Home »
Kannada »
Archive by categoryTech related (Page 2)
ಕಾರ್ಡ್ ಪಂಚಿಂಗ್ ಮತ್ತು ಪ್ಲಾಟರ‍್ ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು! ನಾವು ಕಂಪ್ಯೂಟರ‍್ ಪ್ರೋಗ್ರಾಂ...
Continue reading
April 24, 2011 U B Pavanaja
Tech related
2 Comments
ಆರಂಭದ ದಿನಗಳು ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ ಕಾರ್ಡ್‌ಪಂಚಿಂಗ್ ಮಾಡಬೇಕಾದವುಗಳು ಇಂತಹವುಗಳನ್ನೆಲ್ಲ ನಾನು ಬಳಸಿದ್ದೇನೆ. ಗಣಕಗಳ ಜೊತೆ ನನ್ನ ದೀರ‍್ಘ ಒಡನಾಟವನ್ನು ಹಲವು ಕಂತುಗಳಲ್ಲಿ ಈ ಬ್ಲಾಗ್ ತಾಣದಲ್ಲಿ ನೀಡಲು ತೀರ್ಮಾನಿಸಿದ್ದೇನೆ. ಗಣಕಗಳ ಬಗ್ಗೆ ನಾನು ಮೊತ್ತಮೊದಲ ಬಾರಿಗೆ ಓದಿದ್ದು...
Continue reading
April 23, 2011 U B Pavanaja
Tech related
8 Comments
ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ – ಇವರಿಗೆ, ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ, ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ) ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ, ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧. ಮಾನ್ಯರೆ, ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ...
Continue reading
June 14, 2008 admin
Featured Article, Tech related
ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ
Continue reading
June 8, 2008 admin
Featured Article, Tech related
No Comment
ಮೈಕೇಲ್ ಕಪ್ಲಾನ್ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ
ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ
ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು "ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ".
Continue reading
January 25, 2008 admin
Featured Article, Tech related
No Comment
ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.
Continue reading
January 13, 2008 admin
Featured Article, Tech related
4 Comments
ದಯವಿಟ್ಟು ಈ ಪುಟ ಓದಿ -
http://vishvakannada.com/node/338. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ.
Continue reading
December 14, 2007 admin
Tech related
1 Comment
ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲಿ ಮೂರು ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು. ಗಣಕ ಕ್ರಮವಿಧಿ (programming language) ತಯಾರಿಯ ಮೂಲ ಸಿದ್ಧಾಂತ (ತರ್ಕ, programming logic) ವನ್ನು ಕನ್ನಡ ಭಾಷೆಯಲ್ಲೇ ಕಲಿಸುವುದು ಮೂರನೆಯದು.
Continue reading
June 10, 2007 admin
Tech related
1 Comment
ಕ್ಲಿಂಗನ್ ಎಂಬ ಭಾಷೆ ಕೇಳಿದ್ದೀರಾ? ಅದು ಯಾವ ದೇಶದ್ದಿರಬಹುದು? ಈ ಭೂಮಿಯ ಮೇಲಿರುವ ಯಾವ ದೇಶದ್ದೂ ಅಲ್ಲ, ಬ್ರಹ್ಮಾಂಡದಲ್ಲಿ ಬಹುದೂರದಲ್ಲಿರುವ ಯಾವುದೋ ಕಾಲ್ಪನಿಕ ನಕ್ಷತ್ರದ ಗ್ರಹದ ಜೀವಿಗಳದ್ದು ಎಂದರೆ ನಂಬುತ್ತೀರಾ? ಯಾವುದೋ ಕಾಲ್ಪನಿಕ ಜೀವಿಗಳ ಭಾಷೆ ಹೀಗೆಯೇ ಇರುತ್ತದೆ ಎಂದು ಯಾರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ಅನ್ನುತ್ತೀರಾ? ಎಲ್ಲವೂ ಸಾಧ್ಯ ಸ್ವಾಮಿ. ಸ್ಟಾರ್ ಟ್ರೆಕ್ ಎಂಬ ಟಿ.ವಿ. ಧಾರಾವಾಹಿ ನೋಡಿದ ನೆನಪಿದೆಯೇ? ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆ ಕ್ಲಿಂಗನ್. ಇದು ಶುದ್ಧ ಕಾಲ್ಪನಿಕ ಭಾಷೆ. ಅದೃಷ್ಟವಶಾತ್ ಟಿ.ವಿ. ಧಾರಾವಾಹಿಯಲ್ಲಿ ಪಾತ್ರಗಳು ಮಾತನಾಡುತ್ತಿದ್ದದ್ದು ಇಂಗ್ಲಿಷ್ ಭಾಷೆ. ಆದರೆ ಈ ಕ್ಲಿಂಗನ್ ಎಂಬ ಕಾಲ್ಪನಿಕ ಭಾಷೆಗೂ ಒಂದು ವರ್ಣಮಾಲೆ, ವ್ಯಾಕರಣ, ಲಿಪಿ ಎಲ್ಲ ಇವೆ ಎಂದರೆ ನಂಬುತ್ತೀರಾ? ಹೆಚ್ಚಿನ ಮಾಹಿತಿಗೆ
ವಿಕಿಪೀಡಿಯಾ ಓದಬಹುದು.
Continue reading
January 29, 2007 admin
Tech related
1 Comment
ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ -
http://www.bhashaindia.com/Patrons/PatronsHome.htm?lang=Kn. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ -
http://bhashaindia.com/ForumV2/displaygroup.aspx?GroupID=5
Continue reading
January 18, 2007 admin
Tech related
2 Comments