Home » Kannada » General » ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.

ಅದೆಲ್ಲ ಸರಿ. ಆದರೆ ಅಲ್ಲಿ ನಾನು ಗಮನಿಸಿದ ಒಂದು ಮುಖ್ಯ ಕೊರತೆಯನ್ನು ಇಲ್ಲಿ ದಾಖಲಿಸಲೇ ಬೇಕಾಗಿದೆ. ಅದೆಂದರೆ ಅವರ ಟಿವಿಯಲ್ಲಿ ಕನ್ನಡದ ಚಾನೆಲು ಇಲ್ಲ ಎಂಬುದು. ಮೂರು ಮಲಯಾಳಂ, ಮೂರು ತಮಿಳು, ಒಂದು ತೆಲುಗು, ಮರಾಠಿ, ಇತ್ಯಾದಿ ಚಾನೆಲುಗಳಿವೆ. ಕನ್ನಡಕ್ಕೆ ಸ್ಥಾನವಿಲ್ಲ. ಕನ್ನಡದವರ ಹೋಟೆಲಿನಲ್ಲೇ ಕನ್ನಡಕ್ಕೆ ಸ್ಥಾನವಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿ ಇಟ್ಟವರೇ ಹೋಟೆಲು ಉದ್ಯಮದವರು. ಹೀಗಿರುವಾಗ ಈ ಕಾಮತರಿಗೇನಾಯಿತು? ಕನ್ನಡ ಏನಿದ್ದರೂ ಬಡವರ ಭಾಷೆ. ಹಣವಂತರ ಭಾಷೆ ಅಲ್ಲ ಎಂಬ ಭಾವನೆಯೇ?

Leave a Reply

Your email address will not be published. Required fields are marked *

*
*