Home » Kannada » General » ಕನ್ನಡದಿಂದ ಬದುಕುವ ತಮಿಳು ಟಿವಿ ಚಾನೆಲ್

ಕನ್ನಡದಿಂದ ಬದುಕುವ ತಮಿಳು ಟಿವಿ ಚಾನೆಲ್

ಇತ್ತೀಚೆಗೆ ನನ್ನ ಡಿಶ್ ಟಿವಿಯ ವಾರ್ಷಿಕ ಚಂದಾ ಮುಗಿದಿತ್ತು. ಅದನ್ನು ನವೀಕರಿಸುವುದೋ ಬೇಡವೋ ಎಂಬ ಆಲೋಚನೆಯಲ್ಲಿದ್ದಾಗ ಅವರು ಯಾವ ಯಾವ ಚಾನೆಲುಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ವಿಮರ್ಶೆ ಮಾಡಿದೆ. ಅವರು ನೀಡುವ ಚಾನೆಲುಗಳ ಪಟ್ಟಿಯಲ್ಲಿ ಕನ್ನಡದ ಉಚಿತ ಖಾಸಗಿ ಚಾನೆಲು ಯಾವುದೂ ಇಲ್ಲ. ಸರಕಾರವು ಉಚಿತವಾಗಿ ನೀಡುತ್ತಿರುವ ದೂರದರ್ಶನದ ಚಂದನ ಮಾತ್ರ ಇದೆ. ದೂರದರ್ಶನದ ಎಲ್ಲ ಚಾನೆಲುಗಳು ಉಚಿತವೇ. ಕನ್ನಡ ಮಾತ್ರವಲ್ಲ.

ಹಾಗೆಯೇ ಕಣ್ಣಾಡಿಸಿದಾಗ ಒಂದು ಸ್ವಾರಸ್ಯಕರವಾದ ವಿಷಯ ಪತ್ತೆಯಾಯಿತು. ತಮಿಳು ಚಾನೆಲ್ ಸನ್ ಉಚಿತವಾಗಿದೆ. ಅದನ್ನು ಫ್ರೀ ಟು ಏರ್ ಚಾನೆಲುಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಸನ್ ನೆಟಟ್‌ವರ್ಕ್‌ನವರ ಕನ್ನಡ ಚಾನೆಲುಗಳು – ಉದಯ, ಉದಯ ವಾರ್ತೆ, ಉಷೆ, ಇತ್ಯಾದಿ. ಇವು ಯಾವುವೂ ಉಚಿತವಲ್ಲ. ಅಂದರೆ ಸನ್ ನೆಟ್‌ವರ್ಕ್‌ನವರು ನಮ್ಮ ಹಣದಲ್ಲಿ ತಮಿಳು ಚಾನೆಲನ್ನು ಪೋಷಿಸುತ್ತಿದ್ದಾರೆ ಎಂದ ಹಾಗಾಯಿತು.

ಕರ್ನಾಟಕದಲ್ಲಿ ನೀರು ಸಂಗ್ರಹಿಸಿ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಅವರ ವಾದ ಗೊತ್ತೇ ಇದೆ. ಕರ್ನಾಟಕದ ಕೈಗಾದಲ್ಲಿ ವಿದ್ಯುತ್ ತಯಾರಿಸಿ ಅದರಲ್ಲಿ ಶೇಕಡ 75ರಷ್ಟು ತಮಿಳುನಾಡಿಗೆ ನೀಡುವುದೂ ನಿಮಗೆ ಗೊತ್ತಿರಬಹುದು (ಹೋಲಿಕೆಗಾಗಿ, ತಮಿಳುನಾಡಿನಲ್ಲಿರುವ ಕಲ್ಪಾಕಂನಲ್ಲಿ ತಯಾರಾಗುವ ವಿದ್ಯುತ್ತಿನಲ್ಲಿ ಶೇಕಡ 75 ತಮಿಳುನಾಡಿಗೆ ಹೋಗುತ್ತಿದೆ). ಕನ್ನಡಿಗರು ಹಣ ನೀಡಿ ತಮಿಳು ಚಾನೆಲನ್ನು ಸಾಕುತ್ತಿರುವುದು ಇನ್ನೊಂದು ಕುತಂತ್ರ. ಹೇಗಿದೆ ನೋಡಿ? ಕನ್ನಡಿಗರ ಮೇಲಿನ ದಬ್ಬಾಳಿಕೆ? ನಾನಂತೂ ಉದಯ ಮತ್ತು ಸನ್‌ನವರ ಇತರೆ ಚಾನೆಲುಗಳನ್ನು ನೋಡುತ್ತಿಲ್ಲ. ನೀವೂ ಹಣ ನೀಡಿ ನೋಡಬೇಡಿ.

One thought on “ಕನ್ನಡದಿಂದ ಬದುಕುವ ತಮಿಳು ಟಿವಿ ಚಾನೆಲ್

  1. nalini says:

    adakke nam maneli dish or cable use madtilla only chandana & dd 1. bere channel nalli unless programs erutte adre dd 1 perfect channel nanna prakara.

    eegina janrige a tarane eshta.

    this is our bad luck

Leave a Reply

Your email address will not be published. Required fields are marked *

*
*