ಕನ್ನಡ ಭಾಷೆಯನ್ನು ರಕ್ಷಿಸಲು ಹೋರಾಡಲು ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆಯೋ ಅದಕ್ಕಿಂತಲೂ ಹೆಚ್ಚು ವೇದಿಕೆ, ಪಡೆಗಳಿವೆ. ಹಲವು ಮಂದಿಗೆ ಇದು ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಹಾಗಿದ್ದರೂ ಕನ್ನಡದ ಸ್ಥಿತಿ ಉತ್ತಮವಾಗಿಲ್ಲ. ಈ ಹೋರಾಟಗಾರರು ಸಾಮಾನ್ಯವಾಗಿ ಪ್ರತಿಭಟನೆಗಳನ್ನು ಏರ್ಪಡಿಸುವಲ್ಲಿ ಸಿದ್ಧಹಸ್ತರು. ಪ್ರತಿಭಟನೆಗಳು ಅತೀ ಅಗತ್ಯ ಎಂದು ವಾದಿಸುವವರು. ಪ್ರತಿಭಟನೆ ಹೋರಾಟಗಳಿಂದ ಕನ್ನಡ ಭಾಷೆಯ ಉಳಿದು ಬೆಳೆಯುತ್ತದೆಯೇ? ಅದು ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಈ ಎಲ್ಲ ವೇದಿಕೆ, ಪಡೆಗಳು ಬಾಗಿಲು ಹಾಕಬೇಕಾಗಿತ್ತು....
Continue reading
ತೆರೆದ ಪುಸ್ತಕ ಪರೀಕ್ಷೆ ಮಾಡುತ್ತೇವೆ ಎಂದು ಸರಕಾರದ ಮಂತ್ರಿಯೋರ್ವರು ಹೇಳಿದ್ದಕ್ಕೆ ನಾನು ಸ್ವಲ್ಪ ವಿಡಂಬನಾತ್ಮಕವಾಗಿ ಬರೆದ ಫೇಸ್‌ಬುಕ್ ಪೋಸ್ಟ್ ವೈರಲ್ ಆದುದನ್ನು ಗಮನಿಸಿದೆ. ಒಂದು ಜಾಲತಾಣವಂತೂ ನಾನು ಆ ಪೋಸ್ಟನ್ನು ಅಳಿಸಿ ಹಾಕಿದ್ದೇನೆ ಎಂದು ತಪ್ಪಾಗಿ ವರದಿ ಮಾಡಿದೆ. ಆ ಪೋಸ್ಟಿನಲ್ಲಿ ಎರಡು ವಿಷಯಗಳಿಗೆ ನಾನು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ಅದರಲ್ಲಿ ಮೊದಲನೆಯದಾದ ತೆರೆದ ಪುಸ್ತಕ ಪರೀಕ್ಷೆ (open book exam) ಬಗ್ಗೆ ಇಲ್ಲಿ ಬರೆಯುತ್ತೇನೆ. ಈ open...
Continue reading
ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ ವಿಧಾನವನ್ನು ಕಂಗ್ಲಿಶ್ ಎನ್ನುತ್ತೇವೆ. ಈಗೀಗ ಅಂತರಜಾಲದಲ್ಲಿ, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಇವುಗಳ ಹಾವಳಿ ತುಂಬ ಜಾಸ್ತಿಯಾಗಿದೆ. ಈಗ ಕಾಲ ಬದಲಾಗಿದೆ. ಗಣಕ ಮಾತ್ರವಲ್ಲ, ಬಹುತೇಕ ಎಲ್ಲ...
Continue reading