ಅಂತರಜಾಲದ ಮೂಲಕ ಒಬ್ಬರಿಗೊಬ್ಬರು “ಮಾತನಾಡಲು” ಅಥವಾ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ chat ಮಾಡಲು ಹಲವು ತಂತ್ರಾಂಶ ಸೌಲಭ್ಯಗಳಿವೆ. ಇವುಗಳಲ್ಲಿ ತುಂಬ ಜನಪ್ರಿಯವಾದವುಗಳು – MSN (Hotmail), Yahoo Meesenger ಮತ್ತು GTalk (Google). ಇವೆಲ್ಲವುಗಳಲ್ಲೂ ಕನ್ನಡ ಯುನಿಕೋಡ್ ಬಳಸಿ ಚಾಟ್ ಮಾಡಲು ಆಗುತ್ತಿರಲಿಲ್ಲ. ಇವತ್ತು ಸತ್ಯನಾರಾಯಣ ಜೊತೆ GTalk ಬಳಸಿ ಮಾತನಾಡುತ್ತಿದ್ದಾಗ, ಅವರು ಒಂದು ಪ್ರಶ್ನೆ ಕೇಳಿದರು -“ನಾನು ಇಲ್ಲಿ ಕನ್ನಡದಲ್ಲಿ (ಯುನಿಕೋಡ್‌ನಲ್ಲಿ) ಚಾಟ್ ಮಾಡಬಹುದೇ?” ಎಂದು. ನಾನು ನನ್ನ ಹಳೆಯ ಅನುಭವದಿಂದ ಸಾದ್ಯವಿಲ್ಲ ಎಂದೆ. ಆದರೂ ನೋಡೋಣ ಎಂದು ನಾವಿಬ್ಬರು ಪ್ರಯತ್ನಿಸಿದೆವು. ಆಶ್ಚರ್ಯ! ಈಗ ಕನ್ನದಲ್ಲಿ ಚಾಟ್ ಮಾಬಹುದು. ನಾನು ಕನ್ನಡ ಮಾತ್ರವಲ್ಲ, ಹಲವು ಭಾರತೀಯ ಭಾಷೆಗಳಲ್ಲಿ ನನ್ನ ಹೆಸರನ್ನು ಬೆರಳಚ್ಚು ಮಾಡಿದೆ. ಎಲ್ಲವೂ ಸರಿಯಾಗಿಯೇ ಮೂಡಿಬಂದವು. ನಮ್ಮ ಚಾಟ್‌ನ ದಾಖಲಾತಿ ಕಿಟಿಕಿಯ ಚಿತ್ರ ಇಲ್ಲಿದೆ-
ಹೋಲಿಕೆಗಾಗಿ ನಾನು ಆಗಸ್ಟ್ ೨೭, ೨೦೦೫ ರಂದು ದಾಖಲಿಸಿದ್ದ ಚಾಟ್ ಕಿಟಿಕಿಯನ್ನು ಕೆಳಗೆ ನೀಡಿದ್ದೇನೆ. ಇಲ್ಲಿ ಹಿಂದಿ ಮತ್ತು ತಮಿಳು ಮಾತ್ರ ಸರಿಯಾಗಿ ಮೂಡಿ ಬಂದಿವೆ. ಕನ್ನಡವು ಖಾಲಿ ಚೌಕಗಳಾಗಿ ತೋರಿಬರುತ್ತಿವೆ.