Archive for January, 2006

Malayalam transliteration tool from Microsoft

Filed under: Tech related Sunday, January 29th, 2006  By admin |

Microsoft has released a transliteration tool. It can transliterate between many languages. From Indian point of view, I noticed that it can do these transliterations – “Malayalam to Romanization” and “Romanization to Malayalam”. I downloaded it, installed and tested. I typed “pavanaja” in English letters and it converted it to Malayalam correctly as പവനജ. I hope very soon Microsoft will update the tool to include other Indic scripts. I wish they also relase the source code. Interested people can read more about it and download the tool from here.

ಜನೋಪಯೋಗಿ ಮತ್ತು ನಿರುಪಯೋಗಿ ಸಾಹಿತ್ಯ

Filed under: General Wednesday, January 18th, 2006  By admin |

ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತಿದೆ. ಮತ್ತೊಮ್ಮೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಾಗುವ ಗೋಷ್ಠಿಗಳನ್ನು ವರ್ಷಗಳಿಂದ ಗಮನಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಜರುಗಿದ ಸಮ್ಮೇಳನವನ್ನು ಹೊರತುಪಡಿಸಿದರೆ ಬೇರೆ ಯಾವ ಸಮ್ಮೇಳನದಲ್ಲೂ “ವಿಷಯ ಸಾಹಿತ್ಯ”ದ ಬಗ್ಗೆ ಯಾವುದೇ ಗೋಷ್ಠಿ ಇರಲಿಲ್ಲ. ಬಹುತೇಕ ಸಾಹಿತಿಗಳು ಬಳಸುವ “ಸೃಜನೇತರ ಸಾಹಿತ್ಯ” ಎಂಬ ಪದಕ್ಕೆ ಪರ್ಯಾಯವಾಗಿ ನಾನು ಇಲ್ಲಿ ವಿಷಯ ಸಾಹಿತ್ಯ ಎಂಬ ಪದವನ್ನು ಬಳಸಿದ್ದೇನೆ. ಹಾಗೆ ನೋಡಿದರೆ ಈ ಪದ ನನ್ನದೇನೂ ಅಲ್ಲ. ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಂ ಅವರು ಈ ಪದವನ್ನು ಎಂದೋ ಬಳಸಿದ್ದಾರೆ.

ಎಸ್ ಎಲ್ ಭೈರಪ್ಪನವರಿಗೆ ಅಭಿನಂದನೆಗಳು

Filed under: General Thursday, January 12th, 2006  By admin |

ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರಿಗೆ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಭೈರಪ್ಪನವರಿಗೆ ನನ್ನ ಅಭಿನಂದನೆಗಳು. ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನು ಕನಿಷ್ಠ ಒಂದು ಬಾರಿ ಓದಿದ್ದೇನೆ. ಪರ್ವ, ಧರ್ಮಶ್ರೀ, ವಂಶವೃಕ್ಷ, ಮತ್ತು ಇನ್ನೂ ಕೆಲವನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅದು ಆದಷ್ಟು ಬೇಗನೇ ಅವರಿಗೆ ಬರಲಿ ಎಂದು ಆಶಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲದೆ ಅವರ ಆತ್ಮ ಚರಿತ್ರೆ “ಭಿತ್ತಿ”ಯನ್ನೂ ನಾನು ಓದಿದ್ದೇನೆ. ಅದರಲ್ಲಿ ಮತ್ತೆ ಮತ್ತೆ ಬರುವ ಒಂದು ಸಾಲು ನನಗೆ ಚೆನ್ನಾಗಿ ನೆನಪಿದೆ -”ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊಳ್ಳಬೇಕು”. ನನಗೆ ಈ ಸಾಲು ಕೇವಲ ನೆನಪು ಮಾತ್ರವಲ್ಲ, ಒಂದು ರೀತಿಯ ಆದರ್ಶವೂ ಹೌದು. ಅವರ ಮೇರುಕೃತಿ “ಪರ್ವ”ವನ್ನು ಎಲ್ಲರೂ ಓದಬೇಕು.

ಮದ್ಯಪಾನ ಮಾಡಿ ವಾಹನ ಚಲಿಸಬೇಡಿ -ಒಂದು ವಾರ ಮಾತ್ರ

Filed under: General Monday, January 9th, 2006  By admin |

ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ರಸ್ತೆ ಸುರಕ್ಷ ಸಪ್ತಾಹ ಆಚರಿಸಿದ್ದರು. ಅದರ ಅಂಗವಾಗಿ ಅವರು ವಿಜಯನಗರದಲ್ಲಿ ಹಾಕಿದ್ದ ಬ್ಯಾನರ್ ನೋಡಿ.

ಗೂಗ್ಲ್ ಪರ್ವತ ಪ್ರಸವ

Filed under: Tech related Sunday, January 8th, 2006  By admin |

ಗೂಗ್ಲ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿ, ಸಂಸ್ಥೆ, ಕಂಪೆನಿಗಳು ಯಾವಾಗಲೂ ಹಾಗೆಯೇ.

Communtiy UG launch of VS2005 and SQL2005

Filed under: Tech related Thursday, January 5th, 2006  By admin |

Microsoft’s latest development suite Visual Studio 2005 and the database SQL 2005 will be launched at the community usergroup(s) of Bangalore. The event is on Jan 6 & 7, 2006. More details at [http://groups.msn.com/bdotnet|http://groups.msn.com/bdotnet].

12 > 2003

Filed under: Tech related Thursday, January 5th, 2006  By admin |

Wondering how the relation shown in the title is possible? Yes. It is possible in IT world. Take the instance of Microsoft Office. Most people will be remembering MS Office from Office 97 onwards. People hardly remember versions prior to that.

ದೆಹಲಿ ವಿಮಾನ ನಿಲ್ದಾಣದಲ್ಲಿ ಸೈಬರ್ ಕೆಫೆ ಇಲ್ಲ

Filed under: General Wednesday, January 4th, 2006  By admin |

ಈ ವಿಷಯದ ಬಗ್ಗೆ ಬರೆಯಬೇಕು ಎಂದು ಹಲವು ತಿಂಗಳುಗಳಿಂದ ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಈಗಷ್ಟೆ ನಾಗೇಶ ಹಗಡೆಯವರೊಡನೆ ಮಾತನಾಡುತ್ತ ಈ ವಿಷಯ ಪ್ರಸ್ತಾಪಿಸಿದೆ.

ಪಿ. ಶೇಷಾದ್ರಿಯವರ "ಬೇರು"

Filed under: General Monday, January 2nd, 2006  By admin |

ನಿನ್ನೆ (ಜನವರಿ ೧, ೨೦೦೬) ಪಿ. ಶೇಷಾದ್ರಿಯವರ “ಬೇರು” ಚಲನಚಿತ್ರ ನೋಡಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ “ಚಿತ್ರ ತುಂಬ ಚೆನ್ನಾಗಿದೆ”. ಸರಕಾರಿ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಮಾಣಿಕ ಅಧಿಕಾರಿ ಹೇಗೆ ತಾನೂ ಎಲ್ಲರಂತಾಗುತ್ತಾನೆ ಎಂಬುದನ್ನು ಚಿತ್ರ ತುಂಬ ಚೆನ್ನಾಗಿ ಮೂಡಿಸಿದೆ. ಇಂತಹ ಚಿತ್ರ ಎಲ್ಲರಿಗೆ ನೋಡಲು ಚಿತ್ರ ಮಂದಿರಗಳಲ್ಲಿ ಸಿಗುವುದಿಲ್ಲ ಎಂಬುದು ನಿಜಕ್ಕೂ ದುಃಖದ ಸಂಗತಿ. ಇಂತಹ ಪರಿಸ್ಥಿತಿಗೆ ನಾವೆಲ್ಲರೂ ಕಾರಣ ಎಂಬುದನ್ನು ಚಿತ್ರದ ಕೊನೆಯಲ್ಲಿ ಸಂವಾದದಲ್ಲಿ ಭಾಗವಹಿಸಿದ ಶೇಷಾದ್ರಿಯವರು ಬಹಳ ಚೆನ್ನಾಗಿ ವಿವರಿಸಿದರು. “ತಬರನ ಕಥೆ” ಚಲನಚಿತ್ರ ಮತ್ತು “ನಮ್ಮೊಳಗೊಬ್ಬ ನಾಜೂಕಯ್ಯ” ನಾಟಕಗಳ ಪ್ರಭಾವ ಚಿತ್ರದಲ್ಲಿ ಗಾಢವಾಗಿದೆ. ಆದರೂ ಚಿತ್ರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. “ಬೇರು” ಎಂಬ ಶೀರ್ಷಿಕೆ ತುಂಬ ಸೂಕ್ತವಾಗಿದೆ. ನಮ್ಮ ಜನಜೀವನದಲ್ಲಿ ಬ್ರಷ್ಟಾಚಾರದ ಬೇರು ಎಷ್ಟು ಆಳವಾಗಿ ಇಳಿದಿದೆ, ಅದನ್ನು ಕಿತ್ತೆಸೆಯಲು ಯಾರಿಂದಲೂ ಅಸಾಧ್ಯ ಎಂಬುದನ್ನು ಇದು ಸಂಕೇತವಾಗಿ ಸೂಚಿಸುತ್ತದೆ. ಎಲ್ಲರೂ ನೋಡಲೇ ಬೇಕಾದ ಚಿತ್ರ. ಇದರ ಪ್ರದರ್ಶನವನ್ನು ಆಯೋಜಿಸಿದ “ಈಕವಿ” ಮತ್ತು ವಿಪ್ರೋ ಕನ್ನಡ ಬಳಗಕ್ಕೆ ಧನ್ಯವಾದಗಳು.

Happy New Year 2006

Filed under: General Sunday, January 1st, 2006  By admin |

I would like to wish a very happy and prosperous new year to the readers of Vishva Kannada. A lot of time was spent in re-installing all the software in my PC. Then again I had to reformat the system and again re-install everything. I will write why I had to do all these in a separate article. Till then, happy times.

RSS Feeds