Archive for September, 2006

ಸುಧಾರಿತ ತುಂಗ ಫಾಂಟ್

Filed under: Tech related Thursday, September 28th, 2006  By admin |

Corrected opentype font Tunga for Kannada is now available at Microsoft web-site for download.

ಮೈಕ್ರೋಸಾಫ್ಟ್‌ನವರು ನೀಡಿದ ತುಂಗ ಫಾಂಟ್‌ನಲ್ಲಿ ಇದ್ದ ಸಮಸ್ಯೆ ಬಗ್ಗೆ ಗೊತ್ತಿದೆ. ಅದರ ಬಗ್ಗೆ ಇಲ್ಲಿ ಮತ್ತು ಇಲ್ಲಿ ಓದಬಹುದು. ಸುಧಾರಿತ ತುಂಗ ಫಾಂಟ್ ಈಗ ಅಂತರಜಾಲದಲ್ಲಿ ಅಧಿಕೃತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಅದನ್ನು ಪಡೆಯಬೇಕಾದರೆ ಈ ಅಪ್‌ಡೇಟನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇಲ್ಲಿ ನೀಡಿರುವ ಅಪ್‌ಡೇಟ್ ನಿಜವಾಗಿ ಇರುವುದು ನೇಪಾಳಿ, ಪಾಶ್ತೋ, ಪಿಲಿಪಿನೋ ಮತ್ತು ಇತರೆ ಕೆಲವು ಭಾಷೆಗಳನ್ನು ವಿಂಡೋಸ್ ಎಕ್ಸ್‌ಪಿಗೆ ಅಳವಡಿಸಲು. ಕನ್ನಡ ಭಾಷೆಯ ಸುಧಾರಿತ ತುಂಗ ಫಾಂಟ್ ಇವುಗಳ ಜೊತೆ ಸೇರಿಕೊಂಡಿದೆ ಎಂದು ತಿಳಿಯಬೇಕಾದರೆ ಈ ಡೌನ್‌ಲೋಡ್ ಬಗ್ಗೆ ಕೊಟ್ಟ ವಿವರವನ್ನು ಓದಬೇಕು. ಈ ವಿವರದಲ್ಲಿ ಕೊಟ್ಟಿರುವ ಫೈಲುಗಳ ಪಟ್ಟಿಯಲ್ಲಿ ತುಂಗ ಫಾಂಟ್ ಕೂಡ ಇದೆ.

ಯುಎಸ್‌ಬಿ ಬ್ಯಾಟರಿ

Filed under: Tech related Thursday, September 21st, 2006  By admin |

ಯಾಕೋ, ಈ ಯುಎಸ್‌ಬಿ ಸಾಧನಗಳ ಬಗ್ಗೆ ಎಷ್ಟು ಬರೆದರೂ ಸಾಲುವುದಿಲ್ಲ. ಯುಎಸ್‌ಬಿ ಸಾಧನಗಳ ಬಗ್ಗೆ ದೀರ್ಘವಾದ ಲೇಖನ ಬರೆದಿದ್ದೆ.

ಉಷಾಕಿರಣದ ದಿವ್ಯಮರಣ

Filed under: General Thursday, September 7th, 2006  By admin |

ವಿಆರ್‌ಎಲ್ ಗ್ರೂಪ್‌ನ ಪತ್ರಿಕೆಗಳನ್ನು ಟೈಂಸ್ ಆಫ್ ಇಂಡಿಯಾದವರು ಕೊಂಡುಕೊಂಡ ಸುದ್ದಿ ನಿಮಗೆಲ್ಲ ಗೊತ್ತೇ ಇರಬೇಕು. ಈ ಗುಂಪಿನ ಪತ್ರಿಕೆಗಳೆಂದರೆ ವಿಜಯ ಕರ್ನಾಟಕ, ವಿಜಯ ಟೈಂಸ್ ಮತ್ತು ಉಷಾಕಿರಣ. ಈ ಪತ್ರಿಕೆಗಳನ್ನು ಟೈಂಸ್‌‌ನವರು ಕೊಂಡುಕೊಂಡ ಸುದ್ದಿ ಹೊರಬರುತ್ತಿದ್ದಂತೆ ಜನರಾಡಿಕೊಂಡುದೇನೆಂದರೆ ವಿಜಯ ಟೈಂಸ್ ಮತ್ತು ಉಷಾಕಿರಣಗಳ ಗತಿ ಮುಗಿಯಿತು ಎಂದು. ಟೈಂಸ್‌ನವರಿಗೆ ಒಂದಕ್ಕಿಂತ ಹೆಚ್ಚು ಕನ್ನಡ ಪತ್ರಿಕೆ ಬೇಡ. ಆದುದರಿಂದ ಉಷಾಕಿರಣ ಬೇಡ. ಇಂಗ್ಲೀಶ್ ಪತ್ರಿಕೆಯಂತೂ ತಮ್ಮದೇ ಇದೆಯಲ್ಲ. ಹಾಗಾಗಿ ವಿಜಯ ಟೈಂಸೂ ಬೇಡ. ಉಳಿಯುವುದು ವಿಜಯ ಕರ್ನಾಟಕ ಮಾತ್ರ ಎಂದು ಎಲ್ಲರೂ ಆಡಿಕೊಂಡರು. ಆದರೆ ಕೂಡಲೇ ಹಾಗೇನೂ ಆಗಲಿಲ್ಲ.

ತಂಪಾಸನ !

Filed under: Tech related Friday, September 1st, 2006  By admin |

ಚಿತ್ರವಿಚಿತ್ರ ಯುಎಸ್‌ಬಿ ಸಾಧನಗಳ ಬಗ್ಗೆ ಹಿಂದೊಮ್ಮೆ ಸುದೀರ್ಘವಾದ ಲೇಖನವನ್ನೇ ಬರೆದಿದ್ದೆ. ಈಗ ಅವುಗಳ ಸಾಲಿಗೆ ಒಂದೆರಡು ಹೊಸದು ಸೇರ್ಪಡೆಯಾಗಿವೆ. ಮೊದಲನೆಯದಾಗಿ ಹವಾನಿಯಂತ್ರಿತ ಅಂಗಿ ಅಥವಾ ಜಾಕೆಟ್. ನಿಮ್ಮ ಕಚೇರಿಯಲ್ಲಿ ಹವಾನಿಯಂತ್ರಣ ಇಲ್ಲವೇ? ಚಿಂತೆ ಮಾಡಬೇಡಿ. ಗಣಕ (ಕಂಪ್ಯೂಟರ್) ಅಂತೂ ಇದ್ದೇ ಇದೆ ತಾನೆ? ನಾಲ್ಕೈದು ವರ್ಷಗಳ ಈಚೆಗೆ ತಯಾರಾದ ಎಲ್ಲ ಗಣಕಗಳಲ್ಲಿ ಯುಎಸ್‌ಬಿ ಕಿಂಡಿ (ಪೋರ್ಟ್‌) ಇದ್ದೇ ಇದೆ. ಇನ್ನೇನಾಗಬೇಕು. ಈ ಜಾಕೆಟ್ ಕೊಂಡು ಯುಎಸ್‌ಬಿ ಕಿಂಡಿಗೆ ಲಗತ್ತಿಸಿ ತಂಪಾಗಿರಿ.

RSS Feeds