Home » Kannada » General » ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?

ಅಂದ ಹಾಗೆ ಈ ಚುನಾವಣೆಯಲ್ಲಿ ಗೆದ್ದವರಲ್ಲಿ ನನ್ನ ಆತ್ಮೀಯರಾದ ಶ್ರೀ ಮನೋಹರ ಮಸ್ಕಿಯವರೂ ಇದ್ದಾರೆ. ಅವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು.

2 thoughts on “ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

  1. Anonymous says:

    ಕ್ಷಮಿಸಿ, ಚುಣಾವಣೆಗು, ಶಿಕ್ಷ್ಣಣಕ್ಕು ಯಾವ ವಿದವಾದ ಸಂಬಂದವಿಲ್ಲವೆಂದು ನನ್ನ ಭಾವನೆ. ಇಲ್ಲಿ ಶಿಕ್ಷಣ ಹಾಳಾಗಿರುವುದಕ್ಕೆ, ಚುಣಾಯಿತ ಮಾಸ್ತರ್ಗಳು ಅಧಮರಾಗಿರುವುದೆ ಹೊರೆತು ಬೇರೇನು ಅಲ್ಲ.

    ಇಂತಿ,
    ರಮೇಶ

  2. Pavanaja says:

    ಚುನಾವಣೆಗೂ ಶಿಕ್ಷಣಕ್ಕೂ ಸಂಬಂಧವಿಲ್ಲ ಎಂಬ ಮಾತು ಈ ಚುನಾವಣೆಗೆ ಅನ್ವಯಿಸುವುದಿಲ್ಲ. ಇಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅವರೆಲ್ಲ ಪದವೀಧರರು. ಪದವೀಧರ ಕ್ಷೇತ್ರದಲ್ಲಿ ಮತ ಚಲಾಯಿಸುವ ಈ ಪದವೀಧರರಲ್ಲಿ ಬಹುಪಾಲು ಮಂದಿ ಶಿಕ್ಷಕರು. ಈ ಶಿಕ್ಷಕರಿಗೆ ಒಂದು ಮತಚಲಾಯಿಸಲೂ ಗೊತ್ತಿಲ್ಲ ಎಂದರೆ ಅವರ ಬುದ್ಧಿ ಯಾವ ಮಟ್ಟದಲ್ಲಿರಬಹುದೆಂದು ಊಹಿಸಬಹುದು. ಇಂತಹವರು ಕಲಿಸುವ ಪಾಠ ಹೇಗಿರಬಹುದು? ನೀವೇ ಊಹಿಸಿಕೊಳ್ಳಿ.

Leave a Reply

Your email address will not be published. Required fields are marked *

*
*