ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ –
ಇವರಿಗೆ,
ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ
ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ,
ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ)
ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ,
ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧.
ಮಾನ್ಯರೆ,
ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ ಕುರಿತು.
ಉಲ್ಲೇಖ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಡಳಿತ ಕನ್ನಡಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿಯವರ ಪತ್ರ ಸಂಖ್ಯೆ ಕಸಂವಾಪ್ರ ೧೧ ಕೆಓಎಲ್ ೨೦೦೮, ದಿ. ೧೯-೦೫-೨೦೦೮
ಮೇಲೆ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳು ಈ ಕೆಳಗಿನಂತಿವೆ.
೧. ಮೇಲೆ ಉಲ್ಲೇಖಿಸಿದ ಸರಕಾರೀ ಘೋಷಣೆಯಲ್ಲಿ ಈಗ ಈ ದ್ವಿಭಾಷಾ ಅಕ್ಷರರೂಪಗಳ (ಫಾಂಟ್) ಸಂಕೇತಗಳನ್ನು ನಿಗದಿಪಡಿಸುವುದು ಏಕೆ, ಇದರಿಂದ ಯಾವ ಸಮಸ್ಯೆಯ ಪರಿಹಾರ ಆಗುತ್ತದೆ ಎಂಬ ವಿವರಗಳು ಇಲ್ಲ. ದ್ವಿಭಾಷ ಸಂಕೇತಗಳ ನಿಗದೀಕರಣ ಯಾವ ಉದ್ದೇಶಕ್ಕೋಸ್ಕರ ಮಾಡುತ್ತಿರುವುದು ಎಂಬುದನ್ನು ಸ್ಪಷ್ಟೀಕರಿಸಿದರೆ ತುಂಬ ಒಳ್ಳೆಯದಿತ್ತು. ಉದ್ದೇಶವನ್ನು ಸ್ಪಷ್ಟೀಕರಿಸಿದರೆ ಆ ಸಮಸ್ಯೆಗೆ ಪರಿಣತರಿಂದ ಸರಿಯಾದ ಪರಿಹಾರ ಸಿಗುವ ಸಾಧ್ಯತೆಗಳಿವೆ.
೨. ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಕರ್ನಾಟಕ ಸರಕಾರದ “ನುಡಿ” ತಂತ್ರಾಂಶವೂ ಈ ವಿಧಾನದಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ಮಾಹಿತಿಯ ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡುಕಲೂ ಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್ ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ. ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸರಕಾರವು ದಶಕಗಳ ಹಿಂದಿನ ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟೇ ಸರಿ.
೩. ಕನ್ನಡದಲ್ಲಿ ಈಗಾಗಲೇ ಹಲವು ಫಾಂಟ್ ಆಧಾರಿತ ತಂತ್ರಾಂಶಗಳು ಅಸ್ಥಿತ್ವದಲ್ಲಿವೆ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ತೆರೆಯಲು ಆಗುತ್ತಿಲ್ಲ. ಹೀಗಿರುವಾಗ ಸರಕಾರವು ಇನ್ನೊಂದು ಅಕ್ಷರರೂಪಕ್ಕೆ ಸಂಕೇತಗಳನ್ನು ನಿಗದಿಪಡಿಸಹೊರಟಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.
೪. ಸರಕಾರದ ಹಲವು ವಿಭಾಗಗಳಲ್ಲಿ ಈಗಾಗಲೆ ಫಾಂಟ್ ಆಧಾರಿತ “ನುಡಿ” ತಂತ್ರಾಂಶವನ್ನು ಬಳಸಿ ತುಂಬ ಮಾಹಿತಿ, ಕಡತ, ಪತ್ರಗಳನ್ನು ತಯಾರಿಸಿ ಸಂಗ್ರಹಿಸಲಾಗಿದೆ. ಇವುಗಳನ್ನೆಲ್ಲ ದತ್ತಸಂಚಯ (ಡಾಟಾಬೇಸ್) ಮಾಡಿ ಅದರಲ್ಲಿರುವ ಮಾಹಿತಿಯನ್ನು ಹುಡುಕುವುದು, ಅಕರಾದಿಯಾಗಿ ವಿಂಗಡಿಸುವುದು, ಇತ್ಯಾದಿ ಮಾಡಬೇಕಾದರೆ ಅವನ್ನೆಲ್ಲ ಮೊದಲು ಯುನಿಕೋಡ್‌ಗೆ ಬದಲಿಸಬೇಕಾಗುತ್ತದೆ. ಇದು ದೊಡ್ಡ ಕಾರ್ಯ. ಇದಕ್ಕೆ ತುಂಬ ಶಕ್ತಿ ಮತ್ತು ಹ