Home » Kannada » Tech related » ಸುಧಾರಿತ ತುಂಗ ಫಾಂಟ್

ಸುಧಾರಿತ ತುಂಗ ಫಾಂಟ್

Corrected opentype font Tunga for Kannada is now available at Microsoft web-site for download.

ಮೈಕ್ರೋಸಾಫ್ಟ್‌ನವರು ನೀಡಿದ ತುಂಗ ಫಾಂಟ್‌ನಲ್ಲಿ ಇದ್ದ ಸಮಸ್ಯೆ ಬಗ್ಗೆ ಗೊತ್ತಿದೆ. ಅದರ ಬಗ್ಗೆ ಇಲ್ಲಿ ಮತ್ತು ಇಲ್ಲಿ ಓದಬಹುದು. ಸುಧಾರಿತ ತುಂಗ ಫಾಂಟ್ ಈಗ ಅಂತರಜಾಲದಲ್ಲಿ ಅಧಿಕೃತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಅದನ್ನು ಪಡೆಯಬೇಕಾದರೆ ಈ ಅಪ್‌ಡೇಟನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ನೀಡಿರುವ ಅಪ್‌ಡೇಟ್ ನಿಜವಾಗಿ ಇರುವುದು ನೇಪಾಳಿ, ಪಾಶ್ತೋ, ಪಿಲಿಪಿನೋ ಮತ್ತು ಇತರೆ ಕೆಲವು ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಗೆ ಅಳವಡಿಸಲು. ಕನ್ನಡ ಭಾಷೆಯ ಸುಧಾರಿತ ತುಂಗ ಫಾಂಟ್ ಇವುಗಳ ಜೊತೆ ಸೇರಿಕೊಂಡಿದೆ ಎಂದು ತಿಳಿಯಬೇಕಾದರೆ ಈ ಡೌನ್‌ಲೋಡ್ ಬಗ್ಗೆ ಕೊಟ್ಟ ವಿವರವನ್ನು ಓದಬೇಕು. ಈ ವಿವರದಲ್ಲಿ ಕೊಟ್ಟಿರುವ ಫೈಲುಗಳ ಪಟ್ಟಿಯಲ್ಲಿ ತುಂಗ ಫಾಂಟ್ ಕೂಡ ಇದೆ.

ತುಂಗ ಫಾಂಟ್‌ನ್ನು ನವೀಕರಿಸಿಕೊಳ್ಳಬೇಕಾದರೆ ಈಗ windowsfonts ಫೋಲ್ಡರ್‌ನಲ್ಲಿ ಇರುವ tunga.ttf ಫೈಲನ್ನು ಬೇರೆ ಕಡೆ ಪ್ರತಿ ಮಾಡಿ ಇಟ್ಟುಕೊಂಡು ಅದನ್ನು ಅಳಿಸಿಹಾಕಿರಿ. ನಂತರ ಈ ಡೌನ್‌ಲೋಡನ್ನು ಅನುಸ್ಥಾಪಿಸಿ.

Leave a Reply

Your email address will not be published. Required fields are marked *

*
*