ನನ್ನ ಗಣಕಾವಲೋಕನ – ೨
Filed under: Tech related | Sunday, April 24th, 2011 | By pavanaja |ಕಾರ್ಡ್ ಪಂಚಿಂಗ್ ಮತ್ತು ಪ್ಲಾಟರ‍್ ನಮ್ಮ ಪ್ರೋಗ್ರಾಂನ ಔಟ್‌ಪುಟ್‌ನ ಮೊದಲ ಪುಟದಲ್ಲಿ ನಮ್ಮ ಹೆಸರನ್ನು ಅದು ಇಡೀ ಪುಟ ಬರುವಂತೆ ದೊಡ್ಡದಾಗಿ ಮುದ್ರಿಸುತ್ತಿತ್ತು. ಅಂದರೆ ದೊಡ್ಡ ಅಕ್ಷರಗಳಲ್ಲಿ ಅಲ್ಲ. ನಕ್ಷತ್ರ (*) ಗಳನ್ನು ದೊಡ್ಡ ಅಕ್ಷರದಂತೆ ಮುದ್ರಿಸುತ್ತತ್ತು. ಇದಕ್ಕೆ ಗಣಕ ಪರಿಭಾಷೆಯಲ್ಲಿ ASCII Art ಎಂಬ ಹೆಸರಿದೆ. ನಾವು ಈ ಪುಟವನ್ನು ಹಾಸ್ಟೆಲಿನಲ್ಲಿ ನಮ್ಮ ಕೊಠಡಿಯ ಬಾಗಿಲಿಗೆ ಅಂಟಿಸಿ ಹೆಮ್ಮೆ ಪಡುತ್ತಿದ್ದೆವು! ನಾವು ಕಂಪ್ಯೂಟರ‍್ ಪ್ರೋಗ್ರಾಂ ಮಾಡಲು ಕಾರ್ಡ್‌ಗಳನ್ನು ಬಳಸುತ್ತಿದ್ದೆವು ಅಂದಿದ್ದೆನಲ್ಲ. ಒಂದು ಸಾಲಿನಲ್ಲಿ ಒಂದು [...]
