Archive for December, 2005

ನಾನು ಪ್ರತಿಭಾನ್ವಿತನಲ್ಲ !

Filed under: General Sunday, December 25th, 2005  By admin |

ಕನ್ನಡಪ್ರಭ ಪತ್ರಿಕೆಯಲ್ಲಿ ಖ್ಯಾತ ವಿಜ್ಞಾನ ಲೇಖಕರು ಹಾಗೂ ಅತ್ಮೀಯರೂ ಆದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಅಂಕಣ ಪ್ರತಿ ಭಾನುವಾರ ಇದೆ. ಇಂದಿನ ಅಂಕಣದಲ್ಲಿ ಆವರು ಬರೆಯುತ್ತಾರೆ -”ಭಾರತದ ಎಲ್ಲ ಪ್ರತಿಭಾನ್ವಿತರಂತೆ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಉಳಿದು ಮತ್ತಷ್ಟು ಕೀರ್ತಿ ಸಂಪಾದಿಸಿದವ”. ಇಲ್ಲಿ ಅವರು ಹೇಳುತ್ತಿರುವುದು ಅಮೇರಿಕಾದಲ್ಲಿರುವ ಒಬ್ಬ ಭಾರತೀಯ ಸಂಜಾತ ವಿಜ್ಞಾನಿಯ ಬಗ್ಗೆ. ಸುಧೀಂದ್ರರ ಪ್ರಕಾರ ಅಮೇರಿಕಾಕ್ಕೆ ತೆರಳದೆ ಇಲ್ಲೇ ಉಳಿದಿರುವ ನಾವು ಯಾರೂ ಪ್ರತಿಭಾನ್ವಿತರಲ್ಲ.

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

Filed under: Tech related Saturday, December 24th, 2005  By admin |

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಅದಕ್ಕೆ ಪ್ರತಿಕ್ರಿಯೆಯಾಗಿ ಚ. ಹ. ರಘುನಾಥ ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ರಘುನಾಥ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಕನ್ನಡದಲ್ಲಿ ಇನ್ನೂ ಹಲವಾರು ರೀತಿಯ ಕೀಲಿಮಣೆಗಳು ಚಾಲ್ತಿಯಲ್ಲಿರುವುದನ್ನು ಪ್ರಸ್ತಾಪಿಸಿದರು. ಹಾಗೆಯೇ ಹಲವರು ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನು ಬರೆದು (ಟೈಪಿಸಿ) ಇಮೈಲ್ ಮಾಡುವುದನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನು ಕಲಿಯುವುದು ಒಂದು ಹೆಚ್ಚಿನ ಕೆಲಸ. ನಾನು ಕೇಳುತ್ತೇನೆ -”ನೀವು ಹುಟ್ಟುವಾಗ ಇಂಗ್ಲಿಶ್ ಕೀಲಿಮಣೆಯನ್ನು ಕಲಿತುಕೊಂಡೇ ಹುಟ್ಟಿ ಬಂದಿರೇ? ಇಂಗ್ಲಿಶ್ ಕೀಲಿಮಣೆ ಕಲಿಯುವುದು ನಿಮಗೆ ಕಷ್ಟವಾಗಲಿಲ್ಲ. ಅದು ಒಂದು ಹೆಚ್ಚಿನ ಕೆಲಸವಾಗಲಿಲ್ಲ. ಕನ್ನಡದ ಕೀಲಿಮಣೆ ಕಲಿಯುವುದು ಮಾತ್ರ ಯಾಕೆ ಹೆಚ್ಚಿನ ತೊಂದರೆಯ ಕೆಲಸ ಎಂದೆನಿಸುತ್ತದೆ?”. ರಘುನಾಥ ಅವರ ಮಾತುಗಳಿಗೆ ನನ್ನ ವಿಶೇಷವಾದ ಅಡ್ಡಿಯೇನಿಲ್ಲ.

ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

Filed under: General Friday, December 23rd, 2005  By admin |

ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.

Yet Another Usergroup

Filed under: Tech related Sunday, December 18th, 2005  By admin |

Yesterday, Biztalk Usergroup India, was launched at Bangalore. Bangalore is home to many usergroups -Bangalore Dot Net, Bangalore IT Pro, Embedded, etc. And of course, there are usergroups related to opensource, Linux, Java, etc. Biztalk is the application integrator from Microsoft. The new usergroup has its own place on the web -groups.msn.com/bug-i. Someone asked why it is called boogie. Another person asked why it is not Bangalore Biztalk usergruop just like Bangalore dotnet usergroup.

ವೆಂಕಟಸುಬ್ಬಯ್ಯನವರಿಗೆ ಅಭಿನಂದನೆಗಳು

Filed under: General Saturday, December 17th, 2005  By admin |

“ಇಗೋ ಕನ್ನಡ” ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.

ಇಲಿ ಹಿಡಿಯುವುದು ಮತ್ತು ಕೊಲ್ಲುವುದು

Filed under: General Sunday, December 11th, 2005  By admin |

ಮೊನ್ನೆ ನಮ್ಮ ಮನೆಯ ಒಳಗೊಂದು ಇಲಿ ಬಂದಿತ್ತು. ಬಂದ ಮೇಲೆ ಅದನ್ನು ಸುಮ್ಮನೆ ಬಿಡಲಿಕ್ಕಾಗುತ್ತದೆಯೇ? ಸರಿ.

ಟಾಯ್ಲೆಟ್ ಪೇಪರ್‌ನಲ್ಲಿ ಸುದ್ದಿ ಮುದ್ರಣ!

Filed under: Tech related Saturday, December 10th, 2005  By admin |

ತೈವಾನ್‌ನ ಕಂಪೆನಿಯೊಂದು ಟಾಯ್ಲೆಟ್ ಪೇಪರ್‌ನಲ್ಲಿ ಇತ್ತೀಚೆಗಿನ ಸುದ್ದಿಗಳನ್ನು ಮುದ್ರಿಸುವ ಮುದ್ರಕವೊಂದನ್ನು ಆವಿಷ್ಕರಿಸಿರುವುದಾಗಿ ಸುದ್ದಿ ಬಂದಿದೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಸುದ್ದಿ ಮಾತ್ರ ಸ್ವಾರಸ್ಯಕರವಾಗಿದೆ. ಅದರ ಪ್ರಕಾರ ಅಂತರಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ನೀಡುವ RSS ವಿಧಾನದ ಮೂಲಕ, ಅಂದರೆ RSS feedಗಳ ಮೂಲಕ ಸುದ್ದಿಗಳನ್ನು ಟಾಯ್ಲೆಟ್ ಪೇಪರ್‌ನಲ್ಲಿ ಮುದ್ರಿಸಿ ಕೊಡುವ ಕೆಲಸವನ್ನು ಈ ಮುದ್ರಕ ಮಾಡುತ್ತದೆ. ಟಾಯ್ಲೆಟ್ ಪೇಪರ್‌ನ್ನು ಬಳಸುವ ಮೊದಲು ಇದು ಮುದ್ರಿಸುತ್ತದೆ, ನಂತರ ಅಲ್ಲ :) . ಕಮೋಡ್‌ನಲ್ಲಿ ಕುಳಿತವರನ್ನು ಬಯೋಮೆಟ್ರಿಕ್ಸ್ ವಿಧಾನದ ಮೂಲಕ ಪತ್ತೆಹಚ್ಚಿ ಕುಳಿತವರ ಆಸಕ್ತಿ ಪ್ರಕಾರದ ಸುದ್ದಿಗಳನ್ನೇ ಇದು ಮುದ್ರಿಸಿ ಕೊಡುತ್ತದಂತೆ. ಈಗಿನ ದಿನಗಳಲ್ಲಿ ಮುಖ್ಯವಾಹಿನಿಯ ಸುದ್ದಿ ಪತ್ರಿಕೆಗಳಲ್ಲಿ ಬಹುಜನರಿಗೆ ನಂಬಿಕೆಯೇ ಹೊರಟು ಹೋಗಿದೆ. ಕೆಲವರಂತೂ ಈ ಪತ್ರಿಕೆಗಳನ್ನು ಚಿಂದಿ ಮಾಡಲೆಂದೇ ಜಾಲತಾಣ ನಿರ್ಮಾಣ ಮಾಡಿದ್ದಾರೆ. ಇದು ಒಂದು ತಾಣದ ಉದಾಹರಣೆಯಷ್ಟೆ. ಇಂತಹ ತಾಣಗಳು ಹಲವಾರಿವೆ. ಜನರು ಪತ್ರಿಕೆಗಳ ಬಗ್ಗೆ ಎಷ್ಟು ರೋಸಿಹೋಗಿದ್ದಾರೆ ಎಂಬುದಕ್ಕೆ ಈ ತಾಣಗಳು ಸಾಕ್ಷಿ.

ನಾಯಿಗೂ ಮೊಬೈಲ್ ಫೋನ್

Filed under: Tech related Tuesday, December 6th, 2005  By admin |

ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು. ಅದರ ಪ್ರಕಾರ ನಾಯಿಗಳಿಗೆಂದೇ ವಿಶೇಷ ಮೊಬೈಲ್ ಫೋನ್ ತಯಾರಿಸುತ್ತಿದ್ದಾರೆ. ಅದರ ಯಜಮಾನ ತನ್ನ ಫೋನಿನಿಂದ ಗುಪ್ತ ಸಂಕೇತ ಕಳುಹಿಸಿದಾಗ ಅದು ಚಾಲೂ ಆಗಿ ದ್ವಿಮುಖ ಸಂಭಾಷಣೆ ಪ್ರಾರಂಭಿಸುತ್ತದೆ. ಯಜಮಾನನ ಮಾತು ನಾಯಿಗೆ ಕೇಳುತ್ತದೆ. ನಾಯಿಯ ಮಾತು(?!) ಯಜಮಾನನಿಗೆ ತಲುಪುತ್ತದೆ. ನಾಯಿ ಕಳೆದುಹೋದಾಗ ಪತ್ತೆಹಚ್ಚಲು ಈ ಸಾಧನ ಸಹಾಯಕಾರಿ. ಫೋನು ತಯಾರಕರು ಇನ್ನೂ ಮುಂದುವರೆದು ಈ ಫೋನಿಗೆ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸುತ್ತಿದ್ದಾರೆ. ಅಂದರೆ ಉಪಗ್ರಹ ಮತ್ತು ಅಂತರಜಾಲ ಮೂಲಕ ನಾಯಿ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಬಾಂಬು ಹಡುಕುವ ನಾಯಿಗಳ ಕುತ್ತಿಗೆಗೆ ಇದನ್ನು ಜೋತು ಹಾಕಿ ನಾಯಿಯನ್ನು ಕಳುಹಿಸಿ ದೂರದಿಂದಲೇ ನಿಯಂತ್ರಿಸಬಹುದು. ನಿಮ್ಮ ನಾಯಿಗೆ ಅದನ್ನು ಕೊಳ್ಳಲು ಆಲೋಚಿಸುತ್ತಿದ್ದೀರಾ? ಸ್ವಲ್ಪ ತಾಳಿ. ಈ ಫೋನು ೨೦೦೬ನೆಯ ಇಸವಿಯಲ್ಲಿ ಮಾರುಕಟ್ಟೆಗೆ ಬರಲಿದೆ. ಅಲ್ಲಿ ತನಕ ಕಾಯಬೇಕು.

Localized Ferrari

Filed under: Tech related Monday, December 5th, 2005  By admin |

How about a localized Ferrari?

Take a look at the following picture-

For the un-initiated -kn-IN is the locale ID for Kannada. 1099 is the LCID assigned to Kannada by Microsoft.

Firefox named product of the year

Filed under: Tech related Sunday, December 4th, 2005  By admin |

PCWorld has named Mozilla Firefox as the prodcut of the year. First time after Microsoft lanuched Internet Explorer in 1995, it is now losing the market. What is so great about Firefox? According to the review of PCWorld site it is the security and tabbed browsing. IE7 also has tabbed browsing but it is still in beta. It also has RSS reader built-in, better protection against phishing etc. Fine. I am not a great expert to evaluate feature-by-feature in these areas. But I definitely can comment on areas which matters to us Indians a lot, ie., Indian language capabilities.

RSS Feeds