ಅಂತಾರಾಷ್ಟ್ರೀಯ ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ
ಬರೆದರು. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.