Home » Kannada » Tech related » ೠ ಟೈಪಿಸುವುದು ಹೇಗೆ?

ೠ ಟೈಪಿಸುವುದು ಹೇಗೆ?

ಅಸತ್ಯಾನ್ವೇಶಿಯವರು ತಮ್ಮ ಬ್ಲಾಗಿನ ಕಮೆಂಟಿನಲ್ಲಿ ಒಂದು ಪ್ರಶ್ನೆ ಎಸೆದರು. “ೠ” ಅಕ್ಷರವನ್ನು ಕೀಬೋರ್ಡಿನಲ್ಲಿ ಕುಟ್ಟಿದ್ದು ಹೇಗೆ ಎಂದು. ಮೊದಲನೆಯದಾಗಿ ತಿಳಿಸುವುದೇನೆಂದರೆ ಈ “ೠ” ಅಕ್ಷರ ಕನ್ನಡ ವರ್ಣಮಾಲೆಯಲ್ಲಿ ಇಲ್ಲ. ಅದು ಸಂಸ್ಕೃತದಿಂದ ಬಂದುದು ಮಾತ್ರವಲ್ಲ ಕನ್ನಡ ಭಾಷೆಯಲ್ಲಿ ಅದರ ಬಳಕೆಯೂ ಇಲ್ಲ. “ೠ” ಅಕ್ಷರವನ್ನು ಬಳಸಿದ ಒಂದೇ ಒಂದು ಪದ ಕನ್ನಡದಲ್ಲಿ ಇಲ್ಲ. ಆದರೂ ಯುನಿಕೋಡ್‌ನವರು ಈ ಅಕ್ಷರವನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಅದಕ್ಕೊಂದು ಸಂಕೇತವನ್ನೂ ನೀಡಿದ್ದಾರೆ (0CE0).

ಅದೆಲ್ಲ ಪುರಾಣ ಬೇಡ, “ೠ” ಅಕ್ಷರವನ್ನು ಕೀಲಿಮಣೆಯಲ್ಲಿ ಬೆರಳಚ್ಚಿಸುವುದು ಹೇಗೆ ಎಂದು ತಿಳಿಸಿ ಸಾಕು ಎನ್ನುತ್ತೀರಾ? ಸರಿ. ಮೊದಲನೆಯದಾಗಿ ಭಾಷಾ ಇಂಡಿಯ ತಾಣದಿಂದ Kannada Indic IME ಯನ್ನು ಡೌನ್‌ಲೋಡ್ ಮಾಡಿಕೊಂಡು ಅನುಸ್ಥಾಪಿಸಿಕೊಳ್ಳಿ. ಈ ಕೀಲಿಮಣೆಯಲ್ಲಿ KGP Keyboard (Karnataka Govt Prescribed Keyboard) ಆಯ್ಕೆ ಮಾಡಿಕೊಳ್ಳಿ (ಇದು ಮೂಲತಃ ಕೆ. ಪಿ. ರಾವ್ ಅವರ ವಿನ್ಯಾಸ). ಈಗ “ೠ” ಪಡೆಯಲು ಈ ಕೀಲಿಗಳನ್ನು ಒತ್ತಿ -RX (Shift-r followed by Shift-x). ಈ “ೠ” ಅಕ್ಷರವನ್ನು ಕುಟ್ಟುವ ಬಗೆ ಕಲಿತ ನಂತರ ಏನು ಮಾಡುತ್ತೀರಾ? ಅದು ನಿಮಗೇ ಬಿಟ್ಟದ್ದು.

7 thoughts on “ೠ ಟೈಪಿಸುವುದು ಹೇಗೆ?

  1. Anveshi says:

    ಧನ್ಯವಾದ ಪವನಜರೆ,

    ಅದು ಹೌದು… ಅದನ್ನು ಟೈಪಿಸಿದ ಬಳಿಕ ಏನು ಮಾಡುವುದು ಅಂತ ಯೋಚಿಸಲೇ ಇಲ್ಲ…. 🙂

  2. nadahally says:

    ಪವನಜರವರೆ,
    ನಾನು ಕನ್ನಡವನ್ನು ಟೈಪಿಸಿವುದಕ್ಕೆ ಇನ್ನೂ ಸರಳ ವಿಧಾನವನ್ನು ಬಳಸುತ್ತೆನೆ. "http://www.iit.edu/~laksvij/language/kannada.html"  ಈ ತಾಣದಲ್ಲಿ ಕನ್ನಡವನ್ನು ಬಹಳ ಸುಲಭವಾಗಿ ಟೈಪಿಸಬಹುದು. ಆದರೆ ಇದರಲ್ಲಿ ಕನ್ನಡ ಅಂಕಿಗಳನ್ನು ಟೈಪಿಸಲು ಬರುವುದಿಲ್ಲ. ಜಾವಸ್ಕ್ರಿಪ್ಟ್ ಎಡಿಟ್ ಮಾಡಲು ಬಂದರೆ ಅದನ್ನೂ ಮಾಡಬಹುದು.

     

    ಹಾರೈಕೆಗಳೊಂದಿಗೆ
    ಶ್ರೀಹರ್ಷ ನಡಹಳ್ಳಿ

  3. Pavanaja says:

    “à³ ” ಕುಟ್ಟುವುದು ಕಲಿತ ಮೇಲೆ ಏನು ಮಾಡುವುದು ಎಂದು ಚಿಂತಿಸಬೇಡಿ. ಯುನಿಕೋಡ್‌ನವರು ಕನ್ನಡಕ್ಕಾಗಿ ನೀಡಿರುವ ಎಲ್ಲ ಅಕ್ಷರಗಳನ್ನು ಕುಟ್ಟಿ :). ಇದೇನೋ ಬಹು ಸುಲಭ ಅಂದುಕೊಳ್ಳಬೇಡಿ. ಯುನಿಕೋಡ್‌ನವರು ಆವೃತ್ತಿ 5.0 ರಲ್ಲಿ ಕನ್ನಡಕ್ಕಾಗಿ ನೀಡಿರುವ ಎಲ್ಲ ಅಕ್ಷರಗಳನ್ನು ಸದ್ಯಕ್ಕೆ ಯಾವ ಕೀಲಿಮಣೆಯಲ್ಲೂ ಅಳವಡಿಸಿಲ್ಲ. ಯುನಿಕೋಡ್ ಸಂಕೇತಗಳನ್ನು ಊಡಿಸಲು ಕೆಲವು ತಂತ್ರಾಂಶಗಳು ಲಭ್ಯವಿವೆ. ಅವುಗಳನ್ನು ಬಳಸಬೇಕಷ್ಟೆ. ಅವುಗಳ ಬಗ್ಗೆ ಪ್ರತ್ಯೇಕವಾಗಿ ಬರೆಯುತ್ತೇನೆ (ಅಲ್ಲ, ಕುಟ್ಟುತ್ತೇನೆ :))

  4. Pavanaja says:

    ಶ್ರೀಹರ್ಷ ನಡಹಳ್ಳಿಯವರೇ,

    ನಿಮ್ಮ ವಿಧಾನದಲ್ಲಿ ೠ ಬೆರಳಚ್ಚು ಮಾಡಲಾಗುವುದಿಲ್ಲ!

  5. Anonymous says:

    ಪವನಜರವರೇ!
    ನಾನು ಇದೇ ವಿಧಾನದಲ್ಲಿ ೠ ಅನ್ನು ಟೈಪಿಸಿದ್ದೇನೆ!! TR ಅನ್ನು ಟೈಪಿಸಿದರೆ ೠ ಬರುತ್ತದ
    ಹಾರೈಕೆಗಳೊಂದಿಗೆ
    ಶ್ರೀಹರ್ಷ ನಡಹಳ್ಳಿ

  6. Anonymous says:

    ಪವನಜ ಅವರೆ,

                     ಕನ್ನದದಲ್ಲಿ ಸ್ವರವಿಲ್ಲದ ವ್ಯಂಜನವಾಗಿ ಬಳಸುತ್ತಿದ್ದ ‘ನ್’ ಅಕ್ಷರವೊಂದಿತ್ತು. ಅದು  ಕಾಣಲು ಕನ್ನಡ ಅಂಕೆ ‘೯’ ರಂತೆ ಇದೆ. ಒಂದು ವ್ಯತ್ಯಾಸವೇನೆಂದರೆ ‘೯’ ರ ನಡುವೆ ಒಂದು ಸುರುಳಿ ಇದ್ದರೆ ಆ ಅಕ್ಷರದ ನಡುವೆ ಎರಡು ಸುರುಳಿ ಇದೆ. ಈ ಅಕ್ಷರ ಕುಟ್ಟಲು ಸಾಧ್ಯವಿದ್ದರೆ ಮಲಯಾಳಿ ಕನ್ನಡಿಗರ ಹಾಗೂ ತಮಿೞ್ಗನ್ನಡಿಗರ ಹೆಸರು ಬರೆಯಲು ಸಹಾಯವಾಗುತ್ತದೆ ಎಂದು ನನ್ನ ಅಭಿಪ್ರಾಯ.

     

    ಥ್ಯಾಂಕ್ಸ್.
     

  7. Pavanaja says:

    ಆ ಇನ್ನೊಂದು ‘ನ್’ ಗೆ ನಕರಪಿಲ್ಲು ಎಂಬ ಹೆಸರಿದೆ. ಇದು ಬೇರೆಯೇ ಒಂದು ಅಕ್ಷರವಲ್ಲ. “ನ” ಅಕ್ಷರದಿಂದ “ಅ” ಸ್ವರವನ್ನು ತೆಗೆದರೆ “ನ್” ಸಿಗುತ್ತದೆ. ಇದನ್ನು ನೀವು ಹೇಳಿದ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಬರೆಯುತ್ತಿದ್ದರು. ಇದಕ್ಕಾಗಿ ಅಕ್ಷರಮಾಲೆಯಲ್ಲಿ ಇನ್ನೊಂದು ಸಂಕೇತ ಬೇಕಾಗಿಲ್ಲ. ನ + ್ ಗೆ ನ್ ಬದಲು ಇನ್ನೊಂದು display form ತಯಾರಿಸಬೇಕು. ಇದು opentype font ತಂತ್ರಜ್ಞಾನದಲ್ಲಿ ಸಾಧ್ಯ.

Leave a Reply

Your email address will not be published. Required fields are marked *

*
*