Home » Archive by categoryKannada (Page 5)

ಉಷಾಕಿರಣದ ದಿವ್ಯಮರಣ

ವಿಆರ್‌ಎಲ್ ಗ್ರೂಪ್‌ನ ಪತ್ರಿಕೆಗಳನ್ನು ಟೈಂಸ್ ಆಫ್ ಇಂಡಿಯಾದವರು ಕೊಂಡುಕೊಂಡ ಸುದ್ದಿ ನಿಮಗೆಲ್ಲ ಗೊತ್ತೇ ಇರಬೇಕು. ಈ ಗುಂಪಿನ ಪತ್ರಿಕೆಗಳೆಂದರೆ ವಿಜಯ ಕರ್ನಾಟಕ, ವಿಜಯ ಟೈಂಸ್ ಮತ್ತು ಉಷಾಕಿರಣ. ಈ ಪತ್ರಿಕೆಗಳನ್ನು ಟೈಂಸ್‌‌ನವರು ಕೊಂಡುಕೊಂಡ ಸುದ್ದಿ ಹೊರಬರುತ್ತಿದ್ದಂತೆ ಜನರಾಡಿಕೊಂಡುದೇನೆಂದರೆ ವಿಜಯ ಟೈಂಸ್ ಮತ್ತು ಉಷಾಕಿರಣಗಳ ಗತಿ ಮುಗಿಯಿತು ಎಂದು. ಟೈಂಸ್‌ನವರಿಗೆ ಒಂದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆ ಬೇಡ. ಆದುದರಿಂದ ಉಷಾಕಿರಣ ಬೇಡ. ಇಂಗ್ಲೀಶ್ ಪತ್ರಿಕೆಯಂತೂ ತಮ್ಮದೇ ಇದೆಯಲ್ಲ. ಹಾಗಾಗಿ ವಿಜಯ ಟೈಂಸೂ ಬೇಡ. ಉಳಿಯುವುದು ವಿಜಯ ಕರ್ನಾಟಕ ಮಾತ್ರ ಎಂದು ಎಲ್ಲರೂ ಆಡಿಕೊಂಡರು. ಆದರೆ ಕೂಡಲೇ ಹಾಗೇನೂ ಆಗಲಿಲ್ಲ.
Continue reading

ತಂಪಾಸನ !

ಚಿತ್ರವಿಚಿತ್ರ ಯುಎಸ್‌ಬಿ ಸಾಧನಗಳ ಬಗ್ಗೆ ಹಿಂದೊಮ್ಮೆ ಸುದೀರ್ಘವಾದ ಲೇಖನವನ್ನೇ ಬರೆದಿದ್ದೆ. ಈಗ ಅವುಗಳ ಸಾಲಿಗೆ ಒಂದೆರಡು ಹೊಸದು ಸೇರ್ಪಡೆಯಾಗಿವೆ. ಮೊದಲನೆಯದಾಗಿ ಹವಾನಿಯಂತ್ರಿತ ಅಂಗಿ ಅಥವಾ ಜಾಕೆಟ್. ನಿಮ್ಮ ಕಚೇರಿಯಲ್ಲಿ ಹವಾನಿಯಂತ್ರಣ ಇಲ್ಲವೇ? ಚಿಂತೆ ಮಾಡಬೇಡಿ. ಗಣಕ (ಕಂಪ್ಯೂಟರ್) ಅಂತೂ ಇದ್ದೇ ಇದೆ ತಾನೆ? ನಾಲ್ಕೈದು ವರ್ಷಗಳ ಈಚೆಗೆ ತಯಾರಾದ ಎಲ್ಲ ಗಣಕಗಳಲ್ಲಿ ಯುಎಸ್‌ಬಿ ಕಿಂಡಿ (ಪೋರ್ಟ್‌) ಇದ್ದೇ ಇದೆ. ಇನ್ನೇನಾಗಬೇಕು. ಈ ಜಾಕೆಟ್ ಕೊಂಡು ಯುಎಸ್‌ಬಿ ಕಿಂಡಿಗೆ ಲಗತ್ತಿಸಿ ತಂಪಾಗಿರಿ.
Continue reading

ಮಿಥ್ಯಾನಿವೇಶನದ ವ್ಯಾಪಾರವೆಂಬ ಮೋಸ

"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರು ಇದ್ದೇ ಇರುತ್ತಾರೆ". ಈ ಮಾತನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವೆಂದರೆ ಈ ಸುದ್ದಿ. ಕೊಲ್ಕತ್ತದ ಯಾರೋ ದಂಪತಿಗಳು ಚಂದ್ರನ ಮೇಲೆ ನಿವೇಶನ ಕೊಂಡುಕೊಂಡಿದ್ದಾರೆ. ಇಂತಹ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಹಿಂದೊಮ್ಮೆ ಉಷಾಕಿರಣ ಪತ್ರಿಕೆಯಲ್ಲಿ ಇಂತಹದೇ ಸುದ್ದಿ ಪ್ರಕಟವಾಗಿದ್ದಾಗ ಪತ್ರಿಕೆಯ ಸಂಪಾದಕರಿಗೆ ನಾನೊಂದು ಪತ್ರ ಬರೆದಿದ್ದೆ. ಅದನ್ನು ಕೆಳಗೆ ನಕಲಿಸಿದ್ದೇನೆ.
Continue reading

ಲ್ಯಾಪ್‌ಟಾಪ್‌ಗೆ ಒದ್ದು ಕೆಲಸ ಮಾಡಿಸಿಕೊಳ್ಳಿ

ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಗಳ ವ್ಯತ್ಯಾಸವನ್ನು ವಿವರಿಸುವಾಗ ನಾನು ಸ್ವಲ್ಪ ಹಾಸ್ಯಮಯವಾಗಿ ಈ ರೀತಿ ಹೇಳುತ್ತಿದ್ದೆ -"ತಂತ್ರಾಂಶವೆಂದರೆ ಕಣ್ಣಿಗೆ ಕಾಣಿಸದ್ದು. ಯಂತ್ರಾಂಶವೆಂದರೆ ಕಣ್ಣಿಗೆ ಕಾಣಿಸುವಂತದ್ದು. ನಿಮಗೆ ನಿಮ್ಮ ಗಣಕದ ಮೇಲೆ ಕೋಪ ಬಂದರೆ, ಯಂತ್ರಾಂಶವನ್ನು ಅಂದರೆ ಕಣ್ಣಿಗೆ ಕಾಣಿಸುವ ಗಣಕದ ಭಾಗಗಳನ್ನು, ಸಿಟ್ಟಿನಿಂದ ಒದೆಯಬಹುದು". ಈಗ ಬಂದ ಸುದ್ದಿಯಂತೆ ಇನ್ನು ಮುಂದೆ ನೀವು ಲ್ಯಾಪ್‌ಟಾಪ್‌ಗಳನ್ನು ಒದ್ದು ಕೆಲಸ ಮಾಡಿಸಿಕೊಳ್ಳಬಹುದು. ಐಬಿಎಂನವರು ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಅದರ ಪ್ರಕಾರ ಲ್ಯಾಪ್‌ಟಾಪ್‌ಗಳನ್ನು ಕುಟ್ಟುವ ಮೂಲಕ ಅದಕ್ಕೆ ಆದೇಶ ನೀಡಬಹುದು. ಧ್ವನಿ ಮೂಲಕ ಆದೇಶ ನೀಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಕುಟ್ಟುವ ಮೂಲಕ ಆದೇಶ ನೀಡುವುದು ಹೊಸತು. ಹಾಗೆಂದು ಯಾವುದೇ ಲ್ಯಾಪ್‌ಟಾಪ್‌ನ್ನು ಕುಟ್ಟುವ ಮೂಲಕ ಆದೇಶ ನೀಡುವ ಹಾಗಿಲ್ಲ. ಮೂರು ವರ್ಷಗಳ ಈಚೆಗೆ ತಯಾರಾಗಿರುವ ಐಬಿಎಂ (ಈಗ ಲೆನೋವಾ) ಲ್ಯಾಪ್‌ಟಾಪ್‌ಗಳಲ್ಲಿ ಅಲುಗಾಡುವಿಕೆಯನ್ನು ಅರ್ಥಮಾಡಿಕೊಳ್ಳಬಲ್ಲ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರಿಯಾಗಿ ಐಬಿಎಂನವರು ಈಗ ಹೊಸದಾಗಿ ತಯಾರಿಸಿರುವ ತಂತ್ರಾಂಶವನ್ನು ಅಳವಡಿಸಕೊಳ್ಳುವ ಮೂಲಕ "ಕುಟ್ಟುವ" ಆದೇಶ ನೀಡಬಹುದು. ಒಂದು ಸಲ ಕುಟ್ಟಿದರೆ (ಒದ್ದರೆ ಎಂದು ನಾನು ಹೇಳಿದ್ದು ಉತ್ಪ್ರೇಕ್ಷೆಗಾಗಿ ಮಾತ್ರ) ಗಣಕ ಚಾಲೂ, ಎರಡು ಸಲ ಕುಟ್ಟಿದರೆ ಬಂದ್, ಹೀಗೆ ಆದೇಶಗಳನ್ನು ನೀವು ಗ್ರಾಹಕೀಯಗೊಳಿಸಿಕೊಳ್ಳಬಹುದು. ಇನ್ನು ಮುಂದೆ "ಕಂಪ್ಯೂಟರ್‌ಗೆ ಒದೆಯೋಣ ಎನ್ನುವಷ್ಟು ಸಿಟ್ಟು ಬಂತು" ಎಂದು ಹೇಳುವಾಗ ಎಚ್ಚರವಿರಲಿ.
Continue reading

Microsoft beats Google

People always tend to compare Google with Microsoft and pronounce that Google's technologies are always superior to that of Microsoft's. For instance, the comparison of the results from Google's search with that of search.msn.com (by Microsoft). But I have a different story to tell. A fellow MVP, [http://www.microsoft.com/india/mvp/indiamvp.aspx#VeerJiWangoo|Veer Ji Wangoo], pointed me at [http://local.live.com|local.live.com] from Microsoft. I opened it and tried to search some driving directions in Karnataka, India. I searched for the driving directions from Bangalore, India to some small towns like Subrahmanya, Tirthahalli, Karkala, etc. And lo, it gave the directions perfectly. Of course, it is not able to provide the directions for smaller towns and villages. I tried the same thing in local.google.com. It failed miserably. There is no India specific web-site from Google like local.google.co.in. The award goes to Microsoft.
Continue reading

ಗೂಗ್ಲ್‌ನಲ್ಲಿ ಕಂಡಂತೆ ಸಂಡೂರಿನ ಗಣಿಗಾರಿಕೆ

ಸಂಡೂರಿನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬದ್ಧವಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸುತ್ತಿವೆ. ಹಣದ ವ್ಯವಹಾರ, ಲಂಚದ ಸುದ್ದಿ ಕರ್ನಾಟಕದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿವೆ. ಈ ಸಂದರ್ಭದಲ್ಲಿ ನಾನು ಸುಮ್ಮನೆ ಗೂಗ್ಲ್ ಅರ್ಥ್‌ನಲ್ಲಿ ಸಂಡೂರು ಸುತ್ತಮುತ್ತ ಹೇಗೆ ಕಾಣಿಸುತ್ತಿದೆ ಎಂದು ನೋಡಿದೆ. ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಭೂದೇವಿಯ ಮೇಲಿನ ಅತ್ಯಾಚಾರಕ್ಕೆ ಪ್ರತ್ಯೇಕ ಸಾಕ್ಷಿ ಬೇಕಾಗಿಲ್ಲ ತಾನೆ? ಈ ಚಿತ್ರಗಳು ಸುಮಾರು ಒಂದು ವರ್ಷದಷ್ಟು ಹಳೆಯವಿರಬೇಕು ಎಂದು ನನ್ನ ಅಂದಾಜು. ಗೂಗ್ಲ್ ಅರ್ಥ್‌ನ ಎಲ್ಲ ಚಿತ್ರಗಳು ಸುಮಾರು ಆರು ತಿಂಗಳಿನಿಂದ ಒಂದು ವರ್ಷದಷ್ಟು ಹಳೆಯವಿವೆ. ಅಂತೆಯೇ ಈ ಚಿತ್ರಗಳು ಸ್ವಲ್ಪ ಹಳೆಯವಿರಬೇಕು. ಈ ಚಿತ್ರಗಳಲ್ಲಿ ಬೇಕೆಂದೇ ಸ್ವಲ್ಪ ಕಾಡು ಕೂಡ ಬರುವಂತೆ ನಾನು ವಿನ್ಯಾಸ ಮಾಡಿದ್ದೇನೆ. ಕಾಡು ಇರುವ ಮತ್ತು ಇಲ್ಲದ ಜಾಗಗಳನ್ನು ಹೋಲಿಸಿ ನೋಡಿ. ಕಾಡು ಯಾವ ರೀತಿ ನಾಶವಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಒಂದು ವರ್ಷದ ನಂತರ ಇನ್ನೊಮ್ಮೆ ಇದೇ ಜಾಗದ ಚಿತ್ರಗಳನ್ನು ತೆಗೆದರೆ ಇನ್ನೆಷ್ಟು ಪರಿಸರ ನಾಶವಾಗಿದೆ ಎಂದು ಹೋಲಿಸಿ ನೋಡಬಹುದು.
Continue reading

ಪುತ್ರಿಯರ ದಿನ

ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -"ಪುತ್ರಿಯರ ದಿನ". ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: , ). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು "ಹೋಂವರ್ಕ್‌" ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-
Continue reading

ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?
Continue reading

ವಿಶುವಲ್ ಸ್ಟುಡಿಯೋದಲ್ಲಿ ಕನ್ನಡದ ಅಕಾರಾದಿ ವಿಂಗಡಣೆ

ಗಣಕದಲ್ಲಿ ಕನ್ನಡ ಎಂದರೆ ಗಣಕದಲ್ಲಿ ಕನ್ನಡವನ್ನು ಬೆರಳಚ್ಚು ಮಾಡುವುದು ಎಂದೇ ಬಹುಪಾಲು ಮಂದಿ ಇನ್ನೂ ತಿಳಿದುಕೊಂಡಿದ್ದಾರೆ. ಗಣಕದಲ್ಲಿ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು (application software) ಸುಲಭವಾಗಿ ತಯಾರಿಸಬಹುದು. ಇಂಗ್ಲೀಶ್ ಭಾಷೆಯಲ್ಲಿ ಏನೇನು ಸಾಧ್ಯವೋ ಅವೆಲ್ಲವೂ ಕನ್ನಡದಲ್ಲೂ ಸಾಧ್ಯ. ಮುಖ್ಯವಾಗಿ ದತ್ತ ಸಂಸ್ಕರಣೆ (data processing). ಕನ್ನಡದಲ್ಲಿ ಆನ್ವಯಿಕ ತಂತ್ರಾಂಶ ತಯಾರಿಸಲು ಮುಖ್ಯ ಆವಶ್ಯಕತೆಯೆಂದರೆ ಕನ್ನಡದ ಅಕಾರಾದಿ ವಿಂಗಡಣೆ. ಮೈಕ್ರೋಸಾಫ್ಟ್‌ನವರ ಆಕ್ಸೆಸ್ ಮತ್ತು ಎಸ್‌ಕ್ಯೂಎಲ್ ಸರ್ವರ್‌ಗಳು ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಅವು ಮಾತ್ರವಲ್ಲ. ವಿಶುವಲ್ ಸ್ಟುಡಿಯೋ ಕೂಡ ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಒಂದು ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.
Continue reading