ಯಾಕೋ, ಈ ಯುಎಸ್‌ಬಿ ಸಾಧನಗಳ ಬಗ್ಗೆ ಎಷ್ಟು ಬರೆದರೂ ಸಾಲುವುದಿಲ್ಲ. ಯುಎಸ್‌ಬಿ ಸಾಧನಗಳ ಬಗ್ಗೆ ದೀರ್ಘವಾದ ಲೇಖನ ಬರೆದಿದ್ದೆ. ನಂತರ ಬ್ಲಾಗೂ ಹಾಕಿದ್ದೆ. ಆದರೆ ಇವುಗಳ ಸುಧಾರಣೆ, ಹೊಸ ಹೊಸ ಸಾಧನಗಳ ತಯಾರಿ ಆಗುತ್ತಲೇ ಇವೆ. ಇತ್ತೀಚೆಗೆ ಬಂದ ಸುದ್ದಿ: ಯುಎಸ್‌ಬಿ ಬ್ಯಾಟರಿ. ಏನು ಹಾಗೆಂದರೆ? ನಿಮ್ಮಲ್ಲಿ ರಿಚಾರ್ಜೇಬಲ್ ಬ್ಯಾಟರಿ ಇದೆ ತಾನೆ? ಅವುಗಳನ್ನು ಚಾರ್ಜ್ ಮಾಡಲು ವಿದ್ಯುತ್ ಸಂಪರ್ಕ ಬೇಕು. ಚಾರ್ಜರ್ ಬೇಕು. ಎಲ್ಲ ಕಂಪ್ಯೂಟರ್‌ಗಳಲ್ಲಿ ಯುಎಸ್‌ಬಿ ಕಿಂಡಿ ಇದೆ. ಅದರಲ್ಲಿ ವಿದ್ಯತ್ತೂ ಇದೆ. ಇದನ್ನೇ ಬಳಸಿ ಬ್ಯಾಟರಿ ಚಾರ್ಜು ಮಾಡಿದರೆ ಹೇಗೆ? ಅದೂ ಕಾರ್ಯಗತವಾಗಿದೆ. ಅಂದರೆ ಯುಎಸ್‌ಬಿ ಕಿಂಡಿಯ ಮೂಲಕ ರಿಚಾರ್ಜ್ ಮಾಡಬಲ್ಲ ಬ್ಯಾಟರಿ ತಯಾರಾಗಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.