿಗಳೊಡನೆ ಗುದ್ದಾಟ ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ ಹಂತದಲ್ಲಿ ಹೇಗೆ ಆಡಿ ಗೆಲ್ಲಬೇಕು, ಗಣಿತ ಅಥವಾ ರಸಾಯನ ವಿಜ್ಞಾನದ ಸಮೀಕರಣಗಳನ್ನು ಹೇಗೆ ಮೂಡಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು, ಜ್ಞಾನ ಹಂಚುವಿಕೆ ಎಲ್ಲ ಆಗುತ್ತಿದ್ದವು. ಒಂದು ಹೊಸ ವಿಷಯ...
Continue reading
December 14, 2020 U B Pavanaja
Kannada, Tech related
2 Comments
ಮನೆಗೆ ಬಂತು ಪಿ.ಸಿ. ಬಹುಶಃ 1989 ರ ಸಮಯ. ಬಿಎಆರ್‌ಸಿಯು ವಿಜ್ಞಾನಿಗಳಿಗೆ ತಮ್ಮ ಮನೆಯಲ್ಲಿ ಬಳಸಲು ಖಾಸಾ ಗಣಕ ಅರ್ಥಾತ್ ಪರ್ಸನಲ್ ಕಂಪ್ಯೂಟರ್ ಅಥವಾ ಸರಳವಾಗಿ ಪಿಸಿ ಕೊಳ್ಳಲು ಬಡ್ಡಿಯಿಲ್ಲದ ಸಾಲ ಕೊಡಲು ಪ್ರಾರಂಭಿಸಿತು. ಆಗ ನಾನು ಒಂದು ಪಿಸಿ ಕೊಂಡುಕೊಂಡೆ. ಅದು ಪಿಸಿ-ಎಕ್ಸ್‌ಟಿ ಆಗಿತ್ತು. ಅದರಲ್ಲಿದ್ದುದು 20 ಎಂ.ಬಿ.ಯ ಹಾರ್ಡ್‌ಡಿಸ್ಕ್ ಮತ್ತು 640 ಕೆ.ಬಿ.ಯ ಫ್ಲಾಪಿ ಡ್ರೈವ್. ಆಗಿನ್ನೂ ಬಣ್ಣದ ಪರದೆ ಅಂದರೆ ಕಲರ್ ಮೋನಿಟರ್‌ಗಳು...
Continue reading
December 3, 2020 U B Pavanaja
Kannada, Tech related
No Comment
ಕನ್ನಡ ಭಾಷೆಯನ್ನು ರಕ್ಷಿಸಲು ಹೋರಾಡಲು ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆಯೋ ಅದಕ್ಕಿಂತಲೂ ಹೆಚ್ಚು ವೇದಿಕೆ, ಪಡೆಗಳಿವೆ. ಹಲವು ಮಂದಿಗೆ ಇದು ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಹಾಗಿದ್ದರೂ ಕನ್ನಡದ ಸ್ಥಿತಿ ಉತ್ತಮವಾಗಿಲ್ಲ. ಈ ಹೋರಾಟಗಾರರು ಸಾಮಾನ್ಯವಾಗಿ ಪ್ರತಿಭಟನೆಗಳನ್ನು ಏರ್ಪಡಿಸುವಲ್ಲಿ ಸಿದ್ಧಹಸ್ತರು. ಪ್ರತಿಭಟನೆಗಳು ಅತೀ ಅಗತ್ಯ ಎಂದು ವಾದಿಸುವವರು. ಪ್ರತಿಭಟನೆ ಹೋರಾಟಗಳಿಂದ ಕನ್ನಡ ಭಾಷೆಯ ಉಳಿದು ಬೆಳೆಯುತ್ತದೆಯೇ? ಅದು ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಈ ಎಲ್ಲ ವೇದಿಕೆ, ಪಡೆಗಳು ಬಾಗಿಲು ಹಾಕಬೇಕಾಗಿತ್ತು....
Continue reading
June 14, 2020 U B Pavanaja
Kannada, Tech related
No Comment
ನಾನು ಗ್ಯಾಜೆಟ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕಾಗಿ ಆಗಾಗ ದೆಹಲಿಗೆ ಹೋಗುತ್ತಿರುತ್ತೇನೆ. ಹಾಗೆ ಹೋದಾಗಲೆಲ್ಲ ಅಲ್ಲಿನ ಟ್ಯಾಕ್ಸಿ ಚಾಲಕರೊಡನೆ ಮಾತನಾಡುವುದು ನನ್ನ ಹವ್ಯಾಸ. ಇದರಿಂದಾಗಿ ಅಲ್ಲಿಯ ಜನಸಾಮಾನ್ಯರ ಅಭಿಪ್ರಾಯ ಏನು ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು -“ನೀವು ಕಳೆದ ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದಿರಿ? ದೆಹಲಿಯಲ್ಲಿ ಕೇಜ್ರಿವಾಲರಿಗೆ ಮತ ನೀಡಿದ್ದಿರಾ? ಕೇಂದ್ರದಲ್ಲಿ ಮೋದಿಗೆ ನೀಡಿದ್ದಿರಾ? ನೀವು ಅವರ ಆಡಳಿತದಿಂದ ಸಂತೃಪ್ತರಾಗಿದ್ದೀರಾ? ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ...
Continue reading
January 24, 2019 U B Pavanaja
General, Kannada
No Comment
ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಅನ್ನು ೨೦ ವರ್ಷ ಓಡಿಸಿ ನಂತರವೂ ಲಾಭಕ್ಕೆ ಮಾರುತ್ತಿದ್ದರೆಂದರೆ ಈಗಿನ ಕಾಲದವರಿಗೆ ನಂಬಲು ಕಷ್ಟವಾಗಬಹುದು. ನಾನು ಆ ಕಾಲದವನು. ನನ್ನ ಬಜಾಜ್ ಸೂಪರ್ ಸ್ಕೂಟರಿನ ಟೂಲ್ ಬಾಕ್ಸ್‌ನಲ್ಲಿ ಕ್ಲಚ್ ಮತ್ತು ಬ್ರೇಕ್ ಕೇಬಲ್‌ಗಳು ಯಾವಾಗಲೂ ಇರುತ್ತಿದ್ದವು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಸ್ಪಾರ್ಕ್ ಪ್ಲಗ್ ಸ್ವಚ್ಛ ಮಾಡುವುದು, ಕೇಬಲ್ ಬದಲಿಸುವುದು...
Continue reading
July 13, 2018 U B Pavanaja
Kannada, Tech related
5 Comments
ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ. ಈ open...
Continue reading
June 26, 2018 U B Pavanaja
General, Kannada
2 Comments
ನಾನು ಈ ಪತ್ರವನ್ನು ಒಂದೂವರೆ ತಿಂಗಳ ಹಿಂದೆಯೇ ಬರೆಯಬೇಕಿತ್ತು. ಕೆಲವು ವಿಷಯಗಳಲ್ಲಿ ಸ್ಪಷ್ಟತೆಯ ಗೋಚರಕ್ಕಾಗಿ ಕಾದಿದ್ದೆ. ನಾನು ಈಗ ಸಿಐಎಸ್‌ನ ಉದ್ಯೋಗಿಯಾಗಿಲ್ಲ. ಈ ಬಗೆಗಿನ ಘೋಷಣೆ ಸಿಐಎಸ್‌ನ ಮಾಸಿಕ ಸುದ್ದಿಪತ್ರದಲ್ಲಿ ಬಂದಿದೆ. ನಾನು ಮಾರ್ಚ್ ೨೦೧೩ರಲ್ಲಿ ಸಿಐಎಸ್‌ನ ಎ೨ಕೆ ತಂಡಕ್ಕೆ ವಿಕಿಪೀಡಿಯದ ಕೆಲಸಗಳಿಗೆ ಸೇರಿದ್ದರೂ, ನಾನು ೨೦೦೪ರಿಂದಲೇ ವಿಕಿಪೀಡಿಯ ಸಂಪಾದಕನಾಗಿದ್ದೆ. ಕನ್ನಡ ವಿಕಿಪೀಡಿಯಕ್ಕೆ ಪ್ರಾರಂಭದಲ್ಲೇ ಸೇರಿದ್ದೇನೆ ಹಾಗೂ ನಾನು ೫ನೆಯ ಸಂಪಾದಕ. ಅಕ್ಟೋಬರ್ ೨೦೧೩ರ ತನಕ ನಾನು...
Continue reading
December 20, 2016 U B Pavanaja
Kannada, Tech related
5 Comments
ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ...
Continue reading
July 5, 2015 U B Pavanaja
General, Kannada
8 Comments
ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳನ್ನು ಓದುವಾಗ ಕೆಲವು ಪದಗಳನ್ನು ತಪ್ಪು ರೂಪದಲ್ಲಿ ಬಳಸಲಾಗಿದೆ ಎಂದು ಅನಿಸಿರಬಹುದಲ್ಲವೇ? ಉದಾಹರಣೆಗೆ ವಿಶೇಷ ಎಂಬ ಪದದ ಬದಲಿಗೆ ವಿಷೇಶ ಎಂದು ಬಳಸಿರುವುದು. ಹಲವು ಪದಗಳನ್ನು ತಪ್ಪಾಗಿ ಬಳಸುವುದನ್ನು ನಾವು ಪ್ರತಿದಿನವೂ ಎಲ್ಲ ಸ್ಥಳಗಳಲ್ಲೂ ಕಾಣುತ್ತಿರುತ್ತೇವೆ. ವಿಕಿಪೀಡಿಯವೂ ಇದಕ್ಕೆ ಹೊರತಲ್ಲ. ಇಂತಹ ಪದಗಳನ್ನು ಹುಡುಕಿ ಬದಲಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾವ ಯಾವ ಲೇಖನದಲ್ಲಿ ಇಂತಹ ತಪ್ಪು ರೂಪಗಳಿವೆ ಎಂದು ಮೊದಲು ಪ್ತತೆ ಹಚ್ಚಿ,...
Continue reading
June 9, 2015 U B Pavanaja
Kannada, Tech related
1 Comment
ಭೈರಪ್ಪನವರ “ಯಾನ” ಓದಿ ಮುಗಿಸಿದೆ. ಭೈರಪ್ಪ ಎಂದೊಡನೆ ಪುಸ್ತಕದ ಬಗ್ಗೆ ನಮ್ಮ ಊಹೆ, ಕಲ್ಪನೆ ತುಂಬ ಮೇಲ್ಮಟ್ಟದಲ್ಲಿರುತ್ತದೆ. ಅದರಲ್ಲೂ ಈ ಕಾದಂಬರಿ ಬರೆಯಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಾಲ ಕಳೆದುದು, ಇಸ್ರೋಗೆ ಹೋಗಿದ್ದು, ಪೈಲಟ್‌ಗಳ ಮಾತುಕತೆ ನಡೆಸಿದ್ದು -ಹೀಗೆಲ್ಲ ಅವರೇ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ. ಅವುಗಳ ಬಗ್ಗೆ ಪತ್ರಿಕೆಯಲ್ಲೀ ಈಗಾಗಲೆ ಬಂದಿದೆ. ಆದುದರಿಂದ ಅಂತರಿಕ್ಷಯಾನ, ಅದರಲ್ಲಿ ನಡೆಯುವ ಚಟುವಟಿಕೆಗಳು, ಅದರಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ, ಅಲ್ಲಿಯ ಜೀವನ,...
Continue reading
August 2, 2014 U B Pavanaja
General, Kannada
1 Comment