ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ
ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.