ವಿಸ್ಟದಲ್ಲಿ ಕನ್ನಡ
Filed under: Tech related | Tuesday, November 28th, 2006 | By admin |ಮೊನ್ನೆಯಷ್ಟೆ ಮೈಕ್ರೋಸಾಫ್ಟ್‌ನವರ ಹೊಸ ಕಾರ್ಯಾಚರಣೆಯ ವ್ಯವಸ್ಥೆ ವಿಂಡೋಸ್ ವಿಸ್ಟದ ಅಂತಿಮ ಆವೃತ್ತಿಯನ್ನು ಅನುಸ್ಥಾಪಿಸಿದ್ದರು. ಅಂದರೆ ಅಂಗಡಿಗೆ ಹೋಗಿ ವಿಸ್ಟ ಕೊಂಡುಕೊಳ್ಳಬಹುದು ಎಂದುಕೊಳ್ಳಬೇಡಿ. ಅದು ಅಂತಿಮ ಬಳಕೆದಾರರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಮೈಕ್ರೋಸಾಫ್ಟ್‌ನವರು ಸದ್ದುಗದ್ದಲವಿಲ್ಲದೆ ಏನನ್ನೂ ಬಿಡುಗಡೆ ಮಾಡುವಿದಿಲ್ಲ ತಾನೆ? ನೀವು ಏನೂ ಸದ್ದುಗದ್ದಲ್ಲ ಕೇಳಿಲ್ಲವಾದ ಕಾರಣ ಇನ್ನೂ ಅದು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂದು ತೀರ್ಮಾನಕ್ಕೆ ಬರಬಹುದು. ವಿಸ್ಟದಲ್ಲಿ ಕನ್ನಡದ ಅಳವಡಿಕೆಯನ್ನು ನಾನು ಪರೀಕ್ಷಿಸಿದ್ದೇನೆ.
