Archive for July, 2006

ಲ್ಯಾಪ್‌ಟಾಪ್‌ಗೆ ಒದ್ದು ಕೆಲಸ ಮಾಡಿಸಿಕೊಳ್ಳಿ

Filed under: Tech related Monday, July 31st, 2006  By admin |

ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಗಳ ವ್ಯತ್ಯಾಸವನ್ನು ವಿವರಿಸುವಾಗ ನಾನು ಸ್ವಲ್ಪ ಹಾಸ್ಯಮಯವಾಗಿ ಈ ರೀತಿ ಹೇಳುತ್ತಿದ್ದೆ -”ತಂತ್ರಾಂಶವೆಂದರೆ ಕಣ್ಣಿಗೆ ಕಾಣಿಸದ್ದು. ಯಂತ್ರಾಂಶವೆಂದರೆ ಕಣ್ಣಿಗೆ ಕಾಣಿಸುವಂತದ್ದು. ನಿಮಗೆ ನಿಮ್ಮ ಗಣಕದ ಮೇಲೆ ಕೋಪ ಬಂದರೆ, ಯಂತ್ರಾಂಶವನ್ನು ಅಂದರೆ ಕಣ್ಣಿಗೆ ಕಾಣಿಸುವ ಗಣಕದ ಭಾಗಗಳನ್ನು, ಸಿಟ್ಟಿನಿಂದ ಒದೆಯಬಹುದು”. ಈಗ ಬಂದ ಸುದ್ದಿಯಂತೆ ಇನ್ನು ಮುಂದೆ ನೀವು ಲ್ಯಾಪ್‌ಟಾಪ್‌ಗಳನ್ನು ಒದ್ದು ಕೆಲಸ ಮಾಡಿಸಿಕೊಳ್ಳಬಹುದು. ಐಬಿಎಂನವರು ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಅದರ ಪ್ರಕಾರ ಲ್ಯಾಪ್‌ಟಾಪ್‌ಗಳನ್ನು ಕುಟ್ಟುವ ಮೂಲಕ ಅದಕ್ಕೆ ಆದೇಶ ನೀಡಬಹುದು. ಧ್ವನಿ ಮೂಲಕ ಆದೇಶ ನೀಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಕುಟ್ಟುವ ಮೂಲಕ ಆದೇಶ ನೀಡುವುದು ಹೊಸತು. ಹಾಗೆಂದು ಯಾವುದೇ ಲ್ಯಾಪ್‌ಟಾಪ್‌ನ್ನು ಕುಟ್ಟುವ ಮೂಲಕ ಆದೇಶ ನೀಡುವ ಹಾಗಿಲ್ಲ. ಮೂರು ವರ್ಷಗಳ ಈಚೆಗೆ ತಯಾರಾಗಿರುವ ಐಬಿಎಂ (ಈಗ ಲೆನೋವಾ) ಲ್ಯಾಪ್‌ಟಾಪ್‌ಗಳಲ್ಲಿ ಅಲುಗಾಡುವಿಕೆಯನ್ನು ಅರ್ಥಮಾಡಿಕೊಳ್ಳಬಲ್ಲ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರಿಯಾಗಿ ಐಬಿಎಂನವರು ಈಗ ಹೊಸದಾಗಿ ತಯಾರಿಸಿರುವ ತಂತ್ರಾಂಶವನ್ನು ಅಳವಡಿಸಕೊಳ್ಳುವ ಮೂಲಕ “ಕುಟ್ಟುವ” ಆದೇಶ ನೀಡಬಹುದು. ಒಂದು ಸಲ ಕುಟ್ಟಿದರೆ (ಒದ್ದರೆ ಎಂದು ನಾನು ಹೇಳಿದ್ದು ಉತ್ಪ್ರೇಕ್ಷೆಗಾಗಿ ಮಾತ್ರ) ಗಣಕ ಚಾಲೂ, ಎರಡು ಸಲ ಕುಟ್ಟಿದರೆ ಬಂದ್, ಹೀಗೆ ಆದೇಶಗಳನ್ನು ನೀವು ಗ್ರಾಹಕೀಯಗೊಳಿಸಿಕೊಳ್ಳಬಹುದು. ಇನ್ನು ಮುಂದೆ “ಕಂಪ್ಯೂಟರ್‌ಗೆ ಒದೆಯೋಣ ಎನ್ನುವಷ್ಟು ಸಿಟ್ಟು ಬಂತು” ಎಂದು ಹೇಳುವಾಗ ಎಚ್ಚರವಿರಲಿ.

Microsoft beats Google

Filed under: Tech related Thursday, July 27th, 2006  By admin |

People always tend to compare Google with Microsoft and pronounce that Google’s technologies are always superior to that of Microsoft’s. For instance, the comparison of the results from Google’s search with that of search.msn.com (by Microsoft). But I have a different story to tell. A fellow MVP, [http://www.microsoft.com/india/mvp/indiamvp.aspx#VeerJiWangoo|Veer Ji Wangoo], pointed me at [http://local.live.com|local.live.com] from Microsoft. I opened it and tried to search some driving directions in Karnataka, India. I searched for the driving directions from Bangalore, India to some small towns like Subrahmanya, Tirthahalli, Karkala, etc. And lo, it gave the directions perfectly. Of course, it is not able to provide the directions for smaller towns and villages. I tried the same thing in local.google.com. It failed miserably. There is no India specific web-site from Google like local.google.co.in. The award goes to Microsoft.

ಗೂಗ್ಲ್‌ನಲ್ಲಿ ಕಂಡಂತೆ ಸಂಡೂರಿನ ಗಣಿಗಾರಿಕೆ

Filed under: General Tuesday, July 25th, 2006  By admin |

ಸಂಡೂರಿನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬದ್ಧವಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸುತ್ತಿವೆ. ಹಣದ ವ್ಯವಹಾರ, ಲಂಚದ ಸುದ್ದಿ ಕರ್ನಾಟಕದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿವೆ. ಈ ಸಂದರ್ಭದಲ್ಲಿ ನಾನು ಸುಮ್ಮನೆ ಗೂಗ್ಲ್ ಅರ್ಥ್‌ನಲ್ಲಿ ಸಂಡೂರು ಸುತ್ತಮುತ್ತ ಹೇಗೆ ಕಾಣಿಸುತ್ತಿದೆ ಎಂದು ನೋಡಿದೆ. ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಭೂದೇವಿಯ ಮೇಲಿನ ಅತ್ಯಾಚಾರಕ್ಕೆ ಪ್ರತ್ಯೇಕ ಸಾಕ್ಷಿ ಬೇಕಾಗಿಲ್ಲ ತಾನೆ? ಈ ಚಿತ್ರಗಳು ಸುಮಾರು ಒಂದು ವರ್ಷದಷ್ಟು ಹಳೆಯವಿರಬೇಕು ಎಂದು ನನ್ನ ಅಂದಾಜು. ಗೂಗ್ಲ್ ಅರ್ಥ್‌ನ ಎಲ್ಲ ಚಿತ್ರಗಳು ಸುಮಾರು ಆರು ತಿಂಗಳಿನಿಂದ ಒಂದು ವರ್ಷದಷ್ಟು ಹಳೆಯವಿವೆ. ಅಂತೆಯೇ ಈ ಚಿತ್ರಗಳು ಸ್ವಲ್ಪ ಹಳೆಯವಿರಬೇಕು. ಈ ಚಿತ್ರಗಳಲ್ಲಿ ಬೇಕೆಂದೇ ಸ್ವಲ್ಪ ಕಾಡು ಕೂಡ ಬರುವಂತೆ ನಾನು ವಿನ್ಯಾಸ ಮಾಡಿದ್ದೇನೆ. ಕಾಡು ಇರುವ ಮತ್ತು ಇಲ್ಲದ ಜಾಗಗಳನ್ನು ಹೋಲಿಸಿ ನೋಡಿ. ಕಾಡು ಯಾವ ರೀತಿ ನಾಶವಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಒಂದು ವರ್ಷದ ನಂತರ ಇನ್ನೊಮ್ಮೆ ಇದೇ ಜಾಗದ ಚಿತ್ರಗಳನ್ನು ತೆಗೆದರೆ ಇನ್ನೆಷ್ಟು ಪರಿಸರ ನಾಶವಾಗಿದೆ ಎಂದು ಹೋಲಿಸಿ ನೋಡಬಹುದು.

ಪುತ್ರಿಯರ ದಿನ

Filed under: General Monday, July 3rd, 2006  By admin |

ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -”ಪುತ್ರಿಯರ ದಿನ”. ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: , ). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು “ಹೋಂವರ್ಕ್‌” ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-

RSS Feeds