ಸಂಡೂರಿನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬದ್ಧವಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸುತ್ತಿವೆ. ಹಣದ ವ್ಯವಹಾರ, ಲಂಚದ ಸುದ್ದಿ ಕರ್ನಾಟಕದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿವೆ. ಈ ಸಂದರ್ಭದಲ್ಲಿ ನಾನು ಸುಮ್ಮನೆ ಗೂಗ್ಲ್ ಅರ್ಥ್‌ನಲ್ಲಿ ಸಂಡೂರು ಸುತ್ತಮುತ್ತ ಹೇಗೆ ಕಾಣಿಸುತ್ತಿದೆ ಎಂದು ನೋಡಿದೆ. ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಭೂದೇವಿಯ ಮೇಲಿನ ಅತ್ಯಾಚಾರಕ್ಕೆ ಪ್ರತ್ಯೇಕ ಸಾಕ್ಷಿ ಬೇಕಾಗಿಲ್ಲ ತಾನೆ? ಈ ಚಿತ್ರಗಳು ಸುಮಾರು ಒಂದು ವರ್ಷದಷ್ಟು ಹಳೆಯವಿರಬೇಕು ಎಂದು ನನ್ನ ಅಂದಾಜು. ಗೂಗ್ಲ್ ಅರ್ಥ್‌ನ ಎಲ್ಲ ಚಿತ್ರಗಳು ಸುಮಾರು ಆರು ತಿಂಗಳಿನಿಂದ ಒಂದು ವರ್ಷದಷ್ಟು ಹಳೆಯವಿವೆ. ಅಂತೆಯೇ ಈ ಚಿತ್ರಗಳು ಸ್ವಲ್ಪ ಹಳೆಯವಿರಬೇಕು. ಈ ಚಿತ್ರಗಳಲ್ಲಿ ಬೇಕೆಂದೇ ಸ್ವಲ್ಪ ಕಾಡು ಕೂಡ ಬರುವಂತೆ ನಾನು ವಿನ್ಯಾಸ ಮಾಡಿದ್ದೇನೆ. ಕಾಡು ಇರುವ ಮತ್ತು ಇಲ್ಲದ ಜಾಗಗಳನ್ನು ಹೋಲಿಸಿ ನೋಡಿ. ಕಾಡು ಯಾವ ರೀತಿ ನಾಶವಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಒಂದು ವರ್ಷದ ನಂತರ ಇನ್ನೊಮ್ಮೆ ಇದೇ ಜಾಗದ ಚಿತ್ರಗಳನ್ನು ತೆಗೆದರೆ ಇನ್ನೆಷ್ಟು ಪರಿಸರ ನಾಶವಾಗಿದೆ ಎಂದು ಹೋಲಿಸಿ ನೋಡಬಹುದು.
Good work. I’m sure Lokayukta referred to this
hasurina giDa mara… kempAdavO ella kepmpAdavO….