Archive for January, 2007

ಇಲ್ಲದ ಭಾಷೆಗೆ ಎಲ್ಲವೂ ಇವೆ

Filed under: Tech related Monday, January 29th, 2007  By admin |

ಕ್ಲಿಂಗನ್ ಎಂಬ ಭಾಷೆ ಕೇಳಿದ್ದೀರಾ? ಅದು ಯಾವ ದೇಶದ್ದಿರಬಹುದು? ಈ ಭೂಮಿಯ ಮೇಲಿರುವ ಯಾವ ದೇಶದ್ದೂ ಅಲ್ಲ, ಬ್ರಹ್ಮಾಂಡದಲ್ಲಿ ಬಹುದೂರದಲ್ಲಿರುವ ಯಾವುದೋ ಕಾಲ್ಪನಿಕ ನಕ್ಷತ್ರದ ಗ್ರಹದ ಜೀವಿಗಳದ್ದು ಎಂದರೆ ನಂಬುತ್ತೀರಾ? ಯಾವುದೋ ಕಾಲ್ಪನಿಕ ಜೀವಿಗಳ ಭಾಷೆ ಹೀಗೆಯೇ ಇರುತ್ತದೆ ಎಂದು ಯಾರಿಗಾದರೂ ಹೇಗೆ ಗೊತ್ತಿರಲು ಸಾಧ್ಯ ಅನ್ನುತ್ತೀರಾ? ಎಲ್ಲವೂ ಸಾಧ್ಯ ಸ್ವಾಮಿ. ಸ್ಟಾರ್ ಟ್ರೆಕ್ ಎಂಬ ಟಿ.ವಿ. ಧಾರಾವಾಹಿ ನೋಡಿದ ನೆನಪಿದೆಯೇ? ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆ ಕ್ಲಿಂಗನ್. ಇದು ಶುದ್ಧ ಕಾಲ್ಪನಿಕ ಭಾಷೆ. ಅದೃಷ್ಟವಶಾತ್ ಟಿ.ವಿ. ಧಾರಾವಾಹಿಯಲ್ಲಿ ಪಾತ್ರಗಳು ಮಾತನಾಡುತ್ತಿದ್ದದ್ದು ಇಂಗ್ಲಿಷ್ ಭಾಷೆ. ಆದರೆ ಈ ಕ್ಲಿಂಗನ್ ಎಂಬ ಕಾಲ್ಪನಿಕ ಭಾಷೆಗೂ ಒಂದು ವರ್ಣಮಾಲೆ, ವ್ಯಾಕರಣ, ಲಿಪಿ ಎಲ್ಲ ಇವೆ ಎಂದರೆ ನಂಬುತ್ತೀರಾ? ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ಓದಬಹುದು.

ನಂ.1 ಆಗುವುದು ಹೇಗೆ?

Filed under: General Friday, January 26th, 2007  By admin |

ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.

ಭಾಷಾಇಂಡಿಯ ಕನ್ನಡದಲ್ಲಿ

Filed under: Tech related Thursday, January 18th, 2007  By admin |

ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ – http://www.bhashaindia.com/Patrons/PatronsHome.htm?lang=Kn. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ – http://bhashaindia.com/ForumV2/displaygroup.aspx?GroupID=5

RSS Feeds