Pavanaja's Blog » Tech related

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ
ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ  ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ  ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ  ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು  ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್  ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವಿಂಡೋಸ್ ಫೋನಿಗೆ ತಂತ್ರಾಂಶ ತಯಾರಿ  ನಡೆಸುವುದು ಹೇಗೆ ಎಂಬ ಬಗ್ಗೆ ಪ್ರೆಸೆಂಟೇಶನ್ ಮತ್ತು ಪ್ರಾತ್ಯಕ್ಷಿಕೆಗಳಿವೆ. ಹೆಚ್ಚಿನ  ವಿವರಗಳನ್ನು ಮೈಸೂರು ಗೀಕ್ಸ್‌ನವರ ಜಾಲತಾಣದಲ್ಲಿ ಓದಬಹುದು.

ನನ್ನ ಗಣಕಾವಲೋಕನ – ೪
ಪಿಡಿಪಿ-11 ರಿಂದ ಪಿಸಿಗೆ

ಸುಮಾರು ೧೯೮೮ರ ಸಮಯ ಇರಬೇಕು. ಬಿಎಆರ್‌ಸಿಯ ಕೆಮಿಸ್ಟ್ರಿ ಲ್ಯಾಬ್‌ಗೆ ಒಮದು ಲೇಸರ‍್ ಸ್ಪೆಕ್ಟ್ರೊಫೋಟೋಮೀಟರ‍್ ಬಂತು. ಅದನ್ನು ಬಳಸಿ ಯಾವುದಾದರೂ ವಸ್ತು (ಸಾಮಾನ್ಯವಾಗಿ ದ್ರವ ಅಥವಾ ಅನಿಲ) ವಿನ ಮೇಲೆ ಲೇಸರ‍್ ಕಿರಣವನ್ನು ಅತಿ ಕಡಿಮೆ ಸಮಯದಲ್ಲಿ ಹಾಯಿಸಿ ಅದರಿಂದ ಹೊಮ್ಮುವ ರೋಹಿತವನ್ನು (spectrum) ಪಡೆಯಬಹುದಿತ್ತು. ಅದನ್ನು ಇಂಗ್ಲೆಂಡಿನಿಂದ ತರಿಸಲಾಗಿತ್ತು. ಈ ಉಪಕರಣವನ್ನು ನಿಯಂತ್ರಿಸಿ ಮಾಹಿತಿ ಸಂಗ್ರಹಿಸುತ್ತಿದ್ದುದು ಒಂದು ಪಿಡಿಪಿ-11 ಗಣಕ.  ಎಲ್ಲ ಉಪಕರಣಗಳಂತೆ ಅದೂ ಸ್ವಲ್ಪ ಸಮಯದ ನಂತರ ಕೈಕೊಡಲರಾಂಭಿಸಿತು. ಆ ಉಪಕರಣದಲ್ಲಿ ಹಲವು ಉಪಕರಣಗಳನ್ನು ಬೇರೆ ಬೇರೆ ಕಂಪೆನಿಗಳಿಂದ ಕೊಂಡುಕೊಂಡು ಒಟ್ಟುಗೂಡಿಸಲಾಗಿತ್ತು. ಉದಾಹರಣೆಗೆ ಓಸಿಲೋಸ್ಕೋಪ್ ಮತ್ತು ಪಿಡಿಪಿ-11 ಗಣಕಗಳು ಅಮೆರಿಕದಿಂದ ಬಂದವಾಗಿದ್ದವು. ಉಪಕರಣದಲ್ಲಿ ತೊಂದರೆಯುಂಟಾದಾಗ ಅಮೆರಿಕದ ಕಂಪೆನಿಗಳಿಗೆ ಪತ್ರ ಬರೆದೆವು. ಆಗ ಅಲ್ಲಿಂದ ಖಾರವಾದ ಉತ್ತರ ಬಂತು. ಈ ಉಪಕರಣಗಳು ಭಾರತಕ್ಕೆ, ಅದರಲ್ಲೂ ಪರಮಾಣು ಶಕ್ತಿ ಇಲಾಖೆಗೆ, ನಿಷೇಧಿಸಲಾಗಿವೆ, ಅವು ನಿಮಗೆ ಹೇಗೆ ದೊರೆತವು? ಅವುಗಳಿಗೆ ನಾವು ಯಾವುದೇ ಸಹಾಯ ನೀಡುವುದಿಲ್ಲ ಎಂಬುದಾಗಿ.

ಈಗ ನಮಗೆ ಸಮಸ್ಯೆ ಎದುರಾಯಿತು. ಬಿಎಆರ್‌ಸಿಯಲ್ಲಿ ಕೆಲವು ಪಿಡಿಪಿ-11 ಗಣಕಗಳಿದ್ದವು. ಆದುದರಿಂದ ಅದರ ಪರಿಣತರೂ ಇದ್ದರು. ಅವರ ಸಹಾಯದಿಂದ ಕೆಲವು ತಿಂಗಳ ಮಟ್ಟಿಗೆ ಉಪಕರಣಕ್ಕೆ ಜೀವ ನೀಡಲು ಸಾಧ್ಯವಾಯಿತು. ಆದರೆ ಇದೇ ಸಮಸ್ಯೆ ಮತ್ತೆ ಮತ್ತೆ ಬಂದಾಗ ನಾವು ಒಂದು  ತೀರ್ಮಾನ ತೆಗೆದುಕೊಂಡೆವು. ಏನೆಂದರೆ ಪಿಡಿಪಿ-11 ಗಣಕವನ್ನು ತೆಗೆದು ಅದರ ಜಾಗದಲ್ಲಿ ಪಿಸಿ ಜೋಡಿಸುವುದು ಎಂದು. ಪಿಡಿಪಿ-11 ರ ಜೊತೆ ಬಂದ ಕ್ರಮವಿಧಿ (program) ಅದೃಷ್ಟಕ್ಕೆ Fortran ಭಾಷೆಯಲ್ಲಿತ್ತು. ಅದನ್ನು ಪಿಸಿಗೆ ಬದಲಾಯಿಸುವುದು ಕಷ್ಟವಿರಲಿಲ್ಲ. ಕೇಬಲ್ ಮತ್ತು ಇತರೆ ಕಾರ್ಡ್‌‌ಗಳನ್ನು ಸಂಪರ್ಕಿಸುವುದು ಹೇಗೆ ಎಂಬ ಸಮಸ್ಯೆ ಇತ್ತು. ಆಗ ಯಾರೋ ಹೇಳಿದರು –ನಮ್ಮ ವಿಭಾಗದ ಇನ್ನೊಂದು ಲ್ಯಾಬಿನ ಮೂಲೆಯಲ್ಲಿ ಒಂದು ಪಿಡಿಪಿ-11 ಗಣಕ ಯಾರೂ ಉಪಯೋಗಿಸದೆ ಮೂಲೆಯಲ್ಲಿ ಬಿದ್ದಿದೆ ಎಂದು. ನಾನು ಅದನ್ನು ಇಟ್ಟ ಜಾಗಕ್ಕೆ ಹೋಗಿ ಆ ಲ್ಯಾಬಿನ ವಿಜ್ಞಾನಿಯವರನ್ನು ವಿಚಾರಿಸಿದೆ. ಅವರಿಗೆ ಅದರ ಬಳಕೆ ಸರಿಯಾಗಿ ಗೊತ್ತಿರಲಿಲ್ಲ. ಎರಡು ಸ್ವಿಚ್‌ಗಳನ್ನು ಒಂದಾದ ನಂತರ ಒಂದರಂತೆ ಆನ್ ಮಾಡಬೇಕು ಎಂದಷ್ಟೆ ತಿಳಿದಿತ್ತು. ಅವರು ಹೇಳಿದಂತೆ ಆನ್ ಮಾಡಿದಾಗ ಅದು ಕೆಲಸ ಮಾಡಲಿಲ್ಲ. ನಾನು ಈ ಸ್ವಿಚ್‌ಗಳು ಏನು ಮಾಡುತ್ತವೆ ಎಂದು ಗಣಕವನ್ನು ಬಿಚ್ಚಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅದರಲ್ಲಿ ಒಂದು ಸ್ವಿಚ್ ಒಳಗಿನಿಂದ ಎಲ್ಲಿಗೂ ಸಂಪರ್ಕವಿಲ್ಲದೆ ಸುಮ್ಮನೆ ಇತ್ತು. ಅದನ್ನು ಹಲವು ವರ್ಷಗಳಿಂದ ಬಳಸಿದವರಿಗೂ ಆ ಸ್ವಿಚ್ ನಿಜವಾಗಿ ಅಗತ್ಯ ಇರಲಿಲ್ಲ ಎಂದು ತಿಳಿದೇ ಇರಲಿಲ್ಲ.

ನಾವು ಪಿಡಿಪಿ ಜಾಗದಲ್ಲಿ ಪಿಸಿ ಕೂರಿಸಿದೆವು. ಕ್ರಮಿವಿಧಿಯನ್ನು ಮತ್ತೊಮ್ಮೆ ಪಿಸಿಯಲ್ಲಿ ಟೈಪಿಸಿ ತಯಾರಿಸಿದೆ. ಕೊನೆಗೂ ಉಪಕರಣ ಕೆಲಸ ಮಾಡಿದಾಗ ಏನೋ ಸಾಧಿಸಿದ ತೃಪ್ತಿ. ಒಂದು ಪ್ಲಾಟರ‍್ ಕೂಡ ಕೊಂಡುಕೊಂಡು ಅದಕ್ಕೆ ಜೋಡಿಸಿದೆ. ಉಪಕರಣದಿಂದ ಪಡೆದ ಮಾಹಿತಿಯನ್ನು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ಸೂತ್ರಗಳಿಗನುಗುಣವಾಗಿ ಸಂಸ್ಕರಿಸಿ ವಿಶ್ಲೇಷಿಸಲು ತಂತ್ರಾಂಶವನ್ನೂ ಬರೆದೆ. ಗ್ರಾಫ್ ಪ್ಲಾಟರ್‌ನಲ್ಲಿ ಮುಡಿ ಬರುತ್ತಿತ್ತು. ಎಲ್ಲ ವಿಜ್ಞಾನಿಗಳು ಅದನ್ನು ಬಳಸಲು ಪ್ರಾರಂಭಿಸಿದರು.

ಇಲ್ಲೊಂದು ವಿಷಯ ಹೇಳಬೇಕು. ಬಿಎಆರ್‌ಸಿಯಲ್ಲಿ ನನ್ನ ಹುದ್ದೆ ಇದ್ದುದು ರಸಾಯನಶಾಸ್ತ್ರದ ವಿಜ್ಞಾನಿಯಾಗಿ. ಅಂದರೆ ನಾನು ರಸಾಯನಸಾಸ್ತ್ರದಲ್ಲಿ ಸಂಶೋಧನೆ ಮಾಡಬೇಕು. ಈ ಗಣಕದ ಕೆಲಸಗಳೆಲ್ಲ ಏನಿದ್ದರೂ ಒಂದು ಹಾಬ್ಬಿ ಎಂದೇ ಪರಿಗಣಿಸಲ್ಪಡುತ್ತಿತ್ತು. ಅಂದರೆ ನಾನು ಮಾಡಿದ ಕೆಲಸದಿಂದ ಬಿಎಆರ್‌ಸಿಗೆ ಎಷ್ಟೇ ಪ್ರಯೋಜನವಾದರೂ ನನಗೆ ಅದಕ್ಕಾಗಿ ಯಾವುದೇ ಪ್ರತಿಫಲ ಇರಲಿಲ್ಲ. ಎಲ್ಲ ವಿಜ್ಞಾನಿಗಳಿಂದ ಶಹಬ್ಬಾಸ್ ಎಂದು ಬೆನ್ನು ತಟ್ಟಿಸಿಕೊಂಡಿದ್ದಷ್ಟೇ ಲಾಭ.

ನೋಡಿ – ನನ್ನ ಗಣಕಾವಲೋಕನ –೩, ೨, ೧

ನನ್ನ ಗಣಕಾವಲೋಕನ–೩
ಬಂತು ಖಾಸಾ ಗಣಕ

ಬಹುಶಃ ೧೯೮೬ ಇರಬೇಕು ಭಾರತಕ್ಕೆ ಖಾಸಾಗಣಕಗಳು (ಪರ್ಸನಲ್ ಕಂಪ್ಯೂಟರ‍್ = ಪಿಸಿ) ಕಾಲಿಟ್ಟವು. ಭಾಭಾ ಪರಮಾಣು ಸಂಶೋಧನಾ ಕೇಂದ್ರಕ್ಕೂ ಅವು ಕಾಲಿಟ್ಟವು. ಆದರೆ ಎರಡೇ ಎರಡು ಪಿಸಿಗಳು ಕಂಪ್ಯೂಟರ‍್ ವಿಭಾಗದಲ್ಲಿ ಬಂದು ಕುಳಿತಿದ್ದವು. ಬಹುಶಃ ಅವು ವಿಪ್ರೊ ಕಂಪೆನಿ ಉಚಿತವಾಗಿ ಕೊಟ್ಟಿದ್ದಿರಬೇಕು. ಅದರಲ್ಲಿ ಕಂಪ್ಯೂಟರ‍್ ವಿಬಾಗದ ತಂತ್ರಜ್ಞರು ಮಾತ್ರವೇ ಏನೋ ಮಾಡುತ್ತಿದ್ದರು. ಅದರ ಹೊರತಾಗಿ ಇಡಿ ಬಿಎಆರ್‌ಸಿಯಲ್ಲಿ ಇನ್ನೆಲ್ಲೂ ಪಿಸಿಗಳಿರಲಿಲ್ಲ. ಆಗಾಗಲೆ ನಾನು ಕೆಮಿಸ್ಟ್ರಿ ವಿಭಾಗದಲ್ಲಿ ಕಂಪ್ಯೂಟರ‍್ ತಜ್ಞ ಎಂಬ ಖ್ಯಾತಿ ಪಡೆದಿದ್ದೆ. ನನ್ನ ವಿಭಾಗದ ಮುಖ್ಯಸ್ಥರು ನಮ್ಮ ವಿಭಾಗಕ್ಕೂ ಒಂದು ಪಿಸಿ ತಂದರೆ ಹೇಗೆ ಎಂಬ ಆಲೋಚನೆ ಮಾಡಿದರು. ನನಗೆ ಈ ಬಗ್ಗೆ ಹೇಳಿದರು. ಒಂದು ದಿನ ನಾನು ಮತ್ತು ಅವರು ನಾರಿಮನ್ ಪಾಯಿಂಟ್‌ನಲ್ಲಿದ್ದ ವಿಪ್ರೊ ಕಚೇರಿಗೆ ಹೋಗಿ ಪಿಸಿ ಕೊಂಡುಕೊಳ್ಳುವ ಬಗ್ಗೆ ಮಾತನಾಡಿ ಬಂದೆವು. ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲ ಕೆಂಪು ಪಟ್ಟಿಗಳನ್ನು ದಾಟಿ ಒಂದು ವಿಪ್ರೊ ಪಿಸಿ ಬಂದು ನನ್ನ ಮೇಜಿನ ಮೇಲೆ ಕುಳಿತಿತ್ತು. ಇಡಿಯ ಬಿಎಆರ್‌ಸಿಯಲ್ಲಿ ಕಂಪ್ಯೂಟರ‍್ ವಿಭಾಗದ ಹೊರತಾಗಿ ಇದ್ದ ಪಿಸಿ ನನ್ನದಾಗಿತ್ತು.

ಪಿಸಿ ಏನೋ ಬಂತು. ಅದರಲ್ಲಿ ಏನು ಮಾಡುವುದು. ಆಗ ಬಳಕೆಯಲ್ಲಿದ್ದದ್ದು ಮೈಕ್ರೋಸಾಫ್ಟ್‌ ಡಾಸ್ (MS DOS) ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್). ಈಗಿನಂತೆ ವಿಂಡೋಸ್, ವರ್ಡ್, ಎಕ್ಸೆಲ್, ಇತ್ಯಾದಿಗಳಿರಲಿಲ್ಲ. ಆ ಪಿಸಿಯ ಸ್ಪೆಸಿಪಿಕೇಶನ್ ಕೇಳಿದರೆ ನಿಮಗೆ ನಗು ಬರಬಹುದು. ಅದರಲ್ಲಿ ೧೦ಮೆಗಾಬೈಟ್‌ನ ಒಂದು ಹಾರ್ಡ್‌‌ಡಿಸ್ಕ್ ಮತ್ತು ೫ ೧/೪ ಇಂಚು ಗಾತ್ರದ ಒಂದು ಫ್ಲಾಪಿ ಡ್ರೈವ್ ಇದ್ದವು. ಅದರ ಸಿಪಿಯು ವೇಗ ಕೇವಲ 8MHz ಆಗಿತ್ತು. ಮೆಮೊರಿ ಕೇವಲ ೧ ಮೆಗಾಬೈಟ್. ಅದರಲ್ಲೂ ಡಾಸ್ ಬಳಸುತ್ತಿದ್ದುದು ೬೪೦ ಕಿಲೋಬೈಟ್ ಮಾತ್ರ.

ನಾನು ಎಲ್ಲಿಂದಲೋ ತಂದು ಕೆಲವು ಉಪಯುಕ್ತ ತಂತ್ರಾಂಶಗಳನ್ನು ಅದರಲ್ಲಿ ಹಾಕಿದ್ದೆ. ಆಗ ಬಳಕೆಯಲ್ಲಿದ್ದ ವರ್ಡ್‌‌ಪ್ರೋಸೆಸಿಂಗ್ ತಂತ್ರಾಂಶ ವರ್ಡ್‌‌ಸ್ಟಾರ‍್. ಅದರಲ್ಲಿ ಈಗಿನಂತೆ ಸಮೀಕರಣ, ಕೋಷ್ಟಕ ಎಲ್ಲ ತಯಾರಿಸಲು ಆಗುತ್ತಿರಲಿಲ್ಲ. ಇದ್ದುದರಲ್ಲೇ ಹೇಗೋ ಬಳಕೆ ಮಾಡುತ್ತಿದ್ದರು. ಆಗ ಬಳಕೆಯಲ್ಲಿದ್ದ ಮುದ್ರಕವೂ ಡಾಟ್ ಮ್ಯಾಟ್ರಿಕ್ಸ್ ಮುದ್ರಕಗಳು. ಇಂತಹ ಮುದ್ರಕಗಳು ಈಗಲೂ ಬಳಕೆಯಲ್ಲಿವೆ. ನಿಧಾನವಾಗಿ ಡಾಟ್‌ ಮ್ಯಾಟ್ರಿಕ್ಸ್ ಮುದ್ರಕಗಳಲ್ಲೇ ಸ್ವಲ್ಪ ಉತ್ತಮ ಗುಣಮಟ್ಟದ ಮುದ್ರಕಗಳು ಬಳಕೆಗೆ ಬಂದವು. ನಮ್ಮ ಕೆಲಸಕ್ಕೆ ಅಗತ್ಯವಿರುವ ವೈಜ್ಞಾನಿಕ ಮಾಹಿತಿ ಸಂಸ್ಕರಣೆ ಮತ್ತು ವಿಶ್ಲೇಷಣೆಗೆ ಬೇಕಾದ ತಂತ್ರಾಂಶಗಳನ್ನು ನಾನೇ Fortran ಮತ್ತು ಕೆಲವೊಮ್ಮೆ GWBASIC ಭಾಷೆಗಳಲ್ಲಿ ತಯಾರಿಸಿದೆ.

ನನ್ನ ಉದಾಹರಣೆಯನ್ನು ಅನುಕರಿಸಿ ಇನ್ನೂ ಹಲವು ವಿಜ್ಞಾನಿಗಳು ಪಿಸಿಗಳನ್ನು ಕೊಂಡು ತಂದರು. ಪ್ರತಿಯೊಬ್ಬರೂ ಪಿಸಿ ಕೊಳ್ಳುವ ಮೊದಲು ನನ್ನ ಸಲಹೆ ಕೇಳುವುದು, ಕೊಂಡು ತಂದ ನಂತರ ನನ್ನಿಂದ ಸಲಹೆ ಮತ್ತು ತಂತ್ರಾಂಶ ಪಡೆದುಕೊಳ್ಳುವುದು ಸಹಜವಾಗಿತ್ತು. ಎರಡು ವರ್ಷ ಕಳೆದಾಗ ಸ್ವಲ್ಪ ಮುಂದವರೆದ ಪಿಸಿ ಬಂತು. ಆಗ ಲೇಸರ‍್ ಮುದ್ರಕವೂ ಬಂತು. ಈ ಲೇಸರ‍್ ಮುದ್ರಕ ವಿಜ್ಞಾನಿಗಳಿಗೆ ದೇವಲೋಕದಿಂದ ಬಂದ ವರದಂತೆ ಭಾಸವಾಯಿತು. ಅದರಲ್ಲಿ ವಿಜ್ಞಾನಿಗಳಿಗೆ ಅಗತ್ಯವಾದ ಸಮೀಕರಣ, ಗ್ರಾಫ್ ಎಲ್ಲ ಮುದ್ರಿಸಬಹುದಾಗಿತ್ತು.

ಆಗ ನಾವು ವರ್ಡ್‌‌ಪ್ರೋಸೆಸಿಂಗ್ (ಪದ ಸಂಸ್ಕರಣೆ) ಗೆ ಬಳಸುತ್ತಿದ್ದುದು ChiWriter ಎಂಬ ತಂತ್ರಾಂಶ. ಇದು ವಿಜ್ಞಾನಿಗಳಿಗೆಂದೆ ತಯಾರಿಸಿದ ತಂತ್ರಾಂಶ. ಸಮೀಕರಣಗಳನ್ನು ಸುಲಭವಾಗಿ ರಚಿಸಬಹುದಾಗಿತ್ತು. ಅದರಲ್ಲಿ ರಾಸಾಯನಿಕ ಸಮೀಕರಣ, ಪರಮಾಣು ಮತ್ತು ಅಣುಗಳ ರಚನೆ ಎಲ್ಲ ಮೂಡಿಸಬಹುದಿತ್ತು. ವಿಜ್ಞಾನದಲ್ಲಿ ಅಗತ್ಯವಾಗಿರುವ ಗ್ರೀಕ್ ಅಕ್ಷರಗಳನ್ನು (ಆಲ್ಫಾ, ಬೀಟಾ, ಒಮೆಗಾ, ಇತ್ಯಾದಿ) ಮೂಡಿಸಲು ವಿಶೇಷ ಫಾಂಟ್ ಇರುತ್ತಿತ್ತು. ಇಷ್ಟೇ ಅಲ್ಲದೆ ಫಾಂಟ್ ತಯಾರಿಸಲು ಒಂದು ಫಾಟ್ ಡಿಸೈನರ‍್ ಸವಲತ್ತು ಕೂಡ ಇತ್ತು. ಈ ಪಾಂಟ್ ಡಿಸೈನರ‍್ ಬಳಸಿ ನಾನು ಕನ್ನಡವನ್ನು ಮೂಡಿಸಲು ಅಗತ್ಯವದ ೬ ಫಾಂಟ್‌ಗಳನ್ನು ತಯಾರಿಸಿದೆ. ಇದು ಈಗಿನ ಫಾಂಟ್ ತಂತ್ರಜ್ಞಾನಕ್ಕಿಂತ ತುಂಬ ಭಿನ್ನವಾಗಿತ್ತು. ಕನ್ನಡದ ಪ್ರತಿ ಅಕ್ಷರವೂ ಒಂದು ಫಾಂಟ್ ಗ್ಲಿಫ್ (ಫಾಂಟ್‌ನಲ್ಲಿಯ ಒಂದು ಅಕ್ಷರ ಭಾಗ) ಆಗಬೇಕಿತ್ತು. ಮೂಲ ಅಕ್ಷರಗಳಿಗೆ ಒಂದು, “ಇ” ಕಾರ ಕ್ಕೆ ಒಂದು, ಒತ್ತುಗಳಿಗೆ ಒಂದು, ಹೀಗೆ ಹಲವು ಫಾಂಟ್‌ಗಳನ್ನು ತಯಾರಿಸಿದ್ದೆ. ಇದನ್ನು ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಲು ತುಂಬ ಸರ್ಕಸ್ ಮಾಡಬೇಕಿತ್ತು. ಒಂದು ಪ್ಯಾರಾ ತಯಾಡಿಸಲು ಸುಮಾರು ಅರ್ಧ ಗಂಟೆಯೇ ಹಿಡಿಯುತ್ತಿತ್ತು. ಇದನ್ನು ಬಳಸಿ ನಾನು ಕನ್ನಡದ ಯಾವ ಲೇಖನವನ್ನೂ ತಯಾರಿಸಿರಲಿಲ್ಲ. ಹೆಂಡತಿ ಊರಿಗೆ ಹೋಗಿದ್ದಾಗ ಒಂದು ಭಾನುವಾರ ಆಫೀಸಿಗೆ ಹೋಗಿ ಗಂಟೆಗಟ್ಟಲೆ ಕುಸ್ತಿ ಮಾಡಿ ಎರಡು ಪ್ಯಾರಾದ ಒಂದು ಪತ್ರ ತಯಾರಿಸಿ ಕಳುಹಿಸಿದ್ದೆ ಅಷ್ಟೆ.

ನೋಡಿ – ನನ್ನ ಗಣಕಾವಲೋಕನ -೨, ೧

ನನ್ನ ಗಣಕಾವಲೋಕನ – ೨
ಕಾರ್ಡ್‌ ಪಂಚಿಂಗ್ ಮತ್ತು ಪ್ಲಾಟರ‍್

ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು!

ನಾವು ಕಂಪ್ಯೂಟರ‍್ ಪ್ರೋಗ್ರಾಂ ಮಾಡಲು ಕಾರ್ಡ್‌‌ಗಳನ್ನು ಬಳಸುತ್ತಿದ್ದೆವು ಅಂದಿದ್ದೆನಲ್ಲ. ಒಂದು ಸಾಲಿನಲ್ಲಿ ಒಂದು ಸಣ್ಣ ತಪ್ಪಾದರೆ ಇಡಿ ಕಾರ್ಡನ್ನೆ ಪೂರ್ತಿಯಾಗಿ ಇನ್ನೊಮ್ಮೆ ಟೈಪ್ ಮಾಡಿ ತಯಾರಿಸಬೇಕಿತ್ತು. ಕೊನೆಗೊಮ್ಮೆ ಹೀಗೆ ಕೆಟ್ಟುಹೋದ ಕಾರ್ಡ್‌‌ಗಳು ತುಂಬ ಸಂಗ್ರಹವಾಗಿರುತ್ತಿದ್ದವು. ಈ ಕಾರ್ಡ್‌‌ಗಳಿಗೆ ಹಲವು ವರ್ಷಗಳ ನಂತರ ನಮ್ಮ ಮಕ್ಕಳು ಚಿಕ್ಕವಾಗಿದ್ದಾಗ ನಮ್ಮ ಮನೆಯಲ್ಲಿ ಒಂದು ಉಪಯೋಗವನ್ನು ಕಂಡುಕೊಂಡಿದ್ದೆವು. ಅದೇನಿರಬಹುದೆಂಬುದನ್ನು ನಿಮ್ಮ ಊಹೆಗೆ ಬಿಡುತ್ತಿದ್ದೇನೆ!

ಬಿಎಆರ್‌ಸಿಯಲ್ಲಿ ಆಗ ಯಾರಿಗೇ ಕಂಪ್ಯೂಟರ‍್ ಬಳಸಬೇಕಿದ್ದರೆ ಕಂಪ್ಯೂಟರ‍್ ವಿಭಾಗಕ್ಕೇ ಹೋಗಿ ಬಳಸಬೇಕಿತ್ತು. ಸ್ವಲ್ಪ ವರ್ಷಗಳ ನಂತರ ಮೊನಿಟರ‍್ ಉಳ್ಳ ಗಣಕಗಳ ಪ್ರವೇಶ ಆಯಿತು. ಅದರೂ ಅವು ಈಗಿನ ಗಣಕಗಳಂತೆ ಖಾಸಾ ಗಣಕಗಳಲ್ಲ (personal computer). ಈ ಗಣಕಗಳನ್ನು ಬಳಸಬೇಕಿದ್ದರೂ ಕಂಪ್ಯೂಟರ‍್ ಡಿಪಾರ್ಟ್‌‌ಮೆಂಟ್‌ಗೇ ಹೋಗಬೇಕಿತ್ತು. ಅಲ್ಲಿ ಕೆಲವು ಟರ್ಮಿನಲ್‌ಗಳನ್ನು ಒಂದು ಕೋಣೆಯಲ್ಲಿ ಸಾಲಾಗಿ ಇಟ್ಟಿದ್ದರು. ಟರ್ಮಿನಲ್ ಅಂದರೆ ಒಂದು ಮೋನಿಟರ‍್ ಪರದೆ ಮತ್ತು ಕೀಬೋರ್ಡ್‌ ಅಷ್ಟೆ. ಇದು ಮುಖ್ಯ ಗಣಕಕ್ಕೆ ಕೇಬಲ್ ಮೂಲಕ ಸಂಪರ್ಕ ಹೊಂದಿರುತ್ತಿತ್ತು. ಈ ಗಣಕ ಬಂದ ನಂತರ ಪ್ರೋಗ್ರಾಮ್ಮಿಂಗ್ ಸ್ವಲ್ಪ ವೇಗವಾಗಿ ಆಗತೊಡಗಿತು. ಮೊದಲಿನಂತೆ ಕಾರ್ಡ್‌ ತೂತು ಮಾಡುವ ಕೆಲಸ ಇರಲಿಲ್ಲ. ತಪ್ಪು ಮಾಡಿದರೆ ಅದು ಇಂಗ್ಲಿಷಿನಲ್ಲೇ ಮತ್ತು ಆಗಿಂದ್ದಾಗಲೇ ಬಯ್ಯುತ್ತಿತ್ತು, ಹಿಂದಿನ ಗಣಕದಂತೆ ರಷ್ಯನ್ ಭಾಷೆಯಲ್ಲಲ್ಲ!  ಇಲ್ಲೂ ನಮ್ಮ ಪ್ರೋಗ್ರಾಂನ ಔಟ್‌ಪುಟ್‌ ಅನ್ನು ನಾವು ಕಾಗದದಲ್ಲಿ ಮುದ್ರಿಸಿ ತೆಗೆದುಕೊಂಡು ಹೋಗಿ ಅದನ್ನು ಪರಿಶೀಲಿಸುತ್ತಿದ್ದೆವು.

ಬಿಎಆರ್‌ಸಿಯ ಗಣಕ ವಿಭಾಗದಲ್ಲಿ ದೊಡ್ಡ ಪ್ಲಾಟ್ಟರ‍್ ಇತ್ತು. ಅದರಲ್ಲಿ ದೊಡ್ಡ ಅಥವಾ ಚಿಕ್ಕ ಹಾಳೆಯನ್ನು ಜೋಡಿಸಿ ಸೂಕ್ತ ಪ್ರೋಗ್ರಾಂ ಮೂಲಕ ನಾವು ಪ್ಲಾಟಿಂಗ್ ಮಾಡಬಹುದಿತ್ತು. ನಾವು ಪ್ರಯೋಗಶಾಲೆಯಲ್ಲಿ ಪಡೆದ ಮಾಹಿತಿಯನ್ನು x-y ರೇಖಾಚಿತ್ರದ ಮೂಲಕ ಬಿಂಬಿಸಬೇಕು. ಇದನ್ನೇ ಪ್ಲಾಟಿಂಗ್ ಎನ್ನುವುದು. ಸಾಮಾನ್ಯವಾಗಿ ರಸಾಯನಶಾಸ್ತ್ರ ವಿಭಾಗದ ಎಲ್ಲ ವಿಜ್ಞಾನಿಗಳು ಗ್ರಾಫ್ ಕಾಗದದಲ್ಲೇ ಪ್ಲಾಟಿಂಗ್ ಮಾಡುತ್ತಿದ್ದರು. ನಾನು ರಸಾಯನಶಾಸ್ತ್ರ ವಿಭಾಗಕ್ಕೇ ಮೊದಲನೆಯವನಾಗಿ ಈ ಕಾರ್ಯಕ್ಕೆ ಗಣಕ ಮತ್ತು ಅದಕ್ಕೆ ಜೋಡಿಸಿದ್ದ ಪ್ಲಾಟರ‍್ ಬಳಸಿದೆ. ನಂತರ ರಸಾಯನಶಾಸ್ತ್ರ ವಿಭಾಗದ ಹಲವು ವಿಜ್ಞಾನಿಗಳು ನನ್ನ ಪ್ರೋಗ್ರಾಂ ಬಳಸಿ ತಮ್ಮ ಮಾಹಿತಿಯನ್ನು ಪ್ಲಾಟಿಂಗ್ ಮಾಡತೊಡಗಿದರು.

ಈ ಪ್ಲಾಟರ್‌ಗೆ x-y ಕೋಷ್ಟಕದಲ್ಲಿ ಏನೇ ಮಾಹಿತಿ ನೀಡಿ ಅದನ್ನು ಚಿತ್ರಿಸಲು ಸರಿಯಾದ ಪ್ರೋಗ್ರಾಂ ಊಡಿಸಿದರೆ ಅದು ಅದರ ಪ್ಲಾಟಿಂಗ್ ನೀಡುತ್ತಿತ್ತು ಅಂದೆನಲ್ಲ. ನಾನು ನನ್ನ ಹೆಸರನ್ನು ಕನ್ನಡ ಲಿಪಿಯಲ್ಲಿ ಒಂದು ಗ್ರಾಫ್ ಕಾಗದದಲ್ಲಿ ಬರೆದೆ. ಅನಂತರ ಅದರಲ್ಲಿಯ ಪ್ರತಿ ಚುಕ್ಕಿಗೂ x-y value ಕೋಷ್ಟಕ ತಯಾರಿಸಿದೆ. ಈ ಕೋಷ್ಟಕವನ್ನು ನನ್ನ ಪ್ರೋಗ್ರಾಂಗೆ ಊಡಿಸಿದಾಗ ಪ್ಲಾಟರ‍್ ಕಾಗದದಲ್ಲಿ ನನ್ನ ಹೆಸರನ್ನು ಕನ್ನಡ ಲಿಪಿಯಲ್ಲಿ ಬರೆಯಿತು. ಆಗಿನ ಕಾಲಕ್ಕೆ ಅದು ನನಗೆ ಒಂದು ರೀತಿಯ ಹೆಮ್ಮೆ ಆಗಿತ್ತು. ಈಗಿನವರಿಗೆ ಇದು ತುಂಬ silly ಅನ್ನಿಸಬಹುದು.

ನೋಡಿ – ನನ್ನ ಗಣಕಾವಲೋಕನ – ೧

ನನ್ನ ಗಣಕಾವಲೋಕನ – ೧
ಆರಂಭದ ದಿನಗಳು

ನಾನು ಗಣಕಗಳನ್ನು ಬಳಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಮುವತ್ತು ವರ್ಷಗಳಾದವು. ಈಗಿನ ವಿದ್ಯಾರ್ಥಿಗಳು, ಗಣಕಗಳ ಇತಿಹಾಸವನ್ನು ಕಲಿಯುವಾಗ ಪಠ್ಯಪುಸ್ತಕದಲ್ಲಿ ಓದುವ, ಪರದೆ ಇಲ್ಲದ ಮೊದಲನೆಯ ಅಥವಾ ಎರಡನೆಯ ತಲೆಮಾರಿನ ಗಣಕಗಳು ಅಂದರೆ ಕಾರ್ಡ್‌‌ಪಂಚಿಂಗ್ ಮಾಡಬೇಕಾದವುಗಳು ಇಂತಹವುಗಳನ್ನೆಲ್ಲ ನಾನು ಬಳಸಿದ್ದೇನೆ. ಗಣಕಗಳ ಜೊತೆ ನನ್ನ ದೀರ‍್ಘ ಒಡನಾಟವನ್ನು ಹಲವು ಕಂತುಗಳಲ್ಲಿ ಈ ಬ್ಲಾಗ್ ತಾಣದಲ್ಲಿ ನೀಡಲು ತೀರ್ಮಾನಿಸಿದ್ದೇನೆ.

ಗಣಕಗಳ ಬಗ್ಗೆ ನಾನು ಮೊತ್ತಮೊದಲ ಬಾರಿಗೆ ಓದಿದ್ದು ಎಂದರೆ ಪಾವೆಂ ಸಂಪಾದಕತ್ವದಲ್ಲಿ ಬರುತ್ತಿದ್ದ ಕಸ್ತೂರಿಯಲ್ಲಿ. ಅದರಲ್ಲಿ ಓದುಗರು ತಮ್ಮ ಜೀವನದ ಸ್ವಾರಸ್ಯಕರ ಘಟನೆಗಳನ್ನು ಬರೆಯುವ ಒಂದು ಅಂಕಣವಿರುತಿತ್ತು. ಆ ಅಂಕಣದ ಹೆಸರು ಈಗ ನೆನಪಿಗೆ ಬರುತ್ತಿಲ್ಲ. ಇರಲಿ. ಅದರಲ್ಲಿ ಒಬ್ಬರು ತಾವು ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಗಣಕವನ್ನು ಕಂಡಾಗ ಆದ ಅನುಭವವನ್ನು ದಾಖಲಿಸಿದ್ದರು. ಅಲ್ಲಿಯ ತಂತ್ರಜ್ಞರು ಅವರಿಗೆ ಹೇಳಿದರಂತೆ. ನೀವು ಒಂದು ದಿನಾಂಕವನ್ನು ನೀಡಿದರೆ ಗಣಕ ಅದು ಯಾವ ವಾರ ಎಂಬುದನ್ನು ತಿಳಿಸುತ್ತದೆ ಎಂದು. ಇವರು ನೋಡೋಣ ಎಂದು ಅದೇ ವರ್ಷದ ಫೆಬ್ರವರಿ ೩೦ ಎಂದು ದಾಖಲಿಸಿದರಂತೆ. ಅದಕ್ಕೆ ಗಣಕವು ನೀವು ತಪ್ಪಾದ ದಿನಾಂಕವನ್ನು ನೀಡಿದ್ದೀರಿ, ಪುನ ಪ್ರಯತ್ನಿಸಿ ಎಂದಿತಂತೆ. ಇವರು ಮತ್ತೊಮ್ಮೆ ಅದೇ ದಿನಾಂಕವನ್ನು ನೀಡಿದರು. ಅದು ನೀವು ಮತ್ತೊಮ್ಮೆ ತಪ್ಪಾದ ಅದೇ ದಿನಾಂಕವನ್ನು ನೀಡಿದ್ದೀರಿ ಎಂದಿತಂತೆ. ಇವರು ಮೂರನೆ ಬಾರಿಗೆ ಅದೇ ದಿನಾಂಕವನ್ನು ನೀಡಲು ಹೊರಟಾಗ ತಂತ್ರಜ್ಞರು ಅಲ್ಲಿಂದ ಮೆತ್ತಗೆ ಜಾಗ ಖಾಲಿ ಮಾಡಿದರಂತೆ. ಮೂರನೆ ಬಾರಿಗೆ ಗಣಕವು “ನಿಮಗೆ ಎಷ್ಟು ಸಲ ಹೇಳುವುದು? ಮೂರ್ಖರಿಗೆ ನಾನು ಉತ್ತರಿಸುವುದಿಲ್ಲ” ಎಂದಿತಂತೆ. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಗಣಕ ಬಳಕೆ ಬಂದದ್ದು ಟಾಟಾ ಮೂಲಭೂತ ಸಂಶೋಧನಾ ಕೇಂದ್ರದಲ್ಲಿ ಎಂಬುದಂತೂ ನಿಜ. ನಾನು ಆ ಗಣಕವನ್ನು ನೋಡಿಲ್ಲ.

ನಾನು ೧೯೮೧ರಲ್ಲಿ ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿಕೊಂಡೆ. ಪ್ರತಿ ವರ್ಷ ಬಿಎಆರ್‌ಸಿಯಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಇಂಜಿನಿಯರಿಂಗ್, ಇತ್ಯಾದಿ ಪದವೀಧರದನ್ನು ಕೆಲಸಕ್ಕೆ ಸೇರಿಸಿಕೊಂಡು ಒಂದು ವರ್ಷದ ತರಬೇತಿ  ಶಾಲೆ ನಡೆಸುತ್ತಾರೆ. ಒಂದು ವರ್ಷ ಕಾಲ ಹಾಸ್ಟೆಲಿನಲ್ಲಿದ್ದುಕೊಂಡು ಬಹುಮಟ್ಟಿಗೆ ಕಾಲೇಜು ವಿದ್ಯಾರ್ಥಿಗಳಂತದೇ ಜೀವನ. ನಾನು ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು ರಸಾಯನಶಾಸ್ತ್ರದಲ್ಲಿ. ಬಿಎಆರ್‌ಸಿಯ ತರಬೇತಿಯಲ್ಲಿ, ಭೌತಶಾಸ್ತ್ರ ಮತ್ತು ಇಂಜಿನಯರಿಂಗ್ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ನಮಗೆ ಗಣಕ ವಿಷಯ ತುಂಬ ಕಡಿಮೆ ಇತ್ತು. ನಮಗೆ ಗಣಕ ವಿಷಯದಲ್ಲಿ ಪ್ರಯೋಗಶಾಲೆಯೂ ಇರಲಿಲ್ಲ. ಆದರೂ ನನಗೆ ಈ ಗಣಕವನ್ನು ಕಲಿಯಲೇಬೇಕು ಎಂದು ಅನಿಸಿತು. ಹೇಗೂ ವಿಷಯ (ಥಿಯರಿ) ಗೊತ್ತಿತ್ತಲ್ಲ. ನನ್ನ ಹಾಸ್ಟೆಲಿನಲ್ಲಿ ನನ್ನ ಪಕ್ಕದ ಕೋಣೆಯ ವಾಸಿ ಭೌತಶಾಸ್ತ್ರದ ವಿದ್ಯಾರ್ಥಿ. ಆತನ ಸಹಾಯ ತೆಗದುಕೊಂಡು ಪ್ರಾಯೋಗಿಕವಾಗಿ ಕಲಿಯಲು ಪ್ರಾರಂಭಿಸಿಯೇ ಬಿಟ್ಟೆ.

ಈಗಿನ ಕಾಲದ ಮಂದಿಗೆ ಗಣಕ ಕಲಿಯಬೇಕಿದ್ದರೆ ಗಣಕದ ಮುಂದೆ ಕುಳಿತುಕೊಂಡು ನೇರವಾಗಿ ಕೀಲಿಮಣೆ ಕುಟ್ಟಿ ಕಲಿತೇ ಗೊತ್ತಿರುವಾಗ ನಾನು ಹೇಳುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಸ್ವಲ್ಪ ಕಷ್ಟವಾಗಬಹುದು. ಆಗ ನಾನು ಬಿಎಆರ್‌ಸಿಯಲ್ಲಿ ಬಳಸಿದ್ದು ಒಂದು ರಷ್ಯದವರು ನಿರ್ಮಿಸಿದ ಗಣಕ. ಅದಕ್ಕೆ ಮೋನಿಟರ‍್ ಪರದೆ ಇರಲಿಲ್ಲ. ನಾವು ಏನು ಪ್ರೋಗ್ರಾಂ ನೀಡಬೇಕೋ ಅದನ್ನು ಕಾರ್ಡ್‌‌ಗಳಲ್ಲಿ ತೂತು ಕೊರೆದು ಅವುಗಳನ್ನು ಒಂದು ಕಾರ್ಡ್‌ ರೀಡರ್‌ಗೆ ನೀಡಬೇಕು. ಅದು ಅವುಗಳನ್ನೆಲ್ಲ ಓದಿ ಔಟ್‌ಪುಟ್ ಅನ್ನು ಕಾಗದದಲ್ಲಿ ಮುದ್ರಿಸಿ ನೀಡುತ್ತಿತ್ತು. ನಾವು ಆಗ ಬಳಸುತ್ತಿದ್ದುದು FORTRAN ಭಾಷೆ. ಆಗ ಪ್ರೋಗ್ರಾಂ ಮಾಡುವುದರಲ್ಲಿ ತುಂಬ ಶಿಸ್ತು ಬೇಕಿತ್ತು. ಯಾಕೆಂದರೆ ತಪ್ಪು ಮಾಡಿದರೆ ತಕ್ಷಣ ತಿದ್ದಿಕೊಳ್ಳಲು ಸಾಧ್ಯವಿರಲಿಲ್ಲ. ಮೊದಲು ಪುಸ್ತಕದಲ್ಲಿ Flowchart ತಯಾರಿಸಿ, ನಂತರ ಇಡಿಯ ಪ್ರೋಗ್ರಾಂ ಅನ್ನು ಬರೆಯುತ್ತಿದ್ದೆವು. ನಂತರ ಅದನ್ನು ಕಾರ್ಡ್‌ಪಂಚಿಂಗ್ ಕೊಠಡಿಯಲ್ಲಿ ಕುಳಿತು ಪ್ರತಿಯೊಂದು ಸಾಲಿಗೂ ಒಂದು ಕಾರ್ಡಿನಂತೆ ತೂತು ಮಾಡಿ ಇಡಿಯ ಪ್ರೋಗ್ರಾಂಗೆ ನೂರಾರು ಕಾರ್ಡ್‌ಗಳನ್ನು ತಯಾರು ಮಾಡುತ್ತಿದ್ದೆವು. ಕೊನೆಗೆ ಅಷ್ಟೂ ಕಾರ್ಡ್‌‌ಗಳನ್ನು ಒಟ್ಟು ಮಾಡಿ ಅದಕ್ಕೆ ಒಂದು ರಬ್ಬರ‍್ ಬ್ಯಾಡ್ ಸುತ್ತಿ ಕಂಪ್ಯೂಟರ‍್ ಇದ್ದ ಕೊಠಡಿಯ ಹೊರಗೆ ಈ ಕಾರ್ಡ್‌‌ಗಳನ್ನು ಇಡಲೆಂದೆ ನಿಯಮಿತವಾದ ಜಾಗದಲ್ಲಿ ಇಡುತ್ತಿದ್ದೆವು. ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಒಮ್ಮೆ ಮತ್ತು ಸಾಯಂಕಾಲ ಇನ್ನೊಮ್ಮೆ ಕಂಪ್ಯೂಟರ‍್ ಒಪರೇಟರ‍್ ಬಂದು ಈ ಎಲ್ಲ ಕಾರ್ಡ್‌‌ಗಳನ್ನು ಅಂದರೆ ಎಲ್ಲರ ಪ್ರೋಗ್ರಾಮ್‌ಗಳನ್ನು ಆತ ಕಂಪ್ಯೂಟರಿಗೆ ಒಂದರ ನಂತರ ಒಂದರಂತೆ ಊಣಿಸುತ್ತಿದ್ದ. ಆ ಜಾಗಕ್ಕೆ ನಮಗೆ ಸಾಮಾನ್ಯವಾಗಿ ಪ್ರವೇಶ ಇರುತ್ತಿರಲಿಲ್ಲ. ಎಲ್ಲರ ಪ್ರೋಗ್ರಾಂಗಳು ಕಂಪ್ಯೂಟರಿನಲ್ಲಿ ಚಾಲನೆಯಾಗಿ ಎಲ್ಲರಿಗೂ ಅದು ಉತ್ತರವನ್ನು ಕಾಗದದಲ್ಲಿ ಮುದ್ರಿಸಿ ನೀಡಿದ ನಂತರ ಆಪರೇಟರ‍್ ಈ ಎಲ್ಲ ಮುದ್ರಣಗಳನ್ನು ಹೊರಗೆ ತಂದು ರಾಶಿ ಹಾಕುತ್ತಿದ್ದ. ನಾವು ಆ ರಾಶಿಯಲ್ಲಿ ನಮ್ಮ ಪ್ರಿಂಟ್ಔಟನ್ನು ಹುಡುಕಿಕೊಳ್ಳುತ್ತಿದ್ದೆವು.  ಆ ಗಣಕವೋ ರಷ್ಯ ದೇಶದಿಂದ ಆಮದಾದುದು. ಅದಕ್ಕೆ ಇಂಗ್ಲಿಷ್ ಬರುತ್ತಿರಲಿಲ್ಲ. ಪ್ರೋಗ್ರಾಂನಲ್ಲಿ ಏನಾದರೂ ತಪ್ಪಾದರೆ ಅದು ರಷ್ಯನ್ ಭಾಷೆಯಲ್ಲಿ ಬಯ್ಯುತ್ತಿತ್ತು! ನಾವು ಗ್ರಂಥಾಲಯಕ್ಕೆ ಹೋಗಿ ಅಲ್ಲಿದ್ದ ದಪ್ಪ ದಪ್ಪ ಪುಸ್ತಕಗಳಲ್ಲಿ (manual) ಹುಡುಕಾಡಿ ಈ ಪ್ರೋಗ್ರಾಂನಲ್ಲಿ ನಾವು ಎಲ್ಲಿ ಯಾವ ತಪ್ಪು ಮಾಡಿದ್ದೇವೆ ಎಂದು ತಿಳಿದುಕೊಳ್ಳಬೇಕಾಗಿತ್ತು.

ಈಗಿನ ಕಾಲದಲ್ಲಿ ಅರ್ಧ ಗಂಟೆಯಲ್ಲಿ ತಯಾರು ಮಾಡಬಲ್ಲ ಒಂದು ಪ್ರೋಗ್ರಾಂ ತಯಾರಿಸಲು ಆಗ ವಾರಗಳ ಕಾಲ, ಕೆಲವೊಮ್ಮೆ ತಿಂಗಳುಗಳೇ ಹಿಡಿಯುತ್ತಿದ್ದವು. ಆದುದರಿಂದಲೇ ನಮ್ಮಲ್ಲಿ ಒಂದು ರೀತಿಯ ಶಿಸ್ತು ಮೂಡಿಬಂದಿತ್ತು. ಈಗಿನವರಂತೆ ತಪ್ಪು ಮಾಡುವುದು, backspace ಹೊಡೆಯುವ ಲಕ್ಸುರಿ ಆಗ ಇರಲಿಲ್ಲ.

ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ್ರ
ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ -

ಇವರಿಗೆ,

ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ

ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ,

ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ)

ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ,

ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧.

ಮಾನ್ಯರೆ,

ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ ಕುರಿತು.

ಉಲ್ಲೇಖ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಡಳಿತ ಕನ್ನಡಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿಯವರ ಪತ್ರ ಸಂಖ್ಯೆ ಕಸಂವಾಪ್ರ ೧೧ ಕೆಓಎಲ್ ೨೦೦೮, ದಿ. ೧೯-೦೫-೨೦೦೮

ಮೇಲೆ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳು ಈ ಕೆಳಗಿನಂತಿವೆ.

೧. ಮೇಲೆ ಉಲ್ಲೇಖಿಸಿದ ಸರಕಾರೀ ಘೋಷಣೆಯಲ್ಲಿ ಈಗ ಈ ದ್ವಿಭಾಷಾ ಅಕ್ಷರರೂಪಗಳ (ಫಾಂಟ್) ಸಂಕೇತಗಳನ್ನು ನಿಗದಿಪಡಿಸುವುದು ಏಕೆ, ಇದರಿಂದ ಯಾವ ಸಮಸ್ಯೆಯ ಪರಿಹಾರ ಆಗುತ್ತದೆ ಎಂಬ ವಿವರಗಳು ಇಲ್ಲ. ದ್ವಿಭಾಷ ಸಂಕೇತಗಳ ನಿಗದೀಕರಣ ಯಾವ ಉದ್ದೇಶಕ್ಕೋಸ್ಕರ ಮಾಡುತ್ತಿರುವುದು ಎಂಬುದನ್ನು ಸ್ಪಷ್ಟೀಕರಿಸಿದರೆ ತುಂಬ ಒಳ್ಳೆಯದಿತ್ತು. ಉದ್ದೇಶವನ್ನು ಸ್ಪಷ್ಟೀಕರಿಸಿದರೆ ಆ ಸಮಸ್ಯೆಗೆ ಪರಿಣತರಿಂದ ಸರಿಯಾದ ಪರಿಹಾರ ಸಿಗುವ ಸಾಧ್ಯತೆಗಳಿವೆ.

೨. ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಕರ್ನಾಟಕ ಸರಕಾರದ “ನುಡಿ” ತಂತ್ರಾಂಶವೂ ಈ ವಿಧಾನದಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ಮಾಹಿತಿಯ ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡುಕಲೂ ಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್ ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ. ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸರಕಾರವು ದಶಕಗಳ ಹಿಂದಿನ ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟೇ ಸರಿ.

೩. ಕನ್ನಡದಲ್ಲಿ ಈಗಾಗಲೇ ಹಲವು ಫಾಂಟ್ ಆಧಾರಿತ ತಂತ್ರಾಂಶಗಳು ಅಸ್ಥಿತ್ವದಲ್ಲಿವೆ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ತೆರೆಯಲು ಆಗುತ್ತಿಲ್ಲ. ಹೀಗಿರುವಾಗ ಸರಕಾರವು ಇನ್ನೊಂದು ಅಕ್ಷರರೂಪಕ್ಕೆ ಸಂಕೇತಗಳನ್ನು ನಿಗದಿಪಡಿಸಹೊರಟಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.

೪. ಸರಕಾರದ ಹಲವು ವಿಭಾಗಗಳಲ್ಲಿ ಈಗಾಗಲೆ ಫಾಂಟ್ ಆಧಾರಿತ “ನುಡಿ” ತಂತ್ರಾಂಶವನ್ನು ಬಳಸಿ ತುಂಬ ಮಾಹಿತಿ, ಕಡತ, ಪತ್ರಗಳನ್ನು ತಯಾರಿಸಿ ಸಂಗ್ರಹಿಸಲಾಗಿದೆ. ಇವುಗಳನ್ನೆಲ್ಲ ದತ್ತಸಂಚಯ (ಡಾಟಾಬೇಸ್) ಮಾಡಿ ಅದರಲ್ಲಿರುವ ಮಾಹಿತಿಯನ್ನು ಹುಡುಕುವುದು, ಅಕರಾದಿಯಾಗಿ ವಿಂಗಡಿಸುವುದು, ಇತ್ಯಾದಿ ಮಾಡಬೇಕಾದರೆ ಅವನ್ನೆಲ್ಲ ಮೊದಲು ಯುನಿಕೋಡ್‌ಗೆ ಬದಲಿಸಬೇಕಾಗುತ್ತದೆ. ಇದು ದೊಡ್ಡ ಕಾರ್ಯ. ಇದಕ್ಕೆ ತುಂಬ ಶಕ್ತಿ ಮತ್ತು ಹ

ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ

ಹೋಗುತ್ತೇನೆ ಎಂಬಂತಿದೆ. ಈ ಮಾತನ್ನು ಈಗ ಹೇಳಲು ಕಾರಣವಿದೆ. ನಿನ್ನೆಯ (ಜೂನ್ ೩, ೨೦೦೮) ಕನ್ನಡ ಪ್ರಭ

ಪತ್ರಿಕೆಯಲ್ಲಿ ಸರಕಾರದ ಒಂದು ಚಿಕ್ಕ ಪ್ರಕಟಣೆ ಇದೆ. ಅದರ ಪ್ರಕಾರ ಸರಕಾರವು ದ್ವಿಭಾಷಾ ಅಕ್ಷರಶೈಲಿಯನ್ನು (bi-

lingual font) ರೂಪಿಸಿದ್ದು ಸದ್ಯದಲ್ಲೇ ಅದನ್ನು ಮಾನಕ (standard) ಎಂದು ಘೋಷಿಸಲಾಗುವುದು. ಇದರ ಬಗ್ಗೆ

ಯಾರದಾದರೂ ಸಲಹೆ ಆಕ್ಷೇಪಗಳಿದ್ದಲ್ಲಿ ಜೂನ್ ೨೧ರ ಒಳಗೆ ಸರಕಾರಕ್ಕೆ ಲಿಖಿತ ಮೂಲಕ (ಇ-ಮೈಲ್ ಮೂಲಕ

ಅಲ್ಲ) ತಿಳಿಸಬೇಕು. ಈ ಫಾಂಟಿನ ವಿವರ ಮತ್ತು ಸರಕಾರೀ ಪ್ರಕಟಣೆಯನ್ನು www.karnataka.gov.in

ತಾಣದಲ್ಲಿ ಓದಬಹುದು.

ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಈ ಮೂಲಕ ಮಾಹಿತಿಯ

ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ

ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ

ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ

ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು

ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡಕಲೂ ಬಹುದು. ಇದನ್ನು ನೀವೆಲ್ಲರೂ

ಗಮನಿಸಿರಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ

ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು

ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್

ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ.

ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ.

ವಸ್ತುಸ್ಥಿತಿ ಹೀಗಿರುವಾಗ ಸರಕಾರವು ಯಾರದೋ ಪರಿಣತರಲ್ಲದವರ ಮಾತನ್ನು ನಂಬಿ ದಶಕಗಳ ಹಿಂದಿನ

ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ

ಕೊಡಲಿ ಪೆಟ್ಟೇ ಸರಿ. ಸರಾಕರದ ಈ ಬಾಲಿಶ ಕಾರ್ಯವನ್ನು ಈ ಹಂತದಲ್ಲೇ ಪ್ರತಿಭಟಿಸಿ ಅದನ್ನು ಅಲ್ಲಿಯೇ ನಿಲ್ಲಿಸುವುದು

ಅತೀ ಅಗತ್ಯ. ಈ ಬಗ್ಗೆ ಪ್ರತಿಭಟಿಸಲು ಇಚ್ಛಿಸುವವರು ಮೇಲೆ ಸೂಚಿಸಿದ ಅಂತರಜಾಲದಲ್ಲಿ ನೀಡಿರುವ ಪ್ರಕಟಣೆಯನ್ನು

ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ವಿಳಾಸಕ್ಕೆ ನಿಮ್ಮ ಪ್ರತಿಭಟನೆಯ ಪತ್ರವನ್ನು ರವಾನಿಸಬೇಕಾಗಿ

ವಿನಂತಿ.

-ಪವನಜ

ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್
ಮೈಕೇಲ್ ಕಪ್ಲಾನ್ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು “ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ”.

ಮೈಕ್ರೋಸಾಫ್ಟ್ ತಂತ್ರಾಂಶಗಳಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಅಳವಡಿಕೆ ಬಗ್ಗೆ ನಿಮಗೆ ಏನಾದರೂ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಿದ್ದರೆ ಕಪ್ಲಾನರನ್ನು ನೇರವಾಗಿ ಸಂರ್ಕಿಸಲು ಇದೊಂದು ಸದವಕಾಶ. ಕಪ್ಲಾನರು ಮುಖ್ಯವಾಗಿ ಮಾಹಿತಿಯ ಸಂಗ್ರಹ ಮತ್ತು ವಿಂಗಡಣೆ (sorting issues) ಬಗ್ಗೆ ಮಾತನಾಡಲಿದ್ದಾರೆ. ಮೈಕ್ರೋಸಾಫ್ಟ್ ತಂತ್ರಾಂಶಗಳಲ್ಲಿ ಕನ್ನಡದ ಫಾಂಟ್ ಮತ್ತು ಕನ್ನಡದ ಹೊದಿಕೆ (Laguage Interface Pack  -LIP) ಗಳಲ್ಲಿ ಇರುವ ತೊಂದರೆ ಬಗ್ಗೆ ಹೇಳಿಕೊಳ್ಳಲು ಇವರು ಸೂಕ್ತ ವ್ಯಕ್ತಿ ಅಲ್ಲ. ಆದರೂ ನೀವು ಬಂದು ಅವರೊಡನೆ ಈ ವಿಷಯಗಳನ್ನು ಚರ್ಚಿಸಬಹುದು. ನೀವು ನೀಡಿದ feedbackಗಳನ್ನು ಇವರು ನೇರವಾಗಿ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗೆ ಒಯ್ಯುವುದರಿಂದ ಸಮಸ್ಯೆಗಳ ಪರಿಹಾರವು ಸ್ವಲ್ಪ ಬೇಗನೆ ಆಗಬಹುದು. ಆದುದರಿಂದ ನೀವೆಲ್ಲ ಬನ್ನಿ. ವಿವರಗಳಿಗೆ ಬೆಂಗಳೂರು ಡಾಟ್‌ನೆಟ್ ಯೂಸರ್‍ ಗ್ರೂಪ್‌ನ ಅಂತರಜಾಲ ತಾಣವನ್ನು ವೀಕ್ಷಿಸಿ (http://bdotnet.in).

ಜಂಗಮವಾಣಿಯಲ್ಲಿ ಕನ್ನಡ
ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯಾಗಾರ
ದಯವಿಟ್ಟು ಈ ಪುಟ ಓದಿ -http://vishvakannada.com/node/338. ಅದರ ಕೊನೆಯಲ್ಲಿ ಬರುವ ಒಂದು ಸಂಭಾಷಣೆಯ ಕಡೆಗೆ ಸ್ವಲ್ಪ ಜಾಸ್ತಿ ಗಮನ ಕೊಡಿ. ನಮ್ಮಲ್ಲಿ ಬಹಪಾಲು ಜನರ ಅವಸ್ಥೆ ಹೀಗೆಯೇ ಇದೆ. ಕೆಲವರಿಗೆ ಕನ್ನಡವನ್ನು ಗಣಕದಲ್ಲಿ ಬಳಸಲು ಗೊತ್ತಿದೆ. ಪ್ರೋಗ್ರಾಮ್ಮಿಂಗ್ ಮಾಡಲೂ ಗೊತ್ತಿದೆ. ಆದರೆ ಅಂತಹವರ ಸಂಖ್ಯೆ ಬಹು ಕಡಿಮೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸಮಗ್ರ ಇತಿಹಾಸ, ಸ್ಥಿತಿಗತಿ, ಮುಂದಿನ ದಾರಿ, ಆಲೋಚನೆಗಳು, ಮಾಡಬೇಕಾಗಿರುವ ಕ್ರಿಯಾಯೋಜನೆ, ಇತ್ಯಾದಿಗಳ ಬಗ್ಗೆ ಒಂದು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಡಿಸೆಂಬರ್‍ ೧೬, ೨೦೦೭ರ ಭಾನುವಾರ ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೩೦ರ ತನಕ ಈ ಕಾರ್ಯಾಗಾರ ನಡೆಯುತ್ತದೆ. ಮೂರು ದಶಕಗಳ ಹಿಂದೆಯೇ, ಕನ್ನಡದಲ್ಲಿ ಯಾವುದೇ ಲಿಪಿ ತಂತ್ರಾಂಶವೂ ಇಲ್ಲದಿದ್ದ ಕಾಲದಲ್ಲಿ ಇಂಗ್ಲಿಷ್ ಲಿಪಿಯಲ್ಲಿಯೇ ಕಷ್ಟಪಟ್ಟು ಮುದ್ದಣನ ಬಗ್ಗೆ ಸಂಶೋಧನೆ ನಡೆಸಿದ ಡಾ. ಶ್ರೀನಿವಾಸ ಹಾವನೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಇಗೋ ಕನ್ನಡ ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಅಧ್ಯಕ್ಷರಾಗಿರುತ್ತಾರೆ. ಭಾರತೀಯ ಭಾಷೆಗಳಿಗೆ ಪ್ರಥಮವಾಗಿ ಧ್ವನ್ಯಾತ್ಮಕ ಕೀಲಿಮಣೆ ಅಳವಡಿಸಿದ ಕೆ. ಪಿ. ರಾವ್ ಅವರು ಮುಖ್ಯ ಅತಿಥಿಯಾಗಿರುತ್ತಾರೆ. ಕಾರ್ಯಾಗಾರಕ್ಕೆ ಪ್ರವೇಶ ಉಚಿತ. ಆದರೆ pavanaja  @  gmail  . com ವಿಳಾಸಕ್ಕೆ ಒಂದು ಇಮೈಲ್ ಮಾಡಿ ನೋಂದಾವಣೆ ಮಾಡಿಸಿಕೊಳ್ಳತಕ್ಕದ್ದು. ದಯವಿಟ್ಟು ಬನ್ನಿ. ಆಸಕ್ತರಿಗೂ ತಿಳಿಸಿ.