Home »
Articles posted by admin
ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ ವಿಧಾನವನ್ನು ಕಂಗ್ಲಿಶ್ ಎನ್ನುತ್ತೇವೆ. ಈಗೀಗ ಅಂತರಜಾಲದಲ್ಲಿ, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಇವುಗಳ ಹಾವಳಿ ತುಂಬ ಜಾಸ್ತಿಯಾಗಿದೆ. ಈಗ ಕಾಲ ಬದಲಾಗಿದೆ. ಗಣಕ ಮಾತ್ರವಲ್ಲ, ಬಹುತೇಕ ಎಲ್ಲ...
Continue reading
February 23, 2014 admin
Kannada, Tech related
13 Comments
Windows Phone is the latest mobile phone operating system from Microsoft. It has caught the attention of developers. This is due to the fact that the learning curve to start Windows Phone developments is minimal for those who are already familiar with .NET developments. People who master the...
Continue reading
March 6, 2012 admin
English, Tech related
No Comment
ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ...
Continue reading
March 6, 2012 admin
Kannada, Tech related
No Comment
ಕೇಂದ್ರ ಸರಕಾರದಲ್ಲೊಬ್ಬ ಪಿತ್ತ ಸಚಿವ ಇರುವುದು ನಿಮಗೆ ಗೊತ್ತೆ? ಆಶ್ಚರ್ಯವಾಯಿತೇ? ಹಾಗಿದ್ದರೆ ಜೊತೆಗೆ ಇರುವ ಭಾವಚಿತ್ರ ನೋಡಿ. ಇದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ವಾರ್ತಾಪ್ರಸಾರ ಆಗುತ್ತಿದ್ದಾಗ ತೆಗೆದ ಚಿತ್ರ (೩೦-೯-೨೦೦೮)
Continue reading
September 30, 2008 admin
Featured Article, General
2 Comments
ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ – ಇವರಿಗೆ, ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ, ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ) ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ, ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧. ಮಾನ್ಯರೆ, ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ...
Continue reading
June 14, 2008 admin
Featured Article, Tech related
ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ
Continue reading
June 8, 2008 admin
Featured Article, Tech related
No Comment
ಕನ್ನಡ ಭಾಷೆಯಲ್ಲಿ ಬ್ಲಾಗಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಸಂತಸದ ಸುದ್ದಿ. ಈ ಎಲ್ಲ ಬ್ಲಾಗೋತ್ತಮರುಗಳು ಎಂದಾದರೂ ಮುಖಾಮುಖಿ ಭೇಟಿಯಾದುದು ಇದೆಯೇ? ಬಹುಶಃ ಇಲ್ಲ. ಕೆಲವು ಮಂದಿ ಅಲ್ಲಿ ಇಲ್ಲಿ ಭೇಟಿಯಾಗಿರಬಹುದು. ಆದರೆ ಬ್ಲಾಗಿಗಳೇ ಪ್ರತ್ಯೇಕವಾಗಿ ಸಭೆ ಸೇರಿದ್ದು ಇಲ್ಲ. ಭಾರತೀಯ ಬ್ಲಾಗಿಗಳ ಸಭೆ ಹಲವು ಬಾರಿ ಬೇರೆ ಬೇರೆ ನಗರಗಳಲ್ಲಿ ಜರುಗಿವೆ. ಆದರೆ ಕನ್ನಡ ಬ್ಲಾಗಿಗಳ ಸಭೆ ಇದುವರೆಗೆ ಜರುಗಿಲ್ಲ.
Continue reading
March 9, 2008 admin
Featured Article, General
1 Comment
ಮೈಕೇಲ್ ಕಪ್ಲಾನ್ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ತಂತ್ರಾಂಶಗಳ ಜಾಗತೀಕರಣ ವಿಭಾಗದಲ್ಲಿ ಪ್ರಮುಖ ಹುದ್ದೆಯಲ್ಲಿರುವ ತಂತ್ರಜ್ಞರು. ತಂತ್ರಾಂಶ ಜಾಗತೀಕರಣ ವಿಷಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಇವರ ಹೆಸರು ಪರಿಚಯವಿದೆ. ಇವರು ಭಾರತಕ್ಕೆ ಬರುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ
ಮೈಕ್ರೋಸಾಫ್ಟ್ ಸಂಶೋದನಾ ಕೇಂದ್ರದ ಮೂಲಕ ತಿಳಿದು ಬಂತು. ಕೂಡಲೇ ನಾನು ಕಪ್ಲಾನರನ್ನು ಸಂಪರ್ಕಿಸಿ ನಮ್ಮ
ಬೆಂಗಳೂರಿನ ಡಾಟ್‌ನೆಟ್ ಬಳಕೆದಾರರ ಸಂಘದಲ್ಲಿ ಒಂದು ಭಾಷಣ ನೀಡಲು ಸಾಧ್ಯವೇ ಎಂದು ಕೇಳಿಕೊಂಡೆ. ಕೂಡಲೇ ಅವರಿಂದ ಉತ್ತರ ಬಂತು "ಇದು ನನಗೆ ನೀಡುತ್ತಿರುವ ಗೌರವ ಎಂದು ಭಾವಿಸಿಕೊಂಡು ಒಪ್ಪಿಗೆ ನೀಡುತ್ತಿದ್ದೇನೆ".
Continue reading
January 25, 2008 admin
Featured Article, Tech related
No Comment
One of the main impediment for non usage of Unicode for Indian language is the lack of support for Indic opentype fonts in almost all graphics and DTP packages. The usage Indian languages in computers started from DTP (desktop publishing). Even now, almost 85% Indic usage on computers...
Continue reading
January 15, 2008 admin
Featured Article, Tech related
ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.
Continue reading
January 13, 2008 admin
Featured Article, Tech related
4 Comments