Home » Kannada » Tech related » ಮಾಹಿತಿ ತಂತ್ರಜ್ಞಾನ ಕನ್ನಡ ಶಿಕ್ಷಣ ಬಗ್ಗೆ ಕಾರ್ಯಾಗಾರ

ಮಾಹಿತಿ ತಂತ್ರಜ್ಞಾನ ಕನ್ನಡ ಶಿಕ್ಷಣ ಬಗ್ಗೆ ಕಾರ್ಯಾಗಾರ

ಶೈಕ್ಷಣಿಕ ಕ್ಷೇತ್ರದಲ್ಲಿ ಗಣಕಗಳ, ಅದರಲ್ಲೂ ಕನ್ನಡ ಭಾಷೆಯ ಮೂಲಕ ಬಳಸುವುದರಲ್ಲಿ ಮೂರು ವಿಭಾಗಗಳಿವೆ. ಗಣಕ ಎಂದರೇನು ಎಂಬುದನ್ನು ಕನ್ನಡ ಭಾಷೆಯಲ್ಲಿ ತಿಳಿಸುವುದು ಮೊದಲನೆಯದು. ಕನ್ನಡ ಭಾಷೆಯಲ್ಲಿ ಗಣಕಾಧಾರಿತ ಶಿಕ್ಷಣವನ್ನು ಬಳಸಿ ಬಹುಮಾಧ್ಯಮದ (multimedia) ಕಲಿಕಾರಂಜನೆಯ (edutainment) ಮೂಲಕ ಕನ್ನಡ, ವಿಜ್ಞಾನ, ಗಣಿತ, ಇತ್ಯಾದಿಗಳನ್ನು ಹೇಳಿಕೊಡುವುದು ಎರಡನೆಯದು. ಗಣಕ ಕ್ರಮವಿಧಿ (programming language) ತಯಾರಿಯ ಮೂಲ ಸಿದ್ಧಾಂತ (ತರ್ಕ, programming logic) ವನ್ನು ಕನ್ನಡ ಭಾಷೆಯಲ್ಲೇ ಕಲಿಸುವುದು ಮೂರನೆಯದು.

ಈ ಮೂರು ವಿಭಾಗಗಳನ್ನು ಪರಿಚಯಾತ್ಮಕವಾಗಿ ತಿಳಿಸಿ ಹೇಳಲು ಪ್ರಾತ್ಯಕ್ಷಿಕೆಗಳ ಮೂಲಕವಾದ ಒಂದು ಅರ್ಧ ದಿನದ ಕಾರ್ಯಾಗಾರವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆಸಲಾಗುವುದು. ಈ ಕಾರ್ಯಾಗಾರವು ಗಣಕ ಶಿಕ್ಷಕರಿಗೆ, ಕನ್ನಡ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಇತರೆ ಆಸಕ್ತರಿಗೆ ಪ್ರಯೋಜನಕಾರಿಯಾಗುವುದು. ಮಾಧ್ಯಮದ ಪ್ರತಿನಿಧಿಗಳೂ ಭಾಗವಹಿಸುವ ಮೂಲಕ ಈ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ತಲುಪಿಸುವ ಕೆಲಸವನ್ನೂ ಮಾಡಬಹುದು.

ಈ ಕಾರ್ಯಕ್ರಮದಲ್ಲಿ ಎರಡು ವಿಭಾಗಗಳನ್ನು ಮಾಡಿಕೊಂಡಿದ್ದೇನೆ. ಮೊದಲನೆಯ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ ಬಗ್ಗೆ ಹಾಗೂ ಎರಡನೆಯ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡದ ಬಗ್ಗೆ ವಿವರಿಸಲಾಗುವುದು.

ಈ ಕಾರ್ಯಾಗಾರವನ್ನು ಜೂನ್ ತಿಂಗಳ ೧೧ರಂದು ಇಟ್ಟುಕೊಳ್ಳಲಾಗಿದೆ. ಮಧ್ಯಾಹ್ನ ೨:೩೦ಕ್ಕೆ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿದಾನಂದ ಗೌಡರಿಂದ ಉದ್ಘಾಟನೆ, ೩:೩೦ರಿಂದ ವಿಷಯದ ಬಗ್ಗೆ ಭಾಷಣ ಮತ್ತು ಪ್ರಾತ್ಯಕ್ಷಿಕೆ – ಇದು ಕಾರ್ಯಕ್ರಮದ ಸಂಕ್ಷಿಪ್ತ ರೂಪುರೇಷೆ.

ಕನ್ನಡ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ಈ ಕಾರ್ಯಾಗಾರದ ವಿಚಾರದಲ್ಲಿ ಇನ್ನೂ ಹೆಚ್ಚಿನ ವಿಚಾರ ವಿನಿಮಯಕ್ಕಾಗಿ ತಮ್ಮಿಂದ ಶೀಘ್ರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.

ಪೂರಕ ಮಾಹಿತಿಗೆ ನೋಡಿ-
೧. ಕನ್ನಡ ಲೋಗೋ
೨. ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕನ್ನಡ ಬಗ್ಗೆ ನನ್ನ ಲೇಖನ
೩. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಬಗ್ಗೆ ನನ್ನ ದೀರ್ಘ ಲೇಖನ

ಬನ್ನಿ. ಮೈಸೂರಿನಲ್ಲಿ ಭೇಟಿಯಾಗೋಣ.

One thought on “ಮಾಹಿತಿ ತಂತ್ರಜ್ಞಾನ ಕನ್ನಡ ಶಿಕ್ಷಣ ಬಗ್ಗೆ ಕಾರ್ಯಾಗಾರ

  1. ಪ್ರಿಯಾಂಕ್ says:

    ನಿಮಗೆ ಈ ವಿಷಯದಲ್ಲಿ ಆಸಕ್ತಿಯಿರಬಹುದು.
    ಸಮಯ ಸಿಕ್ಕಾಗ, ಈ ಬ್ಲಾಗಿಗೆ ಭೇಟಿ ಕೊಡಿ.

    http://bit.ly/4BtDpS

Leave a Reply

Your email address will not be published. Required fields are marked *

*
*